ಶ್ಯೋಮಿ ರೆಡ್ಮೀ ನೋಟ್ ಕಮಾಲು ಆಪಲ್ 6 ನಲ್ಲಿಲ್ಲ ಗೊತ್ತೇ?

  By Shwetha
  |

  ಆಪಲ್ ಮತ್ತು ಶ್ಯೋಮಿ ನೋಡ ಹೊರಟರೆ ಅತಿ ವಿಭಿನ್ನ ಡಿವೈಸ್‌ಗಳಾಗಿವೆ. ತನ್ನ ಐಫೋನ್ ಮತ್ತು ಐಪ್ಯಾಡ್‌ಗಳ ಅದ್ಭುತ ಸಂಗ್ರಹದೊಂದಿಗೆ ಆಪಲ್ ಯಾವಾಗಲೂ ಭಿನ್ನವಾಗಿ ಮಾರುಕಟ್ಟೆಯಲ್ಲಿ ನಿಂತಿರುತ್ತದೆ. ಈಗ ಅದೇ ಸಾಲಿಗೆ ಶ್ಯೋಮಿ ಕೂಡ ಸೇರ್ಪಡೆಯಾಗುತ್ತಿದ್ದು ಮಾರುಕಟ್ಟೆಯಲ್ಲಿ ಆಪಲ್‌ಗೆ ಸರಿಸಮನಾಗಿ ನಿಲ್ಲುವ ಛಾತಿಯಲ್ಲಿದೆ.

  [ಇದನ್ನೂ ಓದಿ: ಖರೀದಿಗೆ ಅರ್ಹ ಈ 10,000 ದ ಒಳಗಿನ ವಿಂಡೋಸ್ ಫೋನ್‌ಗಳು]

  ಈಗ ಶ್ಯೋಮಿಯ ಬ್ರ್ಯಾಂಡ್ ನ್ಯೂ ಫ್ಯಾಬ್ಲೆಟ್ ಆದ ರೆಡ್ಮೀ ನೋಟ್ ಮಾರುಕಟ್ಟೆಯಲ್ಲಿ ಅಬ್ಬರದ ಸದ್ದನ್ನೇ ಉಂಟುಮಾಡುತ್ತಿದ್ದು ಆಪಲ್‌ನಲ್ಲಿಲ್ಲದ ಅತ್ಯುತ್ತಮ ಫೀಚರ್‌ಗಳು ಶ್ಯೋಮಿಯಲ್ಲಿ ಕಾಣಬಹುದಾಗಿದೆ ಎಂಬ ಅಚ್ಚರಿ ನಿಮಗೆ ಗೊತ್ತೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ಐಫೋನ್ 6 ಪ್ಲಸ್ ಮತ್ತು ಶ್ಯೋಮಿ ರೆಡ್ಮೀ ನೋಟ್‌ಗಿರುವ ಭಿನ್ನತೆ ಮತ್ತು ವಿಶೇಷತೆಗಳನ್ನು ನೋಡೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಅಪ್ಲಿಕೇಶನ್‌ಗಳು ಮತ್ತು ಗೇಮ್ಸ್‌ನ ಹರಿವು ನಿಮ್ಮ ಫೋನ್‌ನಲ್ಲಿತ ತುಂಬಿ ತುಳುಕುತ್ತಿರಬಹುದು. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಕೆಲವು ಸ್ಥಳವನ್ನು ಕ್ಲೀನ್ ಮಾಡುವುದು ಅತೀ ಅಗತ್ಯವಾಗಿದೆ. ರೆಡ್ಮೀ ನೋಟ್‌ನಲ್ಲಿ ಒಂದೇ ತಟ್ಟುವಿಕೆಯ ಮೂಲಕ ನಿಮ್ಮ ಫೋನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

  #2

  ನಿಜಕ್ಕೂ ಥೀಮ್‌ಗಳ ಸಾಕಷ್ಟು ಸಂಗ್ರಹವನ್ನು ನಿಮ್ಮ MIUI ಮತ್ತು ಐಫೋನ್ 6 ಹೊಂದಿದೆ.

  #3

  ರೆಡ್ಮೀ ನೋಟ್‌ನಲ್ಲಿ ಡಯಲ್ ಪ್ಯಾಡ್ ಆಧಾರಿತ ನೋಟ್ ಟೇಕಿಂಗ್ ವ್ಯವಸ್ಥೆ ಇದ್ದು ಎಲ್ಲಾವನ್ನೂ ಒಂದೇ ಸ್ಥಳದಲ್ಲಿ ನಿಮಗೆ ಇದನ್ನು ಪಡೆದುಕೊಳ್ಳಬಹುದು. ಕರೆಗಳ ಸ್ವೀಕರಿಸುವಿಕೆ ಮತ್ತು ನೋಟ್ ಟೇಕಿಂಗ್ ಇವೆರಡನ್ನೂ ಒಂದೇ ಸಮಯದಲ್ಲಿ ನಿಮಗೆ ಮಾಡಬಹುದು.

  #4

  ನಿಮ್ಮ ರೆಡ್ಮೀ ನೋಟ್‌ನ ಡೀಫಾಲ್ಟ್ ಫಾಂಟ್‌ನಿಂದ ನೀವು ಬೇಜಾರಾಗಿದ್ದೀರಾ, ಹಾಗಿದ್ದರೆ ನಿಮಗಿದನ್ನು ಕೂಡಲೇ ಬದಲಾಯಿಸಬಹುದು. ನಿಮ್ ಹ್ಯಾಂಡ್‌ಸೆಟ್‌ನಲ್ಲಿ ನೀವು ಥೀಮ್ ಬದಲಾಯಿಸಿದಂತೆ ಫಾಂಟ್ ಅನ್ನು ಬದಲಾಯಿಸಬಹುದು. ಥೀಮ್ಸ್ ಅಪ್ಲಿಕೇಶನ್‌ಗೆ ಹೋಗಿ ವರ್ಗಕ್ಕೆ ಟ್ಯಾಪ್ ಮಾಡಿ ನಂತರ ನಿಮಗೆ ಬೇಕಾದ ಫಾಂಟ್ ಅನ್ನು ಆರಿಸಿ. ಅದು ಡೌನ್‌ಲೋಡ್ ಆಗುತ್ತದೆ.

  #5

  MIUI ನ ಒಳಭಾಗದಲ್ಲಿ ರಚಿಸಿರುವ ಡೇಟಾ ಪ್ಲೇನರ್ ಜೊತೆಗೆ, ನಿಮ್ಮ ಡೇಟಾ ಮಿತಿಯನ್ನು ನೀವು ಮೀರುತ್ತಿದ್ದೀರಿ ಎಂದಾದಲ್ಲಿ ಓಎಸ್ ನಿಮ್ಮನ್ನು ಎಚ್ಚರಿಸುತ್ತದೆ.

  #6

  ಸ್ವಲ್ಪ ಭಾಗ ಕುರುಡುತನವನ್ನು ಹೊಂದಿರುವವರಿಗೆ ಲೈಟ್ ಮೋಡ್ ಆಯ್ಕೆಯನ್ನು ಶ್ಯೋಮಿ ಒದಗಿಸಿದೆ. ನಿಮಗೆ ಬೇಕಾದ ಅಪ್ಲಿಕೇಶನ್‌ಗಳು ಮತ್ತು ಫೀಚರ್‌ಗಳನ್ನು ವೇಗವಾಗಿ ಹುಡುಕಲು ಲೈಟ್ ಮೋಡ್ ನಿಮಗೆ ಸಹಕಾರಿಯಾಗಿದೆ.

  #7

  ಹೊಸ ರೆಡ್ಮೀ ನೋಟ್‌ ಫ್ಯಾಬ್ಲೆಟ್‌ನ ಒಳಭಾಗದಲ್ಲಿರುವ MIUI ಇಂಟರ್ಫೇಸ್ ನಿಮ್ಮ ಹ್ಯಾಂಡ್‌ಸೆಟ್ ಮೂಲಕ ಸ್ಕ್ರೀನ್ ಮಿರರಿಂಗ್ ಅನ್ನು ನಿಮಗೆ ಅನುಮತಿಸುತ್ತದೆ.

  #8

  ಶ್ಯೋಮಿ ನಿಜಕ್ಕೂ ಕಮಾಲಿನ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ರೆಡ್ಮೀ ನೋಟ್‌ನಲ್ಲಿರುವ MIUI6 ಉತ್ತಮ ಪವರ್ ಉಳಿಸುವಿಕೆ ಅಪ್ಲಿಕೇಶನ್ ನಿಮ್ಮ ಡಿವೈಸ್‌ನ ಸ್ಟ್ಯಾಂಡ್ ಬೈ ಸಮಯವನ್ನು ಉಳಿಸುತ್ತದೆ.

  #9

  ನಿಮ್ಮ ಪಾಕೆಟ್‌ನಲ್ಲಿ ನೀವು ಫೋನ್ ಲಾಕ್ ಮಾಡಲು ನೀವು ಮರೆತಿದ್ದೀರಿ ಎಂದಿಟ್ಟುಕೊಳ್ಳೋಣ. ನಿಮ್ಮ ಪಾಕೆಟ್‌ನಲ್ಲಿ ಫೋನ್ ಇರುವಾಗ ಕೂಡ ರೆಡ್ಮೀ ನೋಟ್ ನಿಮ್ಮ ಫೋನ್ ಅನ್ನು ಲಾಕ್ ಮಾಡುತ್ತದೆ.

  #10

  ರೆಡ್ಮೀ ನೋಟ್‌ಗಾಗಿ ಅತ್ಯಂತ ಉತ್ತಮವಾಗಿರುವ ಆಯ್ಕೆ ಇದಾಗಿದೆ. ಇಲ್ಲಿಯವರೆಗೆ ಬಿಡುಗಡೆ ಮಾಡಿರುವ ಎಲ್ಲಾ ಶ್ಯೋಮಿ ಫೋನ್‌ಗಳಲ್ಲಿ ಈ ಆಯ್ಕೆಯನ್ನು ನಿಮಗೆ ಕಾಣಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about Apple and Xiaomi, in reality, belong to entirely different galaxies. While Apple has always looked more premium with its list of iPhone and iPad offering, Xiaomi is one that aims at the budget smartphone section of the market.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more