ಲಾಜಿಟೆಕ್ ಹೊಸ ಬೂಂಬಾಕ್ಸ್ ಮತ್ತು ಹೆಡ್ ಫೊನ್

Posted By: Staff

ಲಾಜಿಟೆಕ್ ಹೊಸ ಬೂಂಬಾಕ್ಸ್ ಮತ್ತು ಹೆಡ್ ಫೊನ್
ಲಾಜಿಟೆಕ್ ಕಂಪೆನಿ ಗ್ಯಾಜೆಟ್ಸ್ ಲೋಕದಲ್ಲಿ ಸಾಕಷ್ಟು ಪರಿಚಿತ ಹೆಸರು. ಈಗಾಗಲೇ ಕೆಲವು ಸಂಗೀತ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಇದು ಇದೀಗ ಐಫೊನ್ ಗ್ಯಾಜೆಟ್ಸ್ ಗಳಿಗೆ ಸಂಗೀತ ಸಾಧನದ ಹೆಚ್ಚುವರಿ ಯನಿಟ್ ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ವಿಶೇಷವೆಂದರೆ ಬಿಡುಗಡೆ ಆಗಲಿರುವ ಯುನಿಟ್ ಗಳು ಡಿಜಿಟಲ್ ಹಾಗೂ ವೈರ್ ಲೆಸ್ ಕಾಂಪೋನೆಂಟ್ಸ್ ಗಳು. ಇದನ್ನು ಪಿಸಿ, ಟ್ಯಾಬ್ಲೆಟ್ಸ್, ಸ್ಮಾರ್ಟ್ ಫೋನ್ಸ್ ಹಾಗೂ ಐಫೋನಿನ ಎಲ್ಲಾ ಸಾಧನಗಳಲ್ಲಿ ಬಳಸಬಹುದು. ನಿರಂತರವಾಗಿ ಮತ್ತು ನಿರಾತಂಕವಾಗಿ ಸಂಗೀತ ಕೇಳಲು ಜನರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಡಿಜಿಟಲ್ ಡಿವೈಸ್ ಉತ್ಪಾದಿಸಿರುವ ಲಾಜಿಟೆಕ್ ವೈರ್ ಲೆಸ್ ಹೆಡ್ ಫೊನ್ ಮತ್ತು ಬೂಂಬಾಕ್ಸ್ ಬಿಡುಗಡೆ ಮಾಡಲಿದೆ.

ಈ ಹೊಸ ಸಾಧನಗಳನ್ನು ಗ್ರಾಹಕರ ಮೆಚ್ಚುಗೆ ಪಡೆಯುವಂತೆ ಸಾಕಷ್ಟು ಜಾಗೃತೆ ವಹಿಸಿ ತಯಾರಿಸಲಾಗಿದೆ. ಈ ವೈರ್ ಲೆಸ್ ಆಡಿಯೋ ಸ್ಪೀಕರ್ ಗಳನ್ನು ಉಳಿದ ಡಿವೈಸ್ ಗಳಿಗೆ ಕನೆಕ್ಟ್ ಮಾಡಿ ಔಟ್ ಪುಟ್ ಪಡೆಯಬಹುದು. ಅದು ಹೇಗೆಂದರೆ ನಿಮ್ಮಲ್ಲಿ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಇದ್ದರೆ ಇದಕ್ಕೆ ಲಾಜಿಟೆಕ್ ವೈರ್ ಲೆಸ್ ಬೂಂಬಾಕ್ಸ್ ಅಳವಡಿಸಿ ಮತ್ತು ನಿಮಗೆ ಬೇಕಾದಲ್ಲಿಟ್ಟು ಸಂಗೀತ ಕೇಳಿ. ಹೇಗಿದೆ ನೋಡಿ ಚಮತ್ಕಾರ!

ಇದರಲ್ಲಿ ರಿಮೋಟ್ ಕಂಟ್ರೋಲ್ ಸೌಲಭ್ಯ ಕೂಡ ಇದೆ. 6 ತಾಸುಗಳ ನಿರಂತರ ಬ್ಯಾಟರಿ ಬ್ಯಾಕಪ್ ಹೊಂದಿರುವ ಇದು ನಿಜವಾದ ಸ್ನೇಹಿತನೇ ಸರಿ. ಇನ್ನು ಲಾಜಿಟೆಕ್ ಹೆಡ್ ಫೊನ್ ಕೂಡ 6 ತಾಸುಗಳ ನಿರಂತರ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇನ್ನು ಇವುಗಳ ಬೆಲೆ ಈ ರೀತಿ ಇದೆ. ಬೂಂಬಾಕ್ಸ್ ಬೆಲೆ ರು. 8,600 ಮತ್ತು ಹೆಡ್ ಫೋನ್ ಬೆಲೆ ರು. 3,350. ಆದರೆ ಸದ್ಯಕ್ಕೆ ಇದು ಅಮೇರಿಕಾ ಮತ್ತು ಇಂಗ್ಲೆಂಡ್ ನಲ್ಲಿ ಮಾತ್ರ ಲಭ್ಯ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot