ಶಿಯೋಮಿ ರೆಡ್ಮಿ ಕೆ20 ಪ್ರೋ ಹೇಗಿರುತ್ತದೆ ಗೊತ್ತಾ?

By Gizbot Bureau
|

ಶಿಯೋಮಿ ಸ್ಮಾರ್ಟ್ ಫೋನ್ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ನಿಂದ ರನ್ ಆಗುವ ಸಾಧ್ಯತೆ ಇದೆ ಎಂದು ವದಂತಿಯಾಗುತ್ತಿದೆ. ವೈಬೋ ಪೋಸ್ಟ್ ನಲ್ಲಿ ಈಗಾಗಲೇ ರೆಡ್ಮಿಯ ಜನರಲ್ ಮ್ಯಾನೇಜರ್ ಲು ವಯಬಿಂಗ್ ಅವರು ಹೊಸ ರೆಡ್ಮಿ ಸ್ಮಾರ್ಟ್ ಫೋನ್ ನ್ನು ಬಗ್ಗೆ ಕೆಲವು ಮಾಹಿತಿಗಳನ್ನು ಖಾತ್ರಿಗೊಳಿಸಿದ್ದಾರೆ. ಈ ಹಿಂದಿನ ವರದಿಗಳು ಹೇಳುವಂತೆ ಈ ಸ್ಮಾರ್ಟ್ ಫೋನ್ ನ್ನು ರೆಡ್ಮಿ ಎಕ್ಸ್ ಎಂದು ಕರೆಯಲಾಗುತ್ತದೆ.ಆದರೆ ಇದೀಗ ಇದರ ಹೆಸರು ಬೇಕೆ ಎಂದು ವದಂತಿಯಾಗುತ್ತಿದೆ.

ಹಾಗಾದ್ರೆ ಹೊಸ ಹೆಸರು ಯಾವುದು?

ಹಾಗಾದ್ರೆ ಹೊಸ ಹೆಸರು ಯಾವುದು?

ಇದೀಗ ಹೊಸದಾಗಿ ಲೀಕ್ ಆಗಿರುವ ಸುದ್ದಿಯ ಪ್ರಕಾರ ಸ್ಮಾರ್ಟ್ ಫೋನ್ ನ್ನು ರೆಡ್ಮಿ ಕೆ20 ಪ್ರೋ ಎಂದು ಕರೆಯಲಾಗುತ್ತದೆ ಎನ್ನಲಾಗುತ್ತಿದೆ. ರೆಡ್ಮಿ ಕೆ20 ಪ್ರೋ ಹೆಸರಿನಲ್ಲಿರುವ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855ರೊಂದಿಗಿನ ಒಂದು ಚಿತ್ರವು ಈಗಾಗಲೇ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿ ಈ ಹ್ಯಾಂಡ್ ಸೆಟ್ 6.39- ಇಂಚಿನ AMOLED ಸ್ಕ್ರೀನ್ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹೊಂದಿದೆ.

ಬ್ಯಾಟರಿ ಮತ್ತು ಕ್ಯಾಮರಾ:

ಬ್ಯಾಟರಿ ಮತ್ತು ಕ್ಯಾಮರಾ:

ಈ ಫೋನ್ 4,000mAh ಬ್ಯಾಟರಿಯನ್ನು ಇದು ಹೊಂದಿದೆ. ಈ ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಕ್ಯಾಮರಾ ವಿಚಾರದ ಬಗ್ಗೆ ಹೇಳುವುದಾದರೆ ರೆಡ್ಮಿ ಕೆ20 ಪ್ರೋದಲ್ಲಿ 20MP ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರಲಿದೆ.ಇದರಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್ ನ್ನು ಅಳವಡಿಸಲಾಗಿದೆ. ಆದರೆ, ಕಂಪೆನಿಯು ಇದನ್ನು ಇನ್ನೂ ಖಾತ್ರಿಪಡಿಸಿಲ್ಲ.

ಇತರೆ ಫೀಚರ್ ಗಳು:

ಇತರೆ ಫೀಚರ್ ಗಳು:

ಈ ಹಿಂದೆ ವದಂತಿಯಾಗಿರುವ ಪ್ರಕಾರ ಕ್ಯಾಮರಾ ಸೆನ್ಸರ್ ಗಳು 13ಎಂಪಿ ಸೆಕೆಂಡರಿ ಸೆನ್ಸರ್ ಮತ್ತು 8ಎಂಪಿ ಡೆಪ್ತ್ ಸೆನ್ಸರ್ ನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿತ್ತು. ಸ್ನ್ಯಾಪ್ ಡ್ರ್ಯಾಗನ್ 855 ರೆಡ್ಮಿ ಫೋನ್ ನಲ್ಲಿ 3.5 ಹೆಡ್ ಫೋನ್ ಜ್ಯಾಕ್ ಮತ್ತು ಕನೆಕ್ಟಿವಿಟಿಗಾಗಿ NFC ಇರಲಿದೆ.

ಎಂಐ ಎ3 ಸರಣಿ ಸ್ನ್ಯಾಪ್ ಡ್ರ್ಯಾಗನ್ 700 ಸಾಕೆಟ್ ನಲ್ಲಿ ಪವರ್ಡ್ ಆಗಿರುವ ಸಾಧ್ಯತೆ:

ಎಂಐ ಎ3 ಸರಣಿ ಸ್ನ್ಯಾಪ್ ಡ್ರ್ಯಾಗನ್ 700 ಸಾಕೆಟ್ ನಲ್ಲಿ ಪವರ್ಡ್ ಆಗಿರುವ ಸಾಧ್ಯತೆ:

ಶಿಯೋಮಿ ಬಹುಶ್ಯಃ ಮೂರು ಹೊಸ ಸ್ಮಾರ್ಟ್ ಫೋನ್ ಗಳನ್ನು ಎಂಐ ಸರಣಿ ಅಡಿಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.ಇದರಲ್ಲಿ ಎಂಐ ಎ3, ಎಂಐ ಎ3 ಲೈಟ್ ಮತ್ತು ಎಂಐ ಎ3 ಆಂಡ್ರಾಯ್ಡ್ ಒನ್ ಇರುತ್ತದೆ. ಇದರ ಕೋಡ್ ನೇಮ್ ಬ್ಯಾಂಬೋ- ಸ್ಪ್ರೌಟ್, ಕಾಸ್ಮೋಸ್ ಸ್ಪ್ರೌಟ್ ಮತ್ತು ಫಿಕ್ಸಿಸ್. ಇವು ಸ್ನ್ಯಾಪ್ ಡ್ರ್ಯಾಗನ್ 700 ಸಾಕೆಟ್ ನಲ್ಲಿ ಈ ಡಿವೈಸ್ ಗಳು ನಿರ್ಮಾಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಮುಂಬರುವ ಎಂಐ ಎ3 ಸರಣಿಗಳು ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುವ ಸಾಧ್ಯತೆ ಇದೆ. ಇದು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನಲ್ಲಿ ಬರುತ್ತದೆ ಎಂದು ಅಂದಾಜಿಸಲಾಗಿದೆ. 32 ಮೆಗಾ ಪಿಕ್ಸಲ್ ಮುಂಭಾಗದ ಕ್ಯಾಮರಾವನ್ನು ಇದು ಹೊಂದಿರುತ್ತದೆ.

Best Mobiles in India

English summary
Xiaomi’s next flagship smartphone Redmi K20 Pro may run on this top-end processor

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X