ಈ ಹೊಸ ಬ್ಯಾನಿಶ್ ಹೋಮ್ ಥಿಯೇಟರ್ ಸೂಪರ್ ಕಣ್ರೀ!

Posted By: Staff

ಈ ಹೊಸ ಬ್ಯಾನಿಶ್ ಹೋಮ್ ಥಿಯೇಟರ್ ಸೂಪರ್ ಕಣ್ರೀ!
ಹೊಸ ಕಂಪೆನಿ ಬೆಲ್ಕಿನ್ ಈಗ ಬ್ಯಾನಿಶ್ ಹೋಮ್ ಥಿಯೇಟರ್ ಬಿಡುಗಡೆಗೆ ಮುಂದಾಗಿದೆ. ಈ ಬೆಲ್ಕಿನ್ ಕಂಪೆನಿ 1983 ರಲ್ಲಿ ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲಿ "ಬೆಲ್ಕಿನ್ ಇಂಟರ್ ನ್ಯಾಶನಲ್ ಇಂಕ್ ಎಂಬ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರಲ್ಲಿ ಸಾಕಷ್ಟು ಉನ್ನತ ದರ್ಜೆಯ ಕನೆಕ್ಟಿವಿಟಿ ಸಲ್ಯೂಷನ್ಸ್ ಗಳನ್ನು ಬಿಡುಗಡೆ ಮಾಡಲಾಗಿದೆ.

ಕಳೆದ 25 ವರ್ಷಗಳ ಅವಧಿಯಲ್ಲಿ ಈ ಕಂಪೆನಿ ಸಾಕಷ್ಟು ಡಿಜಿಟಲ್ ಮತ್ತು ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಯಾರಿಸುವ ಮೂಲಕ ಈ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದೆ. ಮನೆ ಹಾಗೂ ಕಾರುಗಳಲ್ಲಿ ಬಳಸಬಹುದಾದ ಈ ಹೋಮ್ ಥಿಯೇಟರ್ ಗಳು ಯಾವುದೇ ಸಮಸ್ಯೆ ಇಲ್ಲದೇ HDTV ಮೂಲಕ ಬಳಸಬಹುದಾಗಿದೆ.

ವೈರ್ ಲೆಸ್ ಕನೆಕ್ಷನ್ ಸೌಲಭ್ಯವೂ ಇರುವ ಇದು HDMI ಹಾಗೂ AV4 ಹೊಂದಿದೆ. ಈ ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಹೊಸ ಹೋಮ್ ಥಿಯೇಟರ್ 100 ಅಡಿ ಅಂತರದಲ್ಲಿದ್ದರೂ ವೈರ್ ಇಲ್ಲದೇ ಸಂಪರ್ಕ ಹೊಂದುತ್ತದೆ. ಇದರ ಜೊತೆ ಈ ಸಾಧನದಲ್ಲಿರುವ 3D ವಿಡಿಯೋ ಹಾಗೂ 5.1 ಚಾನಲ್ ಗ್ರಾಹಕರಿಗೆ ಸಾಕಷ್ಟು ಉಪಯೋಗವಾಗಲಿದೆ.

ಸ್ಕ್ರೀನ್ ಕಾಸ್ಟ್ AV 4 ಗ್ರಾಹಕರಿಗೆ ಒಳ್ಳೆಯ ಆಯ್ಕೆ ಆಗಿದೆ. ಸದ್ಯಕ್ಕೆ ಇದರ ಬೆಲೆ ನಿಗದಿಯಾಗಿಲ್ಲ. ಆಕರ್ಷಕ ಬೆಲೆಯಲ್ಲಿ ದೊರೆಯುವ ನಿರೀಕ್ಷೆ ಇದೆ. ಹಾಗೇ ಆದರೆ ಇದು ಸಾಕಷ್ಟು ಮಾರಾಟ ಆಗುವುದರಲ್ಲಿ ಸಂದೇಹವೇ ಇಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot