ಬ್ಲೂಟೂಥ್ ಸಾಧನಗಳಿಗೆ ಈ ಜೀನಿಯಸ್ ಹೆಡ್ ಸೆಟ್

|
ಬ್ಲೂಟೂಥ್ ಸಾಧನಗಳಿಗೆ ಈ ಜೀನಿಯಸ್ ಹೆಡ್ ಸೆಟ್

ಇನ್ಸ್ಪಾನ್ ಬ್ಲಟೂಥ್ ಸ್ಟಿರಿಯೊ ಹೆಡ್ ಸೆಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು ಇದನ್ನು ಜೀನಿಯಸ್ HS905BT ಎಂದು ಹೆಸರಿಸಲಾಗಿದೆ. ಈ ಹೆಡ್ ಸೆಟ್ ಅನ್ನು ಮೊಬೈಲ್ ಫೋನ್, ಐಪ್ಯಾಡ್, ಟ್ಯಾಬ್ಲೆಟ್ ಹೀಗೆ ಬ್ಲಟೂಥ್ ಇರುವ ಯಾವುದೇ ಸಾಧನಗಳಲ್ಲಿ ಕೂಡ ಬಳಸಬಹುದಾಗಿದೆ.

ಈ ಸ್ಪೀಕರ್ ಮುಖ್ಯವಾಗಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಅತ್ಯಾಧುನಿಕ ಆಡಿಯೊ ಡಿಸ್ಟ್ರಿಬ್ಯೂಷನ್ ಪ್ರೊಫೈಲ್: ಇದು ಬ್ಲೂಟೂಥ್ ಇರುವ ಸಾಧನಗಲ್ಲಿ ಅತ್ಯುತ್ತಮವಾದ ಶಬ್ದವನ್ನು ನೀಡಲು ಸಹಾಯ ಮಾಡುತ್ತದೆ. ಇದನ್ನು ಮ್ಯೂಸಿಕ್ ಅನ್ನು ಪ್ಲೇ ಮತ್ತು ಕಂಟ್ರೋಲ್ ಮಾಡಲು ಬಳಸಬಹುದು.

* HS-905BT ನಲ್ಲಿ ಉತ್ತಮ ಗುಣಮಟ್ಟದ ಹೆಡ್ ಫೋನ್ ಗಳನ್ನು ಮತ್ತು ಮೈಕ್ರೊ ಫೋನ್ ಗಳನ್ನು ಅಳವಡಿಸಾಗಿದೆ. ಇದನ್ನು ಕರೆಯನ್ನು ಸ್ವೀಕರಿಸಲು ಮತ್ತು ಕರೆಯನ್ನು ನಿರಾಕರಿಸಲು ಕೂಡ ಬಳಸಬಹುದು.

ಮುಖ್ಯ ಲಕ್ಷಣಗಳು:

* ಕರೆ ಮತ್ತು ಪ್ಲೇ ಬ್ಯಾಕ್ ನಿರ್ವಹಣೆ ಮಾಡುವಂತಹ ಬ್ಲೂಟೂಥ್ ಸ್ಟಿರಿಯೊ ಹೆಡ್ ಸೆಟ್

* ಬ್ಲೂಟೂಥ್ ಇರುವ ಮೊಬೈಲ್ ಫೋನ್ ಗಳಲ್ಲಿ ಮತ್ತು ಮ್ಯೂಸಿಕ್ ಸಾಧನಗಳಲ್ಲಿ ಬಳಸಲು ಸುಲಭವಾಗಿದೆ.

* ಬ್ಲೂಟೂಥ್ ರೇಂಜ್ 10 ಮಿ

* ಹೆಡ್ ಫೋನ್ ಗೆ ಜೋಡಿಸಲು ಸ್ಟಿರಿಯೊ ಚಿಕ್ಕ ಜಾಕ್

* 6 ಗಂಟೆ ಹಾಡುಗಳನ್ನು ನಿರಂತರವಾಗಿ ಕೇಳಬಹುದಾಗಿದ್ದು, 165 ಗಂಟೆ ಸ್ಟಾಂಡ್ ಬೈ ಟೈಮ್ ಹೊಂದಿದೆ.

* ಪೂರ್ಣವಾಗಿ ಚಾರ್ಜ್ ಆಗಲು 2 ಗಂಟೆಗಳ ಚಾರ್ಜ್ ಮಾಡಬೇಕಾಗುತ್ತದೆ.

* 105dB ಸೆನ್ಸಟಿವಿಟಿ ಮತ್ತು 10 ohm ಇಂಪೆಡೆನ್ಸ್ ಹೊಂದಿದೆ.

ಈ ಹೆಡ್ ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 3000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X