ರೂ.3,290 ಕ್ಕೆ ಮಾರ್ಷ್‌ಮಲ್ಲೊ ಓಎಸ್‌ ಚಾಲಿತ 'ಅಡ್ಮೈರ್ ಸ್ಟಾರ್‌ ಸ್ಮಾರ್ಟ್‌ಫೋನ್‌'

By Suneel
|

ಜೆನ್‌ ಮೊಬೈಲ್‌ ಅತಿ ಕಡಿಮೆ ಬಜೆಟ್ ಬೆಲೆಯಲ್ಲಿ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತ 'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್' ಅನ್ನು ರೂ.3,290 ಕ್ಕೆ ಲಾಂಚ್‌ ಮಾಡಿದೆ. ಸ್ಮಾರ್ಟ್‌ಫೋನ್‌ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಯೋಜನೆ ಹಾಕಿಕೊಂಡಿರುವವರು 'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್' ಅನ್ನು ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದು.

'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್' ಉಚಿತವಾಗಿ ಹಲವು ವಿಶೇಷ ಆಪ್‌ಗಳನ್ನು ಪ್ರೀಲೋಡ್ ಆಗಿ ಹೊಂದಿದೆ. ಹೊಸ ಸ್ಮಾರ್ಟ್‌ಫೋನ್‌ ಆಕಾಂಕ್ಷಿಗಳು ಈ ಫೋನ್‌ನ ವಿಶೇಷತೆ ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

 'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್'

'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್'

'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್' ಪ್ರೀಲೋಡ್‌ ಆಗಿ ಜೆನ್ ಆಪ್ ಕ್ಲೌಡ್‌ ಅನ್ನು ಮತ್ತು ಇತರೆ ಅಪ್ಲಿಕೇಶನ್‌ಗಳಾದ ನೆಕ್ಸ್‌ಜೆನ್‌ಟಿವಿ, ವುಲಿವ್‌, ಸಾವನ್‌ ಯುಸಿ ಮಿನಿ ಬ್ರೌಸರ್‌ ಮತ್ತು ಕೂಲ್‌ ಗ್ಯಾಲರಿಯನ್ನು (NexGenTV, Vuliv, Saavn, UC Mini browser,Cool Gallery) ಹೊಂದಿದೆ.

 ಜೆನ್ ಕೇರ್‌ ಆಪ್‌

ಜೆನ್ ಕೇರ್‌ ಆಪ್‌

'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್'ನಲ್ಲಿನ 'ಜೆನ್‌ ಕೇರ್‌ ಆಪ್‌' ಬಳಕೆದಾರರಿಗೆ ಕಂಪನಿ ಸರ್ವೀಸ್‌ ಸೆಂಟರ್‌ಗೆ ಆಕ್ಸೆಸ್‌ ನೀಡುತ್ತದೆ.

 'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್' ವೈಶಿಷ್ಟಗಳು

'ಅಡ್ಮೈರ್ ಸ್ಟಾರ್ ಸ್ಮಾರ್ಟ್‌ಫೋನ್' ವೈಶಿಷ್ಟಗಳು

ಸ್ಮಾರ್ಟ್‌ಫೋನ್‌ 4.5 ಇಂಚಿನ FWVGA ಡಿಸ್‌ಪ್ಲೇ ಹೊಂದಿದ್ದು, 1.3 GHZ ಕ್ವಾಡ್‌ಕೋರ್‌ ಪ್ರೊಸೆಸರ್ಸ್ ಸಂಯೋಜಿತವಾಗಿದೆ. 512MB RAM ಮತ್ತು 8GB ಆಂತರಿಕ ಸ್ಟೋರೇಜ್‌ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32GB ವರೆಗೆ ಸ್ಟೋರೇಜ್‌ ವಿಸ್ತರಿಸಬಹುದು.

 ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌

ವಿಶಾಲ ಸಂಖ್ಯೆಯ ಜನರು ತಮ್ಮ ಜೀವನ ಶೈಲಿಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಕಡಿಮೆ ಬೆಲೆಯ 'ಅಡ್ಮೈರ್‌ ಸ್ಟಾರ್‌ ಸ್ಮಾರ್ಟ್‌ಫೋನ್‌' ಅನ್ನು ಜೆನ್‌ ಮೊಬೈಲ್ ಆಫರ್‌ ಮಾಡುತ್ತಿದೆ. ಫೋನ್‌ ಹೈ ಎಂಡ್‌ ಫೀಚರ್, ಪವರ್‌ಫುಲ್‌ ಬ್ಯಾಟರಿ ಮತ್ತು ಉತ್ತಮ ಮಲ್ಟಿಮೀಡಿಯಾ ಅನುಭವ ನೀಡಲಿದೆ ಎಂದು ಜೆನ್ ಮೊಬೈಲ್‌ ಸಿಇಓ 'ಸಂಜಯ್‌ ಕಲಿರೊನ' ಹೇಳಿದ್ದಾರೆ.

ಕ್ಯಾಮೆರಾ ವೈಶಿಷ್ಟಗಳು ಮತ್ತು ಇತರೆ

ಕ್ಯಾಮೆರಾ ವೈಶಿಷ್ಟಗಳು ಮತ್ತು ಇತರೆ

ಜೆನ್‌ ಮೊಬೈಲ್ 'ಅಡ್ಮೈರ್‌ ಸ್ಟಾರ್' 5MP ಪನೋರಮಾ ಫೀಚರ್ ಹಿಂಭಾಗ ಕ್ಯಾಮೆರಾ ಮತ್ತು 1.3MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದ್ದು, ಅಡ್ಮೈರ್‌ ಸ್ಟಾರ್‌ನಿಂದ 5 ಪೂರ್ವನಿರ್ಧರಿತ ನಂಬರ್‌ಗಳಿಗೆ ತುರ್ತುಪರಿಸ್ಥಿತಿಯಲ್ಲಿ ಸ್ಥಳದ ಬಗ್ಗೆ ಮಾಹಿತಿ ಕಳುಹಿಸಬಹುದಾಗಿದೆ.

ಬ್ಯಾಟರಿ ಮತ್ತು ಸಂಪರ್ಕಗಳು

ಬ್ಯಾಟರಿ ಮತ್ತು ಸಂಪರ್ಕಗಳು

ಜೆನ್‌ ಮೊಬೈಲ್‌ 'ಅಡ್ಮೈರ್‌ ಸ್ಟಾರ್‌' 2.000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಡ್ಯುಯಲ್‌ ಸಿಮ್ ಸಪೋರ್ಟ್‌, 3G, ಬ್ಲುಟೂತ್‌, ವೈಫೈ, ಸೆನ್ಸಾರ್, ಸ್ವಯಂ ಕಾಲ್‌ ರೆಕಾರ್ಡಿಂಗ್‌ ಫೀಚರ್‌ಗಳನ್ನು ಹೊಂದಿದೆ.

Best Mobiles in India

Read more about:
English summary
Zen Mobile Admire Star with Android Marshmallow launched at Rs 3,290. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X