ನೀವು ತಿಳಿಯದ ಶ್ಯೋಮಿ ರೆಡ್ಮೀ ನೋಟ್‌ನ ಒಳಜಗತ್ತು

Posted By:

ಹೆಚ್ಚಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಸ್ಪರ್ಧೆ ಒಡ್ಡಲಿರುವ ಶ್ಯೋಮಿ ಮಾರುಕಟ್ಟೆಯಲ್ಲಿ ಬಿರುಸಿನ ಸ್ಪರ್ಧೆಗೆ ಇಳಿದಿದೆ. ಚೀನಾದ ಆಪಲ್ ಎಂದೇ ಹೆಸರುವಾಸಿಯಾಗಿರುವ ಈ ಸ್ಮಾರ್ಟ್‌ಫೋನ್ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ರೀಟೈಲ್‌ಗಳಲ್ಲಿ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

[ಇದನ್ನೂ ಓದಿ: ಶ್ಯೋಮಿ ರೆಡ್ಮೀ ನೋಟ್ ಕಮಾಲು ಆಪಲ್ 6 ನಲ್ಲಿಲ್ಲ ಗೊತ್ತೇ?]

ರೆಡ್ಮೀ ನೋಟ್ ಕೂಡ ಶ್ಯೋಮಿಯ ಇನ್ನೊಂದು ಲಾಂಚ್ ಆಗಿದ್ದು ಇದು ರೆಡ್ಮೀ 1ಎಸ್ ಮತ್ತು ಎಮ್‌ಐ3 ನಂತೆ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಸಲಿದೆ. ಹಾಗಿದ್ದರೆ ಈ ಕಮಾಲಿನ ಫೋನ್‌ನ ವಿಶೇಷತೆಗಳತ್ತ ನಾವಿಂದು ನೋಟಹರಿಸೋಣ.

[ಇದನ್ನೂ ಓದಿ: ಖರೀದಿಗೆ ಅರ್ಹ ಈ 10,000 ದ ಒಳಗಿನ ವಿಂಡೋಸ್ ಫೋನ್‌ಗಳು]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸೆಟ್ಟಿಂಗ್‌ಗಳನ್ನು ವೇಗವಾಗಿ ಪ್ರವೇಶಿಸಲು

ಸೆಟ್ಟಿಂಗ್‌ಗಳನ್ನು ವೇಗವಾಗಿ ಪ್ರವೇಶಿಸಲು

#1

ಕೆಳಭಾಗದಲ್ಲಿರುವ ಟಾಗಲ್ ಟ್ಯಾಬ್‌ನಿಂದ ಫೋನ್‌ನ ಸೆಟ್ಟಿಂಗ್ ಅನ್ನು ಪ್ರವೇಶಿಸಬಹುದು. ನೀವು ಇದಕ್ಕಾಗಿ ಮಾಡಬೇಕಾಗಿರುವುದು ಇಷ್ಟೇ ಕೆಳಕ್ಕೆ ಸ್ವೈಪ್ ಮಾಡುವುದು ಮತ್ತು ಟಾಗಲ್‌ಗಳ ಟ್ಯಾಬ್ ಅನ್ನು ಆಯ್ಕೆಮಾಡುವುದಾಗಿದೆ.

ಕ್ಯುಆರ್ ಜೊತೆಗೆ ವೈಫೈ ಹಂಚಿಕೆ

ಕ್ಯುಆರ್ ಜೊತೆಗೆ ವೈಫೈ ಹಂಚಿಕೆ

#2

ಕ್ಯಾಮೆರಾ ಅಪ್ಲಿಕೇಶನ್‌ಗೆ ಸಂಯೋಜನೆಗೊಂಡಿರುವ ಕ್ಯುಆರ್ ಕೋಡ್ ಅನ್ನು ಎಲ್ಲಾ ಶ್ಯೋಮಿ ಡಿವೈಸ್‌ಗಳು ಹೊಂದಿದೆ. ಇದರಿಂದಾಗಿ ನೀವು ಸರಳವಾಗಿ ಕ್ಯಾಮೆರಾವನ್ನು ಸಕ್ರಿಯಗೊಳಿಸಬಹುದು ಮತ್ತು ಕೋಡ್ ಅನ್ನು ಓದಬಹುದು.

ಮೊಬೈಲ್ ಡೇಟಾ ಉಳಿಸುವುದು

ಮೊಬೈಲ್ ಡೇಟಾ ಉಳಿಸುವುದು

#3

ಫೋನ್‌ನ ಡೇಟಾವನ್ನು ಉಳಿಸುವುದು ಎಲ್ಲರಿಗೂ ತಲೆನೋವಿನ ಸಂಗತಿಯಾಗಿದೆ. ಆದರೆ ಹೊಸ ರೆಡ್ಮೀ ನೋಟ್‌ನೊಂದಿಗೆ ಇದು ಅಷ್ಟೊಂದು ಕಷ್ಟಕರವಲ್ಲ. ಭದ್ರತಾ ಅಪ್ಲಿಕೇಶನ್‌ಗೆ ಹೋಗಿ ಮತ್ತು ನಿರ್ಬಂಧನೆಯನ್ನು ಅನುಸರಿಸಿ ಡೇಟಾ ಬಳಕೆಯನ್ನು ಆರಿಸಿ.

ಪಾಪ್ -ಅಪ್

ಪಾಪ್ -ಅಪ್

#4

ಫೋನ್‌ನ ಕೆಳಭಾಗದಲ್ಲಿ ಟಾಗಲ್ ಟ್ಯಾಬ್ ಅನ್ನು ನೀವು ಕಂಡಂತೆ, ಮೇಲ್ಭಾಗಕ್ಕೆ ಸ್ವೈಪ್ ಮಾಡಬೇಕು. ಇಲ್ಲಿ ನೀವು ಅಪ್ಲಿಕೇಶನ್‌ನ ಪಾಪ್ ಅಪ್ ವೀಕ್ಷಣೆಯನ್ನು ಪಡೆದುಕೊಳ್ಳಬಹುದು.

ಫ್ಲ್ಯಾಶ್ ಲೈಟ್

ಫ್ಲ್ಯಾಶ್ ಲೈಟ್

#5

ರೆಡ್ಮೀ ನೋಟ್‌ನಲ್ಲಿ, ಲಾಕ್ ಸ್ಕ್ರೀನ್‌ನಿಂದ ಮುಖ್ಯ ಬಟನ್ ಅನ್ನು ಒತ್ತಿ ಹಿಡಿಯಿರಿ ಆಗ ಫ್ಲ್ಯಾಶ್ ಲೈಟ್ ಆನ್ ಆಗುತ್ತದೆ.

ಖಾಸಗಿ ಸಂದೇಶಗಳನ್ನು ಕಳುಹಿಸಲು

ಖಾಸಗಿ ಸಂದೇಶಗಳನ್ನು ಕಳುಹಿಸಲು

#6

MIUI ನ ಖಾಸಗಿ ಸಂದೇಶ ಫೀಚರ್ ಡೀಫಾಲ್ಟ್ ಅಪ್ಲಿಕೇಶನ್‌ನೊಂದಿಗೆ ಸಂಯೋಜನೆಗೊಂಡಿದೆ. ನಿಮ್ಮ ಖಾಸಗಿ ಸಂಪರ್ಕಗಳನ್ನು ಇತರರು ಪ್ರವೇಶಿಸದಂತೆ ಪಾಸ್‌ವರ್ಡ್ ಅನ್ನು ಹೊಂದಿಸಬಹುದು.

ಸ್ಕ್ರೀನ್ ಕ್ಯಾಮೆರಾ ಶಾರ್ಟ್‌ಕಟ್ ಲಾಕ್

ಸ್ಕ್ರೀನ್ ಕ್ಯಾಮೆರಾ ಶಾರ್ಟ್‌ಕಟ್ ಲಾಕ್

#7

ರೆಡ್ಮೀ ನೋಟ್‌ನೊಂದಿಗೆ, ಹಿಂದಕ್ಕೆ ದೀರ್ಘವಾಗಿ ಒತ್ತುವುದು ಫೋಟೋಗಳನ್ನು ತೆಗೆಯಲು ನಿಮ್ಮನ್ನು ಅನುಮತಿಸುತ್ತದೆ. ಹಿಂದಿನ ಬಟನ್ ಅನ್ನು ಒತ್ತಿ ಹಿಡಿದರೆ ಸಾಕು ಶಟ್ಟರ್ ಸೌಂಡ್ ಅನ್ನು ಕೇಳಿದಾಗ ಇದು ಪೂರ್ತಿ ಆಗಿದೆ ಎಂಬುದು ತಿಳಿಯುತ್ತದೆ.

ಮೂವಿಂಗ್ ಅಪ್ಲಿಕೇಶನ್‌ಗಳು

ಮೂವಿಂಗ್ ಅಪ್ಲಿಕೇಶನ್‌ಗಳು

#8

ರೆಡ್ಮೀ ನೋಟ್‌ನೊಂದಿಗೆ, ಒಂದು ಸ್ಥಳದಿಂದ ಇನ್ನೊಂದಕ್ಕೆ ಮೂವಿಂಗ್ ಅಪ್ಲಿಕೇಶನ್ ಇರುವುದು ಅತೀ ಉತ್ತಮವಾಗಿದೆ. ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ, ಚಲಿಸಬೇಕೆಂದಿರುವ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಿ ಮತ್ತು ಅಪ್ಲಿಕೇಶನ್‌ಗಳ ಮೇಲೆ ತಟ್ಟಿರಿ.

 ಅಪ್ಲಿಕೇಶನ್‌ಗಳನ್ನು ಲಾಕ್ ಮಾಡುವುದು

ಅಪ್ಲಿಕೇಶನ್‌ಗಳನ್ನು ಲಾಕ್ ಮಾಡುವುದು

#9

ನಿಮ್ಮ ಫೋನ್‌ನಲ್ಲಿ ಹೆಚ್ಚಿನ ಅಪ್ಲಿಕೇಶನ್‌ಗಳು ಇದ್ದಾಗ ನಿಮ್ಮ ಹ್ಯಾಂಡ್‌ಸೆಟ್‌ನ ಮೆಮೊರಿಯನ್ನು ನೀವು ಉಳಿಸಬೇಕೆಂದು ನಿಶ್ಚಯಿಸಿರುವಾಗ ಅಪ್ಲಿಕೇಶನ್‌ಗಳನ್ನು ಲಾಕ್ ಮಾಡುವುದು ನಿಮಗೆ ಉಪಯೋಗಕಾರಿಯಾಗಿರುತ್ತದೆ. ಮಲ್ಟಿ ಟಾಸ್ಕಿಂಗ್ ಮೆನುವನ್ನು ತರಲು ಮೆನು ಬಟನ್ ಅನ್ನು ಒತ್ತಿ ಹಿಡಿಯಿರಿ.

ಜಂಕ್ ಕ್ಲೀನ್ ಮಾಡುವುದು

ಜಂಕ್ ಕ್ಲೀನ್ ಮಾಡುವುದು

#10

ನಿಮ್ಮ ಫೋನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀವು ಹೊಂದಿದ್ದರೂ ಜಂಕ್ ಫೈಲ್‌ಗಳು ಕೆಲವೊಮ್ಮೆ ಆ ಸ್ಥಳವನ್ನು ಆಕ್ರಮಿಸಬಹುದು. ಆಗ ಟ್ರ್ಯಾಶ್ ಅನ್ನು ಕ್ಲೀನ್ ಮಾಡುವುದು ಅತೀ ಅಗತ್ಯವಾಗಿರುತ್ತದೆ. ಭದ್ರತಾ ಅಪ್ಲಿಕೇಶನ್‌ಗೆ ಹೋಗಿ, ಕ್ಲೀನರ್ ಆಯ್ಕೆಮಾಡಿ ಮತ್ತು ಸ್ಕ್ಯಾನ್ ಪ್ರಾರಂಭಿಸಿ ಹಾಗೂ ಡಿವೈಸ್ ಸ್ವಚ್ಛಗೊಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Xiaomi is a serious threat to most of the smartphone names you can think of.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot