ಪರಿಸರ ಸ್ನೀಹಿ ನಾಯ್ಸ್ ಜೀರೋ O+ ಹೆಡ್ ಫೋನ್

Posted By:

noisezero-0+ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿಯನ್ನು ಉಂಟುಮಾಡುವ ಅನೇಕ ಸಮ್ಮೇಳನಗಳು ನಡೆಯುತ್ತಿವೆ. ಜನರು ಸಹ ಇದರ ಬಗ್ಗೆ ಮೊದಲಿಗಿಂತ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿವಳಿಕೆಯನ್ನು ಬೆಳಸಿಕೊಳ್ಳುತ್ತಿದ್ದಾರೆ. ಪ್ರಪಂಚದ ಎಲ್ಲಡೆ ಪ್ರಕೃತಿ ರಕ್ಷಣೆಯ ಕೂಗು ಕೇಳಿ ಬರುತ್ತಿರುವಾಗ ಆಡಿಯೊ ಕಂಪನಿಗಳು ಕೂಡ ತಮ್ಮ ಗಮನವನ್ನು ಅದರತ್ತ ಹರಿಸಿದೆ ಎನ್ನುವುದು EOps ತಯಾರಿಸಿದ ನಾಯ್ಸ್ ಜೀರೋ O+ಪರಿಸರ ಸ್ನೇಹಿ ಹೆಡ್ ಫೋನ್ ನಿಂದ ತಿಳಿದು ಬರುತ್ತದೆ.

ಪರಿಸರ ಸ್ನೇಹಿ ನಾಯ್ಸ್ ಜೀರೋ O+ ಹೆಡ್ ಫೋನ್ ಉತ್ತಮ ಗುಣ ಮಟ್ಟದ ಶಬ್ದವನ್ನು ನೀಡುವುದರ ಜೊತೆಗೆ ಆಕರ್ಷಕವಾದ ಗುಣಲಕ್ಷಣವನ್ನು ಹೊಂದಿದೆ. ತ್ಯಾಜ್ಯ ವಸ್ತುಗಳನ್ನು ಮರುಬಳಿಕೆ ಮಾಡಿ ಈ ಹೆಡ್ ಫೋನ್ ತಯಾರಿಸಲಾಗಿದೆ. ಮರುಬಳಿಕೆ ಮಾಡಬಹುದಾದ ಸ್ಟೀಲ್ ಅಥವಾ ಅಲ್ಯುಮಿನಿಯಂ ಬಳಸಿ ಈ ಹೆಡ್ ಫೋನ್ ತಯಾರಿಸಿದ್ದು ಇನ್ ಕಾರ್ಪೋರೇಟಡ್ ಕಾನ್ ಸ್ಟ್ರಚ್ ಬಯೋ ಪ್ಲಾಸ್ಟಿಕ್ ಬಳಸಲಾಗಿದೆ.

ಇದರ ಇಯರ್ ಕಪ್ ಮಾರುಕಟ್ಟೆಯಲ್ಲಿರುವ ಇತರ ಹೆಡ್ ಫೋನ್ ಗಳ ಇಯರ್ ಕಪ್ ಗಳಿಗೆ ಹೋಲಿಸಿದರೆ ಅವುಗಳಿಗಿಂತ ಉತ್ತಮವಾಗಿದೆ. ಈ ಹೆಡ್ ಫೋನ್ 2 ಬಣ್ಣದಲ್ಲಿ ಲಭ್ಯವಿದೆ. ಇದರಲ್ಲಿ 50 mm ಟೈಟಾನಿಯಂ ಲೇಪಿತ HD ಡ್ರೈವರ್ ಹೊಂದಿದೆ. ಇದು ಕಿವಿಗಳಿಗೆ ಮಧುರವೆನಿಸುವ ಶಬ್ದವನ್ನು ಉಂಟು ಮಾಡುತ್ತದೆ. ಇದರಿಂದ ಅತ್ಯುತ್ತಮವಾದ ಸಂಗೀತವನ್ನು ಕೇಳಬಯಸುವರು ಐಪೋಡ್ ಮತ್ತು ಐಫೋನ್ ಗಳಲ್ಲಿ ಬಳಸಬಹುದಾಗಿದೆ.ಈ ಪರಿಸರ ಸ್ನೇಹಿ ಹೆಡ್ ಫೋನ್ ಮಾರುಕಟ್ಟೆಗೆ ಬರಬೇಕಾಗಿದ್ದು ಇದರ ಬೆಲೆ ಬಗ್ಗೆ ಇನ್ನಷ್ಟೆ ತಿಳಿದು ಬರಬೇಕಾಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot