Subscribe to Gizbot

ಯಮಹಾದಿಂದ ಮತ್ತೆರಡು ಹೊಸ ಆಡಿಯೋ ಸ್ಪೀಕರ್

Posted By: Super

ಯಮಹಾದಿಂದ ಮತ್ತೆರಡು ಹೊಸ ಆಡಿಯೋ ಸ್ಪೀಕರ್
ಸಂಗೀತ ಪ್ರಿಯರಿಗಾಗಿ ಯಮಹಾ ಒಂದರ ಹಿಂದೆ ಒಂದರಂತೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಈಗ ಎಲ್ಲಾ ರೀತಿಯ ಐಪೋನ್ ಮತ್ತು ಐಪೋಡ್ ಗಳಿಗೆ ಹೊಂದಿಕೆ ಆಗುವಂತೆ ಪಿಯಾನೋ ಕ್ರಾಫ್ಟ್ ಮೈಕ್ರೋ ಸಾಧನಗಳನ್ನು ಹೊಂದಿರುವ MCR 332 ಮತ್ತು MCR-232 ಆಡಿಯೋ ಸಿಸ್ಟಮ್ ಅನ್ನು ಬಿಡುಗಡೆ ಮಾಡಿದೆ.

MCR 332 ಮತ್ತು MCR-232 ಆಡಿಯೋ ಸಿಸ್ಟಮ್ ಅಲ್ಯುಮಿನಿಯಂ ಏರ್ ಲೈನ್ ಡಿಸೈನ್ ಹೊಂದಿದ್ದು ಇದರ ಎರಡು ಬ್ರಾಸ್ ರಿಲಾಕ್ಸ್ ಸ್ಪೀಕರ್ ನಿಂದ ಉತ್ತಮ ಗುಣಮಟ್ಟದ ಶಬ್ದವನ್ನು ಹೊರಹಾಕುತ್ತದೆ.ಈ ಸ್ಪಿಕರ್ ಅತ್ಯುತ್ತವಾದ ಇಮೇಜ್ ಅನ್ನು ಸಹ ನೀಡುತ್ತದೆ.

ಇದರ ಬ್ಲ್ಯಾಕ್ ಬಾಡಿ ಪೇನಲ್ ನೋಡಲು ಪ್ರೊಫೆಶನಲ್ ಲುಕ್ ಕೊಡುತ್ತದೆ. ಇದರಲ್ಲಿ ಬಳಸಿರುವ ವೈಬ್ರೇಷನ್ ಕಂಟ್ರೋಲ್ ಕ್ಯಾಬಿನೆಟ್ ತಂತ್ರಜ್ಞಾನವು ವೈಬ್ರೇಷನ್ ನಿಂದ ಉಂಟಾಗುವ ತೊಂದರೆಯನ್ನು ನಿಭಾಯಿಸುತ್ತದೆ.

ನೋಡಲು ದೊಡ್ಡದಾಗಿ ಆಕರ್ಷಕವಾಗಿರುವ ಈ ಸ್ಪೀಕರ್ ರಿಮೋಬಲ್ ಸ್ಪೀಕರ್ ಗ್ರಿಲ್ ಅನ್ನು ಹೊಂದಿದೆ.ಈ ಎರಡೂ ಸ್ಪೀಕರ್ ಅನ್ನು ರಿಮೋಟ್ ಕಟ್ರೋಲ್ ಬಳಸಿ ಇದರ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ.

CRX-332 DAC ಹೊಂದಿರುವ ಡಿಜಿಟಲ್ ಸಂಪರ್ಕವನ್ನು ಈ ಸ್ಪೀಕರ್ ಬಳಸಿಕೊಳ್ಳಬಹುದಾಗಿದ್ದು ಒಳ್ಳೆಯ ಗುಣಮಟ್ಟದ ಶಬ್ದವನ್ನು ನೀಡುವ ಸಾಮರ್ಥ್ಯ ಹೊಂದಿದೆ.USB ಪೋರ್ಟ್ ಅನ್ನು ಬಳಸಿ MP3ಗೂ ಅಳವಡಿಸಿಕೊಳ್ಳಬಹುದಾಗಿದೆ.

ಈ ಯಮಹಾ ಸ್ಪೀಕರ್ ಗಳು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು ಯಮಹಾ MCR 332 ಬೆಲೆ ರು.20, 000 , ಯಮಹಾ MCR-232 17, 500 ರುಪಾಯಿಗೆ ಲಭ್ಯವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot