ಐಹಾಗ್ ಸ್ಪೀಕರ್ ಸೌಂದರ್ಯ ಹಾಗೂ ವಿಶಿಷ್ಠತೆಯ ಸಂಗಮ

ಇದೀಗ ಹೋಮ್ ಓರಿಯಂಟೆಡ್ ಲೈಫ್ ಸ್ಟೈಲ್ ಕಂಪೆನಿ ಸದ್ಯದಲ್ಲಿ ಒಂದು ಹೊಸ ಐಪೋಡ್ ಡಾಕಿಂಗ್ ಸಿಸ್ಟಮ್ ಅನ್ನು ಬಿಡುಗಡೆ ಮಾಡಿದೆ. ಈ ಅತ್ಯಾಕರ್ಷಕ ಸಾಧನದ ಹೆಸರು ಐಹಾಗ್. ಇದು ಆಕರ್ಷಕ ಬಣ್ಣ ಪಿಂಕ್ ಹಾಗೂ ಬಿಳಿ ಬಣ್ಣಗಳ ಸಂಗಮವಾಗಿದ್ದು ನೋಡಿದ ತಕ್ಷಣ ಎಂಥವರನ್ನೂ ಸೆಳೆಯುವ ಸಾಮರ್ಥ್ಯ ಹೊಂದಿದೆ.
ಇದು AC ಅಡಾಪ್ಟರ್/ ಕೇಬಲ್, ಬ್ಯಾಟರಿ ಆಧಾರಿತ ರಿಮೋಟ್ ಕಂಟ್ರೋಲರ್ ಮತ್ತು 3.5 mm ಆಡಿಯೋ ಜ್ಯಾಕ್ ಹೊಂದಿದೆ. ಕೇವಲ 4 lbs ತೂಕ ಹೊಂದಿರುವ ಈ ಸಾಧನ, ರಿಚಾರ್ಜೆಬಲ್ Li ಬ್ಯಾಟರಿ ಹೊಂದಿದ್ದು 10 ತಾಸುಗಳ ಸಾಮರ್ಥ್ಯ ಹೊಂದಿದೆ. ಹಾಗೂ ಇದೀಗ ಬಂದಿರುವ ಹೊಸ ಐಹಾಗ್ ಕೇವಲ ಐಪೋಡ್ ನಲ್ಲಿ ಅಲ್ಲದೇ ಐಫೋನಿನಲ್ಲಿ ಕೂಡ ಉಪಯೋಗಿಸಬಹುದು.
ಈ ಹೊಸ ಐಹಾಗ್ 2.1 ಸ್ಪೀಕರ್ ಸಿಸ್ಟಮ್ 360 ಡಿಗ್ರಿ ವ್ಯಾಪ್ತಿಯಲ್ಲಿ ಸಂಗೀತ ಹರಡಲಿದೆ. ಇದರ ಆಡಿಯೋ ಗುಣಮಟ್ಟ ಪ್ರಶ್ನಾತೀತ. 20 ವ್ಯಾಟ್ ಗಳ ಸಬ್ ವೂಫರ್ ಮೂಲಕ ಆಡಿಯೋ ಔಟ್ ಪುಟ್ ನೀಡುವ ಇದು 2 ಡಿಫ್ಯೂಸರ್ಸ್ ಹೊಂದಿದೆ. ಇದರಲ್ಲಿರುವ 3.5 mm ಆಡಿಯೋ ಜ್ಯಾಕ್ ಮೂಲಕ ಟಿವಿ ಹಾಗೂ ಬಹಳಷ್ಟು ಕಾಂಪಿಟೆಬಲ್ ಮ್ಯೂಸಿಕ್ ಸಾಧನಗಳಿಗೆ ಸಂಪರ್ಕ ಕಲ್ಪಿಸಿ ಸಂಗೀತ ಸುಧೆ ಸವಿಯಬಹುದು.
ಈ ಹೊಸ ಸ್ಪೀಕರ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ರು. 6,700. ನೋಡಲು ಅತ್ಯಂತ ಸುಂದರ ಎನಿಸುವ ಈ ಸಾಧನ ಬಹುಶಃ ಪ್ರತಿಯೊಬ್ಬರ ಮನೆಯಲ್ಲಿ ಕಂಡರೂ ಆಶ್ಚರ್ಯವೇನೂ ಇಲ್ಲ. ಗುಣಮಟ್ಟ ಹಾಗೂ ಸೌಂದರ್ಯದ ಸಂಗಮ ಈ ಹೊಸ ಐಹಾಗ್ ಸ್ಪೀಕರ್.


Click it and Unblock the Notifications








