ಶಿಯೋಮಿ ರೆಡ್ಮಿ ಎಕ್ಸ್ ಬಿಡುಗಡೆಗೆ ದಿನಾಂಕ ಫಿಕ್ಸ್

By Gizbot Bureau
|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಶಿಯೋಮಿ ತನ್ನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ನ್ನು ರೆಡ್ಮಿ ಸರಣಿ ಫೋನ್ ಗಳಲ್ಲಿ ಬಿಡುಗಡೆಗೊಳಿಸುವುದಕ್ಕೆ ಸಜ್ಜಾಗಿದೆ. ಮೇ 14 ರಂದು ಚೀನಾದಲ್ಲಿ ರೆಡ್ಮಿ ಎಕ್ಸ್ ನ್ನು ಬಿಡುಗಡೆಗೊಳಿಸುವುದಕ್ಕೆ ನಿರ್ಧರಿಸಿದೆ. ಈ ಸ್ಮಾರ್ಟ್ ಫೋನ್ ಬಗ್ಗೆ ಮಾತನಾಡಿರುವ ರೆಡ್ಮಿಯ ಜನರಲ್ ಮ್ಯಾನೇರ್ ಲು ವೈಬಿಂಗ್ ರೆಡ್ಮಿ ಎಕ್ಸ್ ಕ್ವಾಲ್ಕಂ ನ ಹೆಚ್ಚು ಶಕ್ತಿಶಾಲಿಯಾಗಿರುವ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ನಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ.

ಅತೀ ಕಡಿಮೆ ಬೆಲೆಯ ಸ್ನ್ಯಾಪ್ ಡ್ರ್ಯಾಗನ್ 855 ಇರುವ ಫೋನ್:

ಅತೀ ಕಡಿಮೆ ಬೆಲೆಯ ಸ್ನ್ಯಾಪ್ ಡ್ರ್ಯಾಗನ್ 855 ಇರುವ ಫೋನ್:

ಸ್ನ್ಯಾಪ್ ಡ್ರ್ಯಾಗನ್ 855 ನಲ್ಲಿರುವ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ರೆಡ್ಮಿ ಎಕ್ಸ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಪೋಕೋ ಸರಣಿಯ ಅಡಿಯಲ್ಲಿ ಇದೇ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಕಂಪೆನಿಯು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.ವೈಬಿಂಗ್ ತಿಳಿಸಿರುವಂತೆ ಸ್ಮಾರ್ಟ್ ಫೋನಿಗೆ ಹೊಸ ಹೆಸರಿರುತ್ತದೆ ಮತ್ತು ಅದು ರೆಡ್ಮಿ ಎಕ್ಸ್ ಎಂದು ಆಗಿಲ್ಲದೇ ಇರುವ ಸಾಧ್ಯತೆ ಇದೆ.

ಮೆಮೊರಿ ಮತ್ತು ಕ್ಯಾಮರಾ ವ್ಯವಸ್ಥೆ:

ಮೆಮೊರಿ ಮತ್ತು ಕ್ಯಾಮರಾ ವ್ಯವಸ್ಥೆ:

ಶಿಯೋಮಿ ರೆಡ್ಮಿ ಎಕ್ಸ್ ಪಾಪ್ ಅಪ್ ಸೆಲ್ಫೀ ಕ್ಯಾಮರಾವನ್ನು ಹೊಂದಿರುತ್ತದೆ. ಈ ಡಿವೈಸ್ ನಲ್ಲಿ 8GB RAM ಮತ್ತು128GB ಇಂಟರ್ನಲ್ ಮೆಮೊರಿ ವ್ಯವಸ್ಥೆ ಇರುತ್ತದೆ. ಈ ಹ್ಯಾಂಡ್ ಸೆಟ್ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ ಜೊತೆಗೆ ಕಂಪೆನಿಯ ಸ್ವಂತ ಕಸ್ಟಮೈಸೇಷನ್ MIUI10ನ್ನು ಹೊಂದಿರುತ್ತದೆ.

ಟ್ರಿಪಲ್ ಹಿಂಭಾಗದ ಕ್ಯಾಮರಾ:

ಟ್ರಿಪಲ್ ಹಿಂಭಾಗದ ಕ್ಯಾಮರಾ:

ಈ ಸ್ಮಾರ್ಟ್ ಫೋನಿನಲ್ಲಿ ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದ್ದು ಪ್ರಮುಖ ಸೆನ್ಸರ್ 48ಎಂಪಿ ಸಾಮರ್ಥ್ಯದ್ದಾಗಿರುತ್ತದೆ. ಸೆಕೆಂಡರಿ ಕ್ಯಾಮರಾವು 8ಎಂಪಿ ಮತ್ತು ಮೂರನೇ ಸೆನ್ಸರ್ 13ಎಂಪಿ ಸಾಮರ್ಥ್ಯವನ್ನು ಹೊಂದಿರುತ್ತದೆ.ಈ ಸ್ಮಾರ್ಟ್ ಫೋನ್ 6.39-ಇಂಚಿನ ಫುಲ್ HD+ ಡಿಸ್ಪ್ಲೇ ಹೊಂದಿದ್ದು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ನ್ನು ಒಳಗೊಂಡಿರುತ್ತದೆ.

ಒನ್ ಪ್ಲಸ್ 7 ಗೆ ಸ್ಪರ್ಧೆ:

ಒನ್ ಪ್ಲಸ್ 7 ಗೆ ಸ್ಪರ್ಧೆ:

ಶಿಯೋಮಿ ರೆಡ್ಮಿ ಎಕ್ಸ್ ಒನ್ ಪ್ಲಸ್ 7 ಪ್ರೊ ಗೆ ಸ್ಪರ್ಧೆಯೊಡ್ಡುವ ಸಾಧ್ಯತೆ ಇದ್ದು ಒನ್ ಪ್ಲಸ್ 7 ಪ್ರೋ ಕೂಡ ಮೇ 14 ರಂದು ಬಿಡುಗಡೆಗೊಳ್ಳುತ್ತಿದೆ.

ಇತ್ತೀಚೆಗೆ ಬಿಡುಗಡೆಗೊಂಡ ಫೋನ್ ಗಳು:

ಇತ್ತೀಚೆಗೆ ಬಿಡುಗಡೆಗೊಂಡ ಫೋನ್ ಗಳು:

ಕಳೆದ ತಿಂಗಳು ಶಿಯೋಮಿ ಎರಡು ಹೊಸ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ ಅದುವೇ ರೆಡ್ಮಿ ವೈ3 ಮತ್ತು ರಡ್ಮಿ 7.ಶಿಯೋಮಿ ರೆಡ್ಮಿ ವೈ3 ಆರಂಭಿಕ ಬೆಲೆ ರುಪಾಯಿ 9,999. ಅಂದರೆ ಇದು ಬೇಸ್ ವೇರಿಯಂಟ್ 3ಜಿಬಿ ಮೆಮೊರಿ ಮತ್ತು 32ಜಿಬಿ ಸ್ಟೋರೇಜ್ ವ್ಯವಸ್ಥೆ ಇದರಲ್ಲಿದೆ.4ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆ ಇರುವ ಫೋನಿನ ಬೆಲೆ 11,999 ರುಪಾಯಿಗಳು. ಇನ್ನೊಂದೆಡೆ ಶಿಯೋಮಿ ರೆಡ್ಮಿ 7 ಬೆಲೆ 7,999 ಮತ್ತು 8,999 ರುಪಾಯಿಗಳಾಗಿದ್ದು ಕ್ರಮವಾಗಿ ಇದು 2GB RAM+32GB ROM ಮತ್ತು 3GB RAM+32GB ROM ವ್ಯವಸ್ಥೆಯನ್ನು ಹೊಂದಿದೆ.

Best Mobiles in India

Read more about:
English summary
Xiaomi Redmi X with pop-up selfie camera to launch on May 14

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X