ಪಯೋನೀರ್ ಮಿಕ್ಸರ್ ಸಂಗೀತ ಸಾಧನ ಚೆನ್ನಾಗಿದೆ

Posted By: Staff

ಪಯೋನೀರ್ ಮಿಕ್ಸರ್ ಸಂಗೀತ ಸಾಧನ ಚೆನ್ನಾಗಿದೆ
ಪಯೋನೀರ್ ಕಂಪನಿ ಈಗಾಗಲೇ ಸಾಕಷ್ಟು ಗ್ಯಾಜೆಟ್ಸ್ ಹಾಗೂ ಆಡಿಯೋ ಸಾಧನಗಳನ್ನು ಹೊರ ತಂದಿದೆ. ಇವೆಲ್ಲಾ ಉತ್ಕೃಷ್ಟ ಗುಣಮಟ್ಟ ಹಾಗೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಇದೀಗ ಹೊಸ ಕಡಿಮೆ ದರದ ಬಜೆಟ್ ಮಿಕ್ಸರ್ ಮಾರುಕಟ್ಟೆಗೆ ಬಿಡಲು ಪಯೋನೀರ್ ಕಂಪನಿ ಸಜ್ಜಾಗಿದೆ.

ಈ ಹೊಸ ಬಜೆಟ್ ಮಿಕ್ಸರ್ ಗಳು ಸಾಕಷ್ಟು ಗುಣಮಟ್ಟ ಹಾಗೂ ಕೈಗೆಟಕುವ ಬೆಲೆ ಹೊಂದಿವೆ. ಈ ಸಾಧನದ ಹೆಸರು ಪಯೋನೀರ್ DJM 250.

ಈ ಹೊಸ ಸಾಧನದಲ್ಲಿ ಸ್ವತಂತ್ರ ಚಾನೆಲ್ ಫಿಲ್ಟರ್ ಇದೆ. ನಾಬ್ಸ್ ಮೂಲಕ ಬದಲಾಯಿಸಬಲ್ಲ ಹೆಚ್ಚು ಮತ್ತು ಕಡಿಮೆ ಬಾಸ್ ಸೌಲಭ್ಯ ಸಾಧಿಸುವ ಎರಡು ಸೌಂಡ್ ಕಲರ್ ಫಿಲ್ಟರ್ಸ್ ಇದೆ. ಈ ಡಿವೈಸ್ ಹಿಂಬಾಗದಲ್ಲಿ XLR ಇದ್ದು ಇದು ಆಡಿಯೋ ಸಿಸ್ಟಮ್ ಮತ್ತು ಔಟ್ ಪುಟ್ ನೀಡಲು ಸಹಕಾರ ನೀಡಲಿದೆ.

ಐಪೋಡ್ ನಂತಹ ಹೈ ಎಂಡ್ ಆಡಿಯೋ ಡಿವೈಸ್ ಕೂಡ ಇದರಿಂದ ಸಂಪರ್ಕ ಹೊಂದುವ ಸಾಮರ್ಥ್ಯ ಹೊಂದಿದೆ. ಜೊತೆಗೆ 24 ಬಿಟ್ ಡಿಜಿಟಲ್ ಸೌಂಡ್ ಪ್ರೊಸೆಸಿಂಗ್ ಇರುವ ಕಾರಣ ಈ ಹೋಮ್ ಮಿಕ್ಸರ್ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಸಾಧನದ ಬೆಲೆ ರು. 20,000. ಈ ಸಂಗೀತ ಸಾಧನದ ಬೆಲೆ ಗುಣಮಟ್ಟಕ್ಕೆ ತಕ್ಕಂತಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot