ಮನೆಯಲ್ಲೇ ವರ್ಚ್ಯುವಲ್ ಇಮೇಜ್ ಗೇಮ್ ರು.1500

Posted By: Staff

ಮನೆಯಲ್ಲೇ ವರ್ಚ್ಯುವಲ್ ಇಮೇಜ್ ಗೇಮ್ ರು.1500
ಈಗ ಗೇಮ್ ಕಂಪ್ಯೂಟರ್ ನಲ್ಲಿ ಬಳಸುವಾಗ ವರ್ಚ್ಯುವಲ್ ಇಮೇಜ್ ತಂತ್ರಜ್ಞಾನವನ್ನು ಬಳಕೆದಾರರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಮನೆಯಲ್ಲಿ ಇಂತಹ ಅನುಭವ ನೀಡಲು ಟೆಕ್ ಮೋಷನ್ ಒಂದು ಹೊಸ ಹೆಡ್ ಸೆಟ್ ಬಿಡುಗಡೆ ಮಾಡಿದೆ.

PC ಅಥವಾ Xbox 360 ನಲ್ಲಿ ಗೇಮ್ ಆಡುವಾಗ ಬಳಸುವ ಸಲುವಾಗಿಯೆ ಈ ಹೆಡ್ ಸೆಟ್ ಯಪ್ ಸ್ಟರ್ ಬ್ಲಾಸ್ಟರ್ ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ಇದನ್ನು ಆಡಿಯೋಬುಕ್ ಕೇಳಲು , ಪೋಡ್ ಕಾಸ್ಟ್ ಮತ್ತು ಸಂಗೀತ ಕೇಳಲು ಬಳಸಬಹುದು.

ಹೆಜ್ಜೆಯ, ಗುಂಡಿನ ಹೀಗೆ ಸ್ಪಷ್ಟವಾದ ಶಬ್ದವನ್ನು ಹೊರಹೊಮ್ಮಿಸುವ ಒಳ್ಳೆಯ ಗುಣ ಮಟ್ಟದ ಬೆಲೆ ಕೂಡ ಗ್ರಾಹಕನನ್ನು ಆಕರ್ಷಿಸುವ ಬೆಲೆ ರು.1, 500ಕ್ಕೆ ಲಭ್ಯವಾಗಲಿದೆ! ಈ ಹೆಡ್ ಸೆಟ್ ಅನ್ನು ಒಮ್ಮೆ ಕಿವಿಯಲ್ಲಿ ಹೊಂದಿಸಿ ಇಟ್ಟರೆ ದೀರ್ಘ ಕಾಲ ಗೇಮ್ ಆಡಬಹುದಾಗಿದೆ, ಈ ಹೆಡ್ ಸೆಟ್ ಅನ್ನು ಆಗಾಗ ಸರಿಹೊಂದಿಸುವ ತಾಪತ್ರಯ ಇಲ್ಲ.

ಈ ಹೆಡ್ ಸೆಟ್ ಬಳಸುವಾಗ Xbox 360ನ ಆಡಿಯೋ ಹುಕ್ ಗೆ ಜೋಡಿಸ ಬೇಕಾಗುತ್ತದೆ. ಈ ಹೆಡ್ ಸೆಟ್ ಅನ್ನು ಟಿವಿ ಹೆಡ್ ಪೋನ್ ಜಾಕ್ ಸೌಲಭ್ಯ ಹೊಂದಿದ್ದರೆ ಕೂಡ ಜೋಡಿಸಬಹುದಾಗಿದೆ.

ಅಲ್ಲದಿದ್ದರೆ ಸರಿಹೊಂದುವ ಕೇಬಲ್ ಅನ್ನು ಬಳಸಿ ಟೆಕ್ ಮೋಷನ್ ಹೆಡ್ ಸೆಟ್ ಅನ್ನು Xbox 360 ಗೆ ಜೋಡಿಸಬಹುದಾಗಿದೆ.

ಈ ಹೆಡ್ ಸೆಟ್ ಬಗ್ಗೆ ಇದುವರೆಗೆ ಹೇಳಿಕೊಳ್ಳುವಾಗೆ ದೋಷಗಳನ್ನು ಉಂಟು ಮಾಡಿಲ್ಲ, ಅಲ್ಲದೆ ಈ ಹೆಡ್ ಸೆಟ್ ಬಳಕೆದಾರನಿಗೆ ಗೇಮ್ ನಲ್ಲಿ ಅಧಿಕ ಮನರಂಜನೆ ನೀಡುವುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot