Subscribe to Gizbot

ಏರ್ ಟ್ಯೂಬ್ ಹೆಡ್ ಸೆಟ್ ಬಗ್ಗೆ ಗೊತ್ತೆ?

Posted By:
ಏರ್ ಟ್ಯೂಬ್ ಹೆಡ್ ಸೆಟ್ ಬಗ್ಗೆ ಗೊತ್ತೆ?

ಆಡಿಯೊ ಸಾಧನಗಳಲ್ಲಿ ಹೊಸ ವಸ್ತಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಬರುತ್ತಿವೆ. ಅದರಲ್ಲೂ ಹೆಡ್ ಸೆಟ್ ಕಂಪನಿಗಳು ಹೊಸ ಪ್ರಯೋಗಗಳನ್ನು ಮಾಡುತ್ತಾ ಮತ್ತಷ್ಟು ಗುಣಮಟ್ಟದ ಹೆಡ್ ಫೋನ್ ಗಳನ್ನು ತರುವ ಪ್ರಯತ್ನ ನಡೆಸುತ್ತಿದ್ದಾರೆ. ಅಂತಹ ಪ್ರಯತ್ನಗಳಿಂದ ಇಂದು ಏರ್ ಟ್ಯೂಬ್ ಹೆಡ್ ಸೆಟ್ ತಯಾರಾಗಿದೆ.

ಈ ಏರ್ ಟ್ಯೂಬ್ ಹೆಡ್ ಸೆಟ್ ಅನ್ನು ಏರ್ 2 ಹಿಯರ್ ಕಂಪನಿ ತಯಾರಿಸಿದ್ದು ಇದು ಸಧ್ಯದಲ್ಲಿಯೆ ಭಾರತಕ್ಕೆ ಕೂಡ ಬರಲಿದೆ. ಈ ಏರ್ ಟ್ಯೂಬ್ ಹೆಡ್ ಸೆಟ್ ಗಳನ್ನು ಮೊಬೈಲ್ ಗಳಲ್ಲಿ ಬಳಸಬಹುದಾಗಿದ್ದು ಇತರ ಹೆಡ್ ಸೆಟ್ ಗಿಂತ ವಿಭಿನ್ನವಾದ ಗುಣ ಲಕ್ಷಣವನ್ನು ಹೊಂದಿದೆ. ಇದರಲ್ಲಿ ಶಬ್ದವು ವೈರ್ ನ ಬದಲು ಗಾಳಿಯಲ್ಲಿಯೆ ಮರು ಉತ್ಪತ್ತಿಯಾಗುವುದರಿಂದ ಹೆಡ್ ಸೆಟ್ ಬಿಸಿಯಾಗುವುದಿಲ್ಲ, ಕಿವಿಗೂ ಹಾನಿ ಉಂಟಾಗುವುದಿಲ್ಲ.

ಈ ಹೆಡ್ ಸೆಟ್ ಹಗುರವಾಗಿದ್ದು ಬಳಕೆದಾರರಿಗೆ ಉತ್ತಮ ರೀತಿಯ ಗುಣಮಟ್ಟದ ಶಬ್ದವನ್ನು ನೀಡುತ್ತದೆ. ಇದರಲ್ಲಿ ಕರೆಯನ್ನು ಸ್ವೀಕರಿಸಲು ಮತ್ತು ತಿರಸ್ಕರಿಸಲು ಬಟನ್ ಸೌಲಭ್ಯವಿದೆ. ಇಂತಹ ಹೆಡ್ ಸೆಟ್ ಗಳನ್ನು ಬಳಸುವುದರಿಂದ ಹಾನಿಕಾರಕ ಕಿರಗಳಿಂದ ಮೆದುಳಿಗೆ ತೊಂದರೆ ಸಹ ಉಂಟಾಗುವುದಿಲ್ಲ.

ಈ ಹೆಡ್ ಸೆಟ್ ಸಧ್ಯದಲ್ಲಿಯೆ ಭಾರತಕ್ಕೆ ಬರಲಿದ್ದು ಇದು ಸುಮಾರು ರು. 3000 ಬೆಲೆಗೆ ಲಭ್ಯವಾಗುವ ಸಾಧ್ಯತೆ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot