ಟಿವಿಯಲ್ಲಿ ಬಳಸಬಹುದಾದ ಹಾರ್ನ್ ಸ್ಪೀಕರ್

Posted By:
ಟಿವಿಯಲ್ಲಿ ಬಳಸಬಹುದಾದ ಹಾರ್ನ್ ಸ್ಪೀಕರ್

ಹೋಂ ಸ್ಪೀಕರ್ ಗಳು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದಲೆ ಮನೆಯ ಟಿವಿಯಲ್ಲಿಯೆ ಚಿತ್ರಮಂದಿರದಲ್ಲಿ ನೋಡಿದಾಗ ಸಿಗುವ ಅನುಭವಕ್ಕಾಗಿ ಅನೇಕ ಸ್ಪೀಕರ್ ಗಳು ಮಾರುಕಟ್ಟೆಗೆ ಬರುತ್ತಿದೆ. ಇದೀಗ ಬ್ರಿಟನ್ ಕಂಪನಿಯಾದ ಫರ್ಗ್ಯೂಸನ್ ಹಿಲ್ ಇದೀಗ ಹಾರ್ನ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಇದು ದೊಡ್ಡದಾದ ಲೌಡ್ ಸ್ಪೀಕರ್ ಆಗಿದ್ದು 1.65m ಎತ್ತರವನ್ನು ಹೊಂದಿದೆ.

ಇದನ್ನು ಟಿವಿಗೆ ಬಳಸಲಾಗುತ್ತಿದ್ದು ಇದನ್ನು ಗೋಡೆಯಲ್ಲಿ ನೇತಾಕಬಹುದಾಗಿದೆ. ಇದರಲ್ಲಿ ಸಬ್ ವೂಫರ್ ಡ್ಯುಯೆಲ್ ಡ್ರೈವರ್ ಯೂನಿಟ್ ಇದ್ದು ಅದರಲ್ಲಿ ಆಂಪ್ಲಿಫೈಯರ್ ಅಳವಡಿಸಲಾಗಿದೆ. ಇದರಲ್ಲಿ FH009 ಹಾರ್ನ್ ಸ್ಪೀಕರ್ ಮತ್ತು 4 RCA ಅನಾಲೋಗ್ ಇನ್ ಪುಟ್, ಒಂದು USB ಪೋರ್ಟ್, 3.5mm ಮಿನಿ ಜಾಕ್ ಅನ್ನು ಹೊಂದಿದೆ.

ಇದನ್ನು ಬೇಕಾದರೆ ಮುಂಚಿತವಾಗಿ ಬೇಡಿಕೆಯನ್ನು ಸಲ್ಲಿಸಿ ಪಡೆದು ಕೊಳ್ಳಬಹುದಾಗಿದ್ದು ಇದರ ಬೆಲೆ ಬ್ರಿಟನ್ ನಲ್ಲಿ ರು.65, 000 ಭಾರತಕ್ಕೆ ತರುವಾಗ ಇನ್ನು ಸ್ವಲ್ಪ ಹೆಚ್ಚು ಬೆಲೆ ನೀಡಬೇಕಾಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot