ಟಿವಿಯಲ್ಲಿ ಬಳಸಬಹುದಾದ ಸೌಂಡ್ ಬಾರ್ ಸ್ಪೀಕರ್

|
ಟಿವಿಯಲ್ಲಿ ಬಳಸಬಹುದಾದ ಸೌಂಡ್ ಬಾರ್ ಸ್ಪೀಕರ್

ಟಿವಿಯಲ್ಲಿ ಸೌಂಡ್ ಬಾರ್ ಅನ್ನು ಯಾವುದೆ ವೈರ್ ಸಹಾಯವಿಲ್ಲದೆ ಸುಮ್ಮನೆ ಪ್ಲಗ್ ಮಾಡಿ, ಅದರಿಂದ ಉತ್ತಮ ಗುಣಮಟ್ಟ ಶಬ್ದವನ್ನು ನೀಡಿದರೆ ತುಂಬಾ ಖುಷಿಯಾಗುತ್ತದೆ ಅಲ್ಲವೆ?

ಟಿವಿ ಬಳಕೆದಾರರಿಗೆ ಉತ್ತಮ ಶಬ್ದದಿಂದ ಮನರಂಜನೆಯನ್ನು ನೀಡಲು ಎನರ್ಜಿ ಎರಡು ಸೌಂಡ್ ಬಾರ್ ಪವರ್ ಬಾರ್ ಮತ್ತು ಪವರ್ ಬಾರ್ ಎಲೈಟ್ ಅನ್ನು ತಯಾರಿಸಿದೆ.ಇದು ಟಿವಿ ಮತ್ತು ಸಿನಿಮಾ ನೋಡುವಾಗ ಅಧಿಕ ಗುಣಮಟ್ಟದ ಶಬ್ದವನ್ನು ನೀಡಿ ನಿಮಗೆ ಸಂಪೂರ್ಣವಾಗಿ ಮನರಂಜನೆಯನ್ನು ನೀಡುತ್ತದೆ.

ಪವರ್ ಎಲೈಟ್ ನಲ್ಲಿ ವೈರ್ ಲೆಸ್ 10 ಇಂಚಿನ ಸಬ್ ವೂಫರ್ ಇದ್ದು ಇದನ್ನು ಸೌಂಡ್ ಬಾರ್ ಅನ್ನು ಪ್ಲಗ್ ಗೆ ಸಿಕ್ಕಿಸಿದ ತಕ್ಷಣವೆ ಜೋಡಿಸಬೇಕು.

ಪವರ್ ಬಾರ್ ಮಾಡಲ್ 8 ಇಂಚಿನ ವೈರ್ ಲೆಸ್ ಸಬ್ ವೂಫರ್ ಹೊಂದಿದೆ. ಇದು ಆಕರ್ಷಕವಾದ ಕಪ್ಪು ಬಣ್ಣವನ್ನು ಹೊಂದಿದ್ದು ಟಿವಿ ರಿಮೋಟ್ ಬಳಸಿ ನಿಯಂತ್ರಿಸಬಹುದಾಗಿದೆ. ಇದಲ್ಲದೆ 1.5m ಆಪ್ಟಿಕಲ್ ಕೇಬಲ್ ಸಹ ಇದ್ದು, ಪವರ್ ಬಾರ್ ಎಲೈಟ್ ನಲ್ಲಿ ಆಕರ್ಷಕವಾದ ಕ್ರೆಡಿಟ್ ಕಾರ್ಡ್ ರೀತಿಯ ರಿಮೋಟ್ ಇದೆ.ಟಿವಿಯಲ್ಲಿ ಯಾವುದೆ ರೀತಿಯ ಶಬ್ದ ಬಂದರು ಅದನ್ನು ಉತ್ತಮ ಗುಣಮಟ್ಟದಲ್ಲಿ ಪರಿವರ್ತಿಸಿ ಬಳಕೆದಾರರಿಗೆ ನೀಡುತ್ತದೆ.

ಈ ಸೌಂಡ್ ಬಾರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಎನರ್ಜಿ ಕಂಪನಿಯು ಸೌಂಡ್ ಬಾರ್ ಎಲೈಟ್ ಬೆಲೆ ರು. 31,285 ಮತ್ತಿ ಪವರ್ ಬಾರ್ ಬೆಲೆ ರು.20,855 ಎಂದು ಪ್ರಕಟಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X