ಹಾರ್ಟ್ ಬೀಟ್ ಹೆಚ್ಚುಸುತ್ತೆ ಈ ಪಯೊನೀರ್ ಪ್ಲೇಯರ್

Posted By: Staff

ಹಾರ್ಟ್ ಬೀಟ್ ಹೆಚ್ಚುಸುತ್ತೆ ಈ ಪಯೊನೀರ್ ಪ್ಲೇಯರ್
ಪಯೊನೀರ್ ಆಡಿಯೊ ಮತ್ತು ಸಂಗೀತ ಸಾಧನಗಳ ಬಿಡಿ ಭಾಗಗಳ ತಯಾರಿಕೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕಂಪನಿಯಾಗಿದೆ. ಪಯೊನೀರ್ ಈಗ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪಯೊನೀರ್ ಮ್ಯಾಸಿಕ್ ಟ್ಯಾಪ್ X- SMC3-S ಎಂಬ ಸಂಗೀತ ಸಾಧನವನ್ನು ಬಿಡುಗಡೆ ಮಾಡಿದೆ.

ಏರ್ ಪ್ಲೇ ತಂತ್ರಜ್ಞಾನ ಹೊಂದಿರುವ ಈ ಸಂಗೀತ ಸಾಧನವನ್ನು ಬಳಸಿ ಐಪೋಡ್, ಏಪ್ಯಾಡ್ ಹೀಗೆ ವೈರ್ ಲೆಸ್ ಸಾಧನಗಳಲ್ಲಿ ಬಳಸಿ ಸಂಗೀತದ ಸವಿಯನ್ನು ಸವಿಯಬಹುದಾಗಿದೆ.

ಇದರ ಮತ್ತೊಂದು ಪ್ರಯೋಜನವೆಂದರೆ ಇದರಲ್ಲಿ ಏರ್ ಪ್ಲೇ ಇರುವುದರಿಂದ ಜೋಡಿಸುವ ಅಥವಾ ಸೆಟ್ ಮಾಡುವ ಅಗ್ಯತವಿಲ್ಲ.
ಇದನ್ನು ಬಳಸಿ ಪಾಂಡೋರಾ ಮತ್ತು ಹಾರ್ಟ್ ರೇಡಿಯೊ ಅಪ್ಲಿಕೇಶನ್ ಗಳನ್ನು ಪಡೆಯಬಹುದಾಗಿದೆ.

ಅಷ್ಟೇ ಅಲ್ಲದೆ ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ:
* 2-ಚಾನಲ್ ಡಿಜಿಟಲ್ ಆಂಪ್ಲಿಫೈಯರ್
* ವೈಫ ಸಂಪರ್ಕದ ಸೌಲಭ್ಯ
* ಬ್ಲೂಟೂಥ್
* LCD ತಂತ್ರಜ್ಞಾನ ಹೊಂದಿರುವ 2.5 ಇಂಚಿನ ಡಿಸ್ ಪ್ಲೇ ಸ್ಕ್ರೀನ್
* FM ಟ್ಯೂನರ್
* ರಿಮೋಟ್ ಕಂಟ್ರೋಲ್
* ಗಾತ್ರ 20.47 x 8.58 x 6.14 ಇಂಚು
* ಸುಮಾರು 8.37 lbsನಷ್ಟು ತೂಕ

ಈ ಪ್ಲೇಯರ್ ನ ಸಾಮಾನ್ಯ ಮಾಡಲ್ ರು.20, 000 ಹಾಗೂ ಮತ್ತಷ್ಟು ಸ್ಟೈಲಿಶ್ ಪ್ಲೇಯರ್ ರು.24, 000ರ ದರದಲ್ಲಿ ನೀಡುವ ಸಾಧ್ಯತೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot