ಝೆಬ್ರಾನಿಕ್ಸ್ ಸ್ಪೀಕರ್ ಬರಲಿದೆ, ಬಹಳ ಚೆನ್ನಾಗಿದೆ ನೋಡಿ!

Posted By: Staff

ಝೆಬ್ರಾನಿಕ್ಸ್ ಸ್ಪೀಕರ್ ಬರಲಿದೆ, ಬಹಳ ಚೆನ್ನಾಗಿದೆ ನೋಡಿ!
"ಸಂಗೀತ" ಎಲ್ಲರಿಗೂ ಪ್ರಿಯವಾದುದೇ. ಕೆಲವೊಂದು ಸಂಗೀತ ಕೆಲವೊಬ್ಬರಿಗೆ ಕೆಲವೊಂದು ವೇಳೆಯಲ್ಲಿ ಇಷ್ಟವಾಗಬಹುದು ಅಥವಾ ಇಷ್ಟವಾಗದೇ ಇರಬಹುದು. ಆದರೆ ಸಂಗೀತವೇ ಇಷ್ಟವಿಲ್ಲ ಎನ್ನುವವರು ಸಿಗುವುದು ಕಷ್ಟವೇ! ಆದರೆ ಯಾರೇ ಆದರೂ ಇಷ್ಟಪಡಲು ಅಥವಾ ಪಡದಿರಲು ಸಂಗೀತದ ಗುಣಮಟ್ಟ ಅತ್ಯಂತ ಮುಖ್ಯ. ಹಾಗಾಗಿ ಗುಣಮಟ್ಟದ ಸಂಗೀತವೇ ನಿಜವಾದ ಸಂಗೀತ ಎಂದೂ ಹೇಳಬಹುದು.

ಈ ವಿಷಯ ಚೆನ್ನಾಗಿ ಅರಿತಿರುವ ಕಂಪೆನಿ ಝೆಬ್ರಾನಿಕ್ಸ್ ಹೊಸ ಮಲ್ಟಿಮೀಡಿಯಾ ಸ್ಪೀಕರ್ಸ್ ಬಿಡುಗಡೆಯನ್ನು ಘೋಷಿಸಿದೆ. " ಉತ್ಕೃಷ್ಟ ಸಂಗೀತ ಕೈಗೆಟಕುವ ಬೆಲೆಯಲ್ಲಿ" ಎಂಬ ಘೊಷಣೆ ಈ ಕಂಪೆನಿಯದು.

ಈ ಮಲ್ಟಿಮೀಡಿಯಾ ಸ್ಪೀಕರ್ 2 ವಿಧದಲ್ಲಿ ದೊರೆಯಲಿದ್ದು 2.1 ಮತ್ತು 4.1 ಎಂದು ಹೆಸರಿಸಲಾಗಿದೆ. ಇದೀಗ ಈ ಹೊಸ ಸ್ಪೀಕರ್ ಭಾರತಕ್ಕೆ ಬರಲಿದ್ದು ಇಲ್ಲಿನ ಸಂಗೀತಪ್ರಿಯರಿಗೆ ರಸದೌತಣ ನೀಡಲಿದೆ. ಸಿನಿಮಾ, ಗೇಮಿಂಗ್ ಹಾಗೂ ಸಂಗೀತ ಈ ವಿಭಾಗಗಳಲ್ಲಿ ಅತ್ಯುನ್ನತವಾಗಿ ಸೇವೆ ನೀಡಲು ಇದು ಸಮರ್ಥವಾಗಿದೆ.

ಈ ಎರಡು ವಿಧಗಳಲ್ಲಿ ಸಹಜವಾಗಿಯೇ 4.1 ಹೆಚ್ಚು ಸಾಮರ್ಥ್ಯವುಳ್ಳದ್ದು. USB ಪೋರ್ಟ್, SD ಕಾರ್ಡ್, CD/DVD ಮ್ಯೂಸಿಕ್ ಡ್ರೈವ್, FM ರೇಡಿಯೋ, 20 Hz-20 KHz ಮತ್ತು ಔಟ್ ಪುಟ್ 12W ಇದೆ. ಇವುಗಳ ಬೆಲೆ ಹೀಗಿದೆ: 2.1 ಮಾರಿರ ಬೆಲೆ ರು. 1,700 ಮತ್ತು 4.1 ಮಾದರಿಗೆ ರು. 2,100.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot