ಜಿಎಸ್‌ಟಿ ಎಫೆಕ್ಟ್..ಮೊಬೈಲ್ ಮಾರಾಟದಲ್ಲಿ ಭಾರಿ ಇಳಿಕೆ!.ಚೀನಾ ಕಂಪೆನಿಗಳು ಕಂಗಾಲು!!

ಜುಲೈ 1 ರಿಂದ ಭಾರತದಲ್ಲಿ ಜಾರಿಯಾಗಿರುವ ಜಿಎಸ್‌ಟಿಯಿಂದಾಗಿ ಮೊಬೈಲ್ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

|

2017 ನೇ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆ ತಲ್ಲಣಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ.! ಜುಲೈ 1 ರಿಂದ ಭಾರತದಲ್ಲಿ ಜಾರಿಯಾಗಿರುವ ಜಿಎಸ್‌ಟಿಯಿಂದಾಗಿ ಮೊಬೈಲ್ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!!

ಭಾರತದಲ್ಲಿ ಜಿಎಸ್‌ಟಿ ಜಾರಿಯಾದ ನಂತರ ಜಿಎಸ್‌ಟಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದ್ದರಿಂದ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಕೊರತೆಯಿಂದಾಗಿ ಮೊಬೈಲ್ ಮಾರುಕಟ್ಟೆ ತೊಂದರೆ ಅನುಭವಿಸಿದೆ ಎಂದು ಕ್ಯಾನಾಲಿಸ್ ಅನಾಲಿಸ್ಟ್ ರುಶಬ್ ದೋಶಿ ಅವರು ಹೇಳಿದ್ದಾರೆ.!!

ಇನ್ನು ಇದರಿಂದಾಗಿ ಭಾರತದಲ್ಲಿ ಶೇ50 ಕ್ಕೂ ಹೆಚ್ಚು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಚೀನಾ ಕಂಪೆನಿಗಳಿಗೆ ದೊಡ್ಡ ಹೊಡೆತಬಿದ್ದಿದ್ದು, ಸ್ಯಾಮ್‌ಸಂಗ್ ಸಮಸ್ಥಿತಿಯಲ್ಲಿಯೇ ಮುಂದುವರೆದಿದೆ.! ಹಾಗಾದರೆ, ಯಾವ ಯಾವ ಮೊಬೈಲ್ ಕಂಪೆನಿಗಳ ಬೆಳವಣಿಗೆ ದರ ಎಷ್ಟು ಇಳಿಕೆಯಾಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸ್ಯಾಮ್‌ಸಂಗ್ ಫಸ್ಟ್!..ಶೀಯೋಮಿ ಸೆಕೆಂಡ್!!

ಸ್ಯಾಮ್‌ಸಂಗ್ ಫಸ್ಟ್!..ಶೀಯೋಮಿ ಸೆಕೆಂಡ್!!

ಮೊಬೈಲ್ ಮಾರುಕಟ್ಟೆಯ ಎರಡನೇ ತ್ರೈ ಮಾಸಿಕದಲ್ಲಿ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಮಾತ್ರ ಉತ್ತಮ ಸ್ಥಿತಿಯನ್ನು ಹೊಂದಿವೆ ಎಂದು ರಿಪೋರ್ಟ್ ಹೇಳಿದೆ.! ಇನ್ನುಳಿದ ಕಂಪೆನಿಗಳು ನೆಲಕಚ್ಚಿದ್ದು, ಮೊಬೈಲ್ ಮಾರುಕಟ್ಟೆಯ ಮೊದಲೆರಡು ಸ್ಥಾನಗಳನ್ನು ಸ್ಯಾಮ್‌ಸಂಗ್ ಮತ್ತು ಶಿಯೋಮಿ ಕಂಪೆನಿಗಳೇ ಪಡೆದಿವೆ.!!

ಸ್ಯಾಮ್‌ಸಂಗ್ ಬ್ರಾಂಡ್ ಕುಸಿದಿಲ್ಲ.!!

ಸ್ಯಾಮ್‌ಸಂಗ್ ಬ್ರಾಂಡ್ ಕುಸಿದಿಲ್ಲ.!!

ಭಾರತದಲ್ಲಿ ನೋಕಿಯಾ ನಂತರ ಹೆಚ್ಚು ಹೆಸರಾಗಿರುವ ಸ್ಯಾಮ್‌ಸಂಗ್ ಈಗಲೂ ಭಾರತೀಯರ ಮನಸ್ಸಿನಲ್ಲಿ ಅಚ್ಚುಳಿದಿದೆ. ಪ್ರಸ್ತುತ ಭಾರತದಲ್ಲಿ 25% ಗೂ ಹೆಚ್ಚು ಮಾರುಕಟ್ಟೆಯನ್ನು ಕೋರಿಯಾದ ಕಂಪೆನಿ ಸ್ಯಾಮ್‌ಸಂಗ್ ಆಳುತ್ತಿದೆ.!!

ಭಾರತದ 50% ಮಾರುಕಟ್ಟೆ ಚೀನಾ ಹಿಡಿತದಲ್ಲಿ!!

ಭಾರತದ 50% ಮಾರುಕಟ್ಟೆ ಚೀನಾ ಹಿಡಿತದಲ್ಲಿ!!

ಜಾಹಿರಾತು ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದಾಗಿ ಚೀನಾದ ಮೊಬೈಲ್ ಕಂಪೆನಿಗಳು ಭಾರತದ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ.! ಭಾರತದ ಶೇ 50% ಪರ್ಸೆಂಟ್ ಮೊಬೈಲ್ ಮಾರುಕಟ್ಟೆ ಚೀನಾ ಮೊಬೈಲ್‌ ಕಂಪೆನಿಗಳ ಹಿಡಿತದಲ್ಲಿಯೇ ಇದೆ.!!

ಚೀನಾ ಕಂಪೆನಿಗಳು ಕಂಗಾಲು!!

ಚೀನಾ ಕಂಪೆನಿಗಳು ಕಂಗಾಲು!!

ಈಗಾಗಲೇ ಭಾರತೀಯರ ಕೋಪಕ್ಕೆ ತುತ್ತಾಗಿರುವ ಚೀನಾ ಮೊಬೈಲ್‌ ಕಂಪೆನಿಗಳಿಗೆ ಈ ಭಾರಿಯ ಮೊಬೈಲ್ ಮಾರಾಟದಿಂದ ಶಾಕ್ ಆಗಿವೆ ಆಗಿದ್ದು, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಇಳಿಕೆ ಆಗಿರುವುದು ಚೀನಾ ಕಂಪೆನಿಗಳೇ ಹೆಚ್ಚು ಲಾಸ್ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.!!

ಟಾಪ್ ಐದು ಮೊಬೈಲ್ ಕಂಪೆನಿಗಳು ಇವು!!

ಟಾಪ್ ಐದು ಮೊಬೈಲ್ ಕಂಪೆನಿಗಳು ಇವು!!

ಭಾರತದಲ್ಲಿ ಪ್ರಸ್ತುತ ಮೊಬೈಲ್ ಮಾರಾಟದಲ್ಲಿ ಸ್ಯಾಮ್‌ಸಂಗ್ ಮೊದಲನೇ ಸ್ಥಾನದಲ್ಲಿದ್ದು, ನಂತರದ ನಾಲ್ಕು ಸ್ಥಾನಗಳು ಚೀನಾ ಕಂಪೆನಿಗಳ ಪಾಲಾಗಿದೆ.!! ಈ ಭಾರಿ ಶಿಯೋಮಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, ವಿವೊ, ಒಪ್ಪೊ ಮತ್ತು ಲೆನೊವೊ ಕಂಪೆನಿಗಳು ನಂತರ ಸ್ಥಾನಗಳನ್ನು ಪಡೆದುಕೊಂಡಿವೆ.!!

<strong>3000ರೂ.ಬೆಲೆಯ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಉಚಿತವಾಗಿ ಲಭ್ಯ!!..ಹೇಗೆ ಗೊತ್ತಾ?</strong>3000ರೂ.ಬೆಲೆಯ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಉಚಿತವಾಗಿ ಲಭ್ಯ!!..ಹೇಗೆ ಗೊತ್ತಾ?

Best Mobiles in India

English summary
Smartphone sales declined in India for the first time in history due to the lack of GST awareness, claims the Canalys report.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X