ಅಡ್ಮಾನ್ ಕೇಸ್ ನಿಂದ ನಿಮ್ಮ ಐಫೋನ್ ಆಗುವುದು ವಾಕ್ ಮನ್

|
ಅಡ್ಮಾನ್ ಕೇಸ್ ನಿಂದ ನಿಮ್ಮ ಐಫೋನ್ ಆಗುವುದು ವಾಕ್ ಮನ್

ಸೋನಿ ವಾಕ್ ಮೆನ್ 1979ರಲ್ಲಿ ಪರಿಚಯಿಸಿದಾಗ ಆಡಿಯೊ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿತು. ನಂತರ ತಂತ್ರಜ್ಞಾನಗಳು ಬೆಳದಂತೆ ಇದು ಸಿ.ಡಿ, ಡಿವಿಡಿ ಪ್ಲೇಯರ್ ಗಳನ್ನು ಸಹ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಉತ್ತಮವಾದ ಜನಪ್ರಿಯತೆಯನ್ನು ಗಳಿಸಿತ್ತು. ಕಾಲಗಳು ಬದಲಾದರು ಸಹ ಇಂದಿಗೂ ವಾಕ್ ಮೆನ್ ಗಳನ್ನು ಇಷ್ಟಪಡುವ ಜನರಿದ್ದಾರೆ. ನಂತರ ಆಡಿಯೊ ಕ್ರಾಂತಿಯಾಗಿದ್ದು ಆಪಲ್ ಐಫೋನ್ ಬಂದ ಮೇಲೆ ಇದು ಆಡಿಯೊ ಮಾರುಕಟ್ಟೆಯಲ್ಲಿ ಹೊಸದಾದ ಮೈಲುಗಲ್ಲನೇ ಸೃಷ್ಟಿಸಿತು.

ಈಗ ವಾಕ್ ಮೆನ್ ಮತ್ತು ಐಫೋನ್ ಜೊತೆ ಸೇರಿದರೆ ಹೇಗಿರುತ್ತದೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಕಲ್ಪನೆಯ ವಸ್ತು ನಿಜ ರೂಪದಲ್ಲಿ ಕಾಣಬೇಕೆಂದರೆ ಇಲ್ಲಿದೆ ನೋಡಿ ಅಡ್ಮನ್ ಕೇಸ್.ಈ ಅಡ್ಮನ್ ಕೇಸ್ ಆಡಿಯೊ ಸಾಧನವು ಉತ್ತಮ ಗುಣಮಟ್ಟವನ್ನು ಹೊಂದಿದ್ದು , ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಈ ಸಾಧನ ಕೆಂಪು, ನೀಲಿ ಹೀಗೆ ಆಕರ್ಷಕ ಬಣ್ಣದಲ್ಲಿ ಲಭ್ಯವಿದೆ. ಇದನ್ನು ತಯಾರಿಸಲು ಉತ್ತಮ ಗುಣಮಟ್ಟದ ABS ಪ್ಲಾಸ್ಟಿಕ್ ಬಳಸಿದ್ದು , ಮೊದಲ ನೋಟದಲ್ಲಿ ಇದು ವಾಕ್ ಮೆನ್ ನಂತೆ ಕಾಣುವುದು. ಇದರ ಕವರ್ ಕೂಡ ಬಳಸಲು ತುಂಬಾ ಸುಲಭವಾಗಿದೆ.

ಐಫೋನ್ ಅನ್ನು ಆ ಕವರ್ ಒಳಗೆ ಇಟ್ಟ ತಕ್ಷಣ ತನ್ನಿಂದ ತಾನೆ ಕವರ್ ಮುಚ್ಚುತ್ತದೆ. ಈ ಸಾಧನದಲ್ಲಿ 2 ಇಂಟಿಗ್ರೇಟೆಡ್ ಸ್ಪೀಕರ್ ಬಳಸಲಾಗಿದೆ.ಈ ಅಡ್ಮಾನ್ ಅತ್ಯಧಿಕವಾದ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದನ್ನು ಕೊಳ್ಳುವಾಗ ಟ್ರಾವಲ್ ಚಾರ್ಜರ್ ಸಹ ದೊರಕುವುದು. ಇದರಲ್ಲಿ ಎರಡು ಹೆಡ್ ಪೋನ್ ಜಾಕ್ ಇದ್ದು ಸಂಗೀತವನ್ನು ಗೆಳೆಯರ ಜೊತೆ ಸೇರಿ ಆನಂದಿಸಬಹುದಾಗಿದೆ.

ಉತ್ತಮ ಗುಣಮಟ್ಟದ ಶಬ್ದವನ್ನು ನೀಡುವ ಈ ಅಡ್ಮಾನ್ ಕೇಸ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 6,500 ಮತ್ತು ಅಡ್ಮಾನ್ LT ರು..4, 500 ಬೆಲೆಯನ್ನು ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X