ಇದೀಗ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಒನ್‍ಪ್ಲಸ್ ಫೋನ್ ಖರೀದಿಸಬಹುದು!

|

ಜಾಗತಿಕ ಟೆಕ್ ಬ್ರ್ಯಾಂಡ್ ಆಗಿರುವ ಒನ್‍ಪ್ಲಸ್ ಕರ್ನಾಟಕದ ಪ್ರಮುಖ ಜನರಲ್ ಟ್ರೇಡ್ ಡಿಸ್ಟ್ರಿಬ್ಯೂಟರ್ ಆಗಿರುವ ಆರೋಹೆಡ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದೀಗ ನೀವು ಆರೋಹೆಡ್ ಕಮ್ಯುನಿಕೇಶನ್ ಪ್ರೈವೇಟ್ ಮೂಲಕ ಗ್ರಾಹಕರು ಒನ್‍ಪ್ಲಸ್ ಡಿವೈಸ್‍ಗಳನ್ನು ರಾಜ್ಯಾದ್ಯಂತ ಆಫ್‌ಲೈನ್ ಸ್ಟೋರ್‍ಗಳಲ್ಲಿ ಖರೀದಿಸಬಹುದಾಗಿದ್ದು, ಆನ್‌ಲೈನ್ ಮೊಬೈಲ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಎನಿಸಿರುವ ಒನ್‍ಪ್ಲಸ್ ಇದೀಗ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಹೆಚ್ಚು ಅಸ್ತಿತ್ವವನ್ನು ಹೊಂದಲು ಮುಂದಾಗಿದೆ.

26 ಜಿಲ್ಲೆಗಳು ಮತ್ತು ಹಲವಾರು ಪಟ್ಟಣಗಳಲ್ಲಿ

ಕರ್ನಾಟಕದಾದ್ಯಂತ 26 ಜಿಲ್ಲೆಗಳು ಮತ್ತು ಹಲವಾರು ಪಟ್ಟಣಗಳಲ್ಲಿ ತನ್ನ ವಿಸ್ತಾರವಾದ ವಿತರಣಾ ಜಾಲವನ್ನು ಹೊಂದಿರುವ ಆರೋಹೆಡ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ರಾಜ್ಯದ ಎಲ್ಲಾ ಭಾಗಗಳಲ್ಲಿ ಅತ್ಯಂತ ಜನಪ್ರಿಯ ಐಟಿ ಸಾಧನಗಳ ವಿತರಕ ಸಂಸ್ಥೆ ಎನಿಸಿಕೊಂಡಿದೆ. ಆಪಲ್ ಮತ್ತು ಬ್ಲ್ಯಾಕ್‍ಬೆರ್ರಿಯಂತಹ ಉತ್ಪನ್ನಗಳನ್ನು ಕಳೆದ ಒಂದು ದಶಕದಿಂದಲೂ ವಿತರಣೆ ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಆರೋಹೆಡ್ ಕಮ್ಯುನಿಕೇಶನ್ ಒನ್‍ಪ್ಲಸ್‌ನೊಂದಿಗಿನ ಪಾಲುದಾರಿಕೆ ಮೂಲಕ ಒನ್‍ಪ್ಲಸ್ ಉತ್ಪನ್ನಗಳನ್ನೂ ಗ್ರಾಹಕರಿಗೆ ತಲುಪಿಸಲಿದೆ.

ಒನ್‍ಪ್ಲಸ್ ಇಂಡಿಯಾ

ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ಒನ್‍ಪ್ಲಸ್ ಇಂಡಿಯಾದ ಹೆಡ್ ಆಫ್ ಜನರಲ್ ಟ್ರೇಡ್ ಅಂಡ್ ಮಾಡರ್ನ್ ಟ್ರೇಡ್ ಆಗಿರುವ ಸಿದ್ಧಾರ್ಥ್ ದೇಶಮುಖ್ ಅವರು, `ಒನ್‍ಪ್ಲಸ್ ಬಳಕೆದಾರರ ಸಂಖ್ಯೆ ಅಧಿಕವಾಗಿರುವ ಕರ್ನಾಟಕದ ನಮಗೆ ಅತ್ಯಂತ ಪ್ರಮುಖವಾದ ಮಾರುಕಟ್ಟೆಯಾಗಿದ್ದು, ಈ ಮಾರುಕಟ್ಟೆ ಹೆಚ್ಚು ವಿಸ್ತಾರವಾಗಿ ಬೆಳೆಯುತ್ತಿದೆ. ರಾಜ್ಯದಲ್ಲಿ 200 ಕ್ಕೂ ಹೆಚ್ಚಿರುವ ಆರೋಹೆಡ್ ರೀಟೇಲ್ ಸ್ಟೋರ್ ಮೂಲಕ ನಮ್ಮ ಉತ್ಪನ್ನಗಳನ್ನು ಇನ್ನೂ ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಈ ಒಪ್ಪಂದದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಪಾಲುದಾರ ಸಂಸ್ಥೆ

ಒನ್‍ಪ್ಲಸ್ ನಮ್ಮ ಸಂಸ್ಥೆಯನ್ನು ಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ. ಈ ಮೂಲಕ ನಾವು ಕರ್ನಾಟಕದಲ್ಲಿ ಹೆಚ್ಚು ಇಷ್ಟಪಡುವ ಸ್ಮಾರ್ಟ್‍ಫೋನ್ ಅನ್ನು ಗ್ರಾಹಕರಿಗೆ ತಲುಪಿಸಲಿದ್ದೇವೆ. ಕರ್ನಾಟಕದ ಮಾರುಕಟ್ಟೆಯಲ್ಲಿ ಗ್ರಾಹಕರು ಒನ್‍ಪ್ಲಸ್ ಉತ್ಪನ್ನಗಳನ್ನು ಅತ್ಯಂತ ಸಕಾರಾತ್ಮಕವಾಗಿ ಸವೀಕರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು ಆರೋಹೆಡ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರವಿ ವರ್ಧನ್ ಅವರು ಈ ಪಾಲುದಾರಿಕೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಆರೋಹೆಡ್ ಕಮ್ಯುನಿಕೇಶನ್

ಆರೋಹೆಡ್ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಹೊಸ ಪಾಲುದಾರಿಕೆ ಒನ್‍ಪ್ಲಸ್ ಕಂಪನಿಯು ದೇಶಾದ್ಯಂತ ತನ್ನ ಆಫ್‌ಲೈನ್ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರ ಮಾಡಲಿದೆ ಎಂದು ಹೇಳಬಹುದು. ಜಾಗತಿಕ ಟೆಕ್ ಬ್ರ್ಯಾಂಡ್ ಆಗಿರುವ ಒನ್‍ಪ್ಲಸ್ ಕಮಪೆನಿ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ 2020 ರ ವೇಳೆಗೆ 50 ಕ್ಕೂ ಹೆಚ್ಚು ಟಾಪ್ ನಗರಗಳಲ್ಲಿ ಇನ್ನೂ 100 ಹೊಸ ಒನ್‍ಪ್ಲಸ್ ಎಕ್ಸ್‍ಪೀರಿಯನ್ಸ್ ಸ್ಟೋರ್‍ಗಳನ್ನು ಆರಂಭಿಸುವ ಯೋಜನೆಯನ್ನು ಕಂಪೆನಿಯು ರೂಪಿಸಿದೆ.

Best Mobiles in India

English summary
You Can Get OnePlus Smartphones From Retail Stores All Over Karnataka.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X