2017 ರಲ್ಲಿ ಬಿಡುಗಡೆಯಾಗಲಿರುವ ಶ್ಯೋಮಿ ಸ್ಮಾರ್ಟ್‌ಫೋನ್‌ಗಳು ಯಾವುವು?

Written By:

ಭಾರತದಲ್ಲಿ ಹೆಚ್ಚು ಸಕ್ಸೆಸ್ ಕಂಡ ಚೀನಾದ ಸ್ಮಾರ್ಟ್‌ಫೋನ್‌ ಕಂಪೆನಿ ಎಂದರೆ ಶ್ಯೋಮಿ ಕಂಪೆನಿ. ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಶ್ಯೋಮಿ, ಆಧುನಿಕ ಫೀಚರ್‌ಗಳನ್ನು ಹೊಂದುವಲ್ಲೂ ಸಹ ಹಿಂದೆ ಬಿದ್ದಿಲ್ಲ.

2017 ರಲ್ಲಿ ಎಲ್ಲರೂ ಬ್ಯುಸಿನೆಸ್‌ಮ್ಯಾನ್‌ ಆಗಲು ಬಹುದೊಡ್ಡ ವೇದಿಕೆ ಸೃಷ್ಟಿ!! ಏನದು?

ಇನ್ನು 2017 ರಲ್ಲಿ ಸ್ಮಾರ್ಟ್‌ಫೋನ್‌ಗಳು ಲವು ಫೀಚರ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಇವುಗಳಿಗೆ ತಕ್ಕಂತೆ ಶ್ಯೋಮಿಯೂ ಕೂಡ ನೂತನ ಫೀಚರ್‌ ಫೋನ್‌ಗಳನ್ನು ಬಿಡುಗಡೆಮಾಡುತ್ತಿದೆ.

ಇನ್ನು ಸ್ಮಾರ್ಟ್‌ಫೋನ್ ಪ್ರಪಂಚಕ್ಕೆ ಕುತೋಹಲ ಹುಟ್ಟಿಸಿರುವ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಶ್ಯೋಮಿ ಹೇಳಿಕೊಂಡಿದ್ದು, ಹಾಗಾದರೆ ಈ ವರ್ಷದಲ್ಲಿ ಶ್ಯೋಮಿ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಶ್ಯೋಮಿ ಎಂಐ 6 ( ‍Xiaomi mi6)

#1 ಶ್ಯೋಮಿ ಎಂಐ 6 ( ‍Xiaomi mi6)

ಶ್ಯೋಮಿ ಕಂಪೆನಿಯ ಮುಂದಿನ ಸರಣಿ ಸ್ಮಾರ್ಟ್‌ಫೋನ್ ಶ್ಯೋಮಿ ಎಂಐ 6 ಮಾರ್ಚ್‌ನಲ್ಲಿ ಬಿಡುಗಡೆ ಆಗುತ್ತದೆ ಎನ್ನಲಾಗಿದೆ. ತನ್ನ ಪ್ರತಿ ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಹೆಚ್ಚು ಫೀಚರ್‌ಗಳನ್ನು ನೀಡುತ್ತಿದೆ. 128GB RAM ಮತ್ತು 256GB ROM ಹೊಂದಿರುವ ಶ್ಯೋಮಿ ಎಂಐ 6 ಸ್ಮಾರ್ಟ್‌ಫೋನ್ ಮೇಲೆ ಎಲ್ಲರಿಗೂ ನರೀಕ್ಷೆ ಇದೆ.

#2 ಫ್ಲೆಕ್ಸಿಬಲ್ ಡಿಸ್‌ಪ್ಲೇ ಫೋನ್.

#2 ಫ್ಲೆಕ್ಸಿಬಲ್ ಡಿಸ್‌ಪ್ಲೇ ಫೋನ್.

ಎಲ್ಲರೂ ಕಾಯುತ್ತಿರುವ ಫ್ಲೆಕ್ಸಿಬಲ್ ಡಿಸ್‌ಪ್ಲೇ ಫೋನ್ ಬಿಡುಗಡೆ ಮಾಡುವ ಮೊದಲು ಸ್ಮಾರ್ಟ್‌ಫೋನ್‌ ಕಂಪೆನಿ ಯಾವುದು ಎಂಬುದೇ ಎಲ್ಲರಿಗೂ ಕುತೋಹಲವಾಗಿದೆ. ಇನ್ನು ಶ್ಯೋಮಿಯ ಫ್ಲೆಕ್ಸಿಬಲ್ ಡಿಸ್‌ಪ್ಲೇ ಫೋನ್ ಈ ವರ್ಷದಲ್ಲಿ ಬಿಡುಗಡೆಯಾಗಲಿದೆ.

#3 ಶ್ಯೋಮಿ ಎಂಐ 6ಎಸ್ (Xiaomi mi6s)

#3 ಶ್ಯೋಮಿ ಎಂಐ 6ಎಸ್ (Xiaomi mi6s)

2017 ರಲ್ಲಿ ಶ್ಯೋಮಿ ಕಂಪೆನಿ ಶ್ಯೋಮಿ ಎಂಐ 6 ಜೊತೆಗೆ ಎಂಐ 6ಎಸ್ ಸ್ಮಾರ್ಟ್‌ಫೋನ್‌ ಸಹ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಶ್ಯೋಮಿ ಎಂಐ 6ಗಿಂತಲೂ ಹೆಚ್ಚು ಫೀಚರ್‌ ಒಳಗೊಂಡಿರುತ್ತದೆ ಮತ್ತು ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುತ್ತದೆ.

#4 ಶ್ಯೋಮಿ ಎಂಐ 5ಸಿ (Xiaomi mi 5c)

#4 ಶ್ಯೋಮಿ ಎಂಐ 5ಸಿ (Xiaomi mi 5c)

ಶ್ಯೋಮಿ ಎಂಐ 5ಸಿ ಮೂಲಕ ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಫೀಚರ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡಗಡೆ ಮಾಡುವುದಾಗಿ ಹೇಳಿಕೊಂಡಿದೆ. 5.2 ಇಂಚ್ ಡಿಸ್‌ಪ್ಲೇ, 13 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಶ್ಯೋಮಿ ಎಂಐ 5ಸಿ ಸ್ಮಾರ್ಟ್‌ಫೋನ್‌ ಬೆಲೆ 5000 ರೂಗಳಿಗಿಂತ ಕಡಿಮೆ ಇರಲಿದೆ.

ಶ್ಯೋಮಿ ಎಂಐ ರೆಡ್‌ಮಿ 5 (Xiaomi Redmi 5)

ಶ್ಯೋಮಿ ಎಂಐ ರೆಡ್‌ಮಿ 5 (Xiaomi Redmi 5)

ಭಾರತದಲ್ಲಿ ಶ್ಯೋಮಿ ಸ್ಮಾರ್ಟ್‌ಫೋನ್‌ ಎಂದರೆ ರೆಡ್‌ಮಿ ಸ್ಮಾರ್ಟ್‌ಫೊನ್‌ ಎನ್ನುವಷ್ಟು ಹೆಸರಾದ ರೆಡ್‌ಮಿ ಸೀರಿಸ್‌ನ ನೂತನ ಸ್ಮಾರ್ಟ್‌ಪೊನ್ ಈ ವರ್ಷದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಮಾಹಿತಿ ಮೂಲಗಳ ಪ್ರಕಾರ ಶ್ಯೋಮಿ ಎಂಐ ರೆಡ್‌ಮಿ ನೊಟ್ 5 ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We expect these xiaomi phones to be launched this year.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot