ಇ-ಬೇ ಇಂಡಿಯಾದಲ್ಲಿ ಎಲ್‌ಜಿ ನೆಕ್ಸಸ್‌ 4 ಪ್ರೀ-ಆರ್ಡರ್‌ನಲ್ಲಿ ಲಭ್ಯ

By Vijeth Kumar Dn
|

ಇ-ಬೇ ಇಂಡಿಯಾದಲ್ಲಿ ಎಲ್‌ಜಿ ನೆಕ್ಸಸ್‌ 4 ಪ್ರೀ-ಆರ್ಡರ್‌ನಲ್ಲಿ ಲಭ್ಯ
ಫೋಟೋ ಗ್ಯಾಲರಿ...

ಗೂಗಲ್‌ ತನ್ನಯ ಅಧಿಕೃತ ಬ್ಲಾಗ್‌ ಮೂಲಕ ಆಕ್ಟೋಬರ್‌ 29 ರಂದೇ ಎಲ್‌ಜಿ ನೆಕ್ಸ್‌ಸ್‌ 4 ಸ್ಮಾರ್ಟ್‌ಫೋನ್‌ ಅನಾವರಣ ಪಡಿಸಿತ್ತು. ಆದರೆ ಇದೇ ಸಂದರ್ಭದಲ್ಲಿ ನ್ಯೂಯಾರ್ಕ್‌ ನಗರವನ್ನು ಆವರಿಸಿದ ಸ್ಯಾಂಡೀ ಚಂಡಮಾರುತದಿಂದಾಗಿ ನೂತನ ಸ್ಮಾರ್ಟ್‌ಫೋನ್‌ನ ಬಿಡುಗಡೆ ಕೊಂಚ ತಡವಾಗಿದ್ದು ನವೆಂಬರ್‌ 13 ರಂದು ಮಾರುಕಟ್ಟೆಗೆ ಕಾಲಿರಿಸುವ ಸಾಧ್ಯತೆಗಳಿವೆ.

ಗೂಗಲ್‌ ತಿಳಿಸಿರುವಂತೆ ನೂತನ ಎಲ್‌ಜಿ ನೆಕ್ಸಸ್‌ 4 ಹ್ಯಾಂಡ್‌ಸೆಟ್‌ ಗೂಗಲ್‌ ಪ್ಲೇಸ್ಟೋರ್‌ ಮೂಲಕ ಅಮೇರಿಕಾ, ಬ್ರಿಟನ್‌ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಬಿಡುಗಡೆ ಯಾಗಲಿದೆ, ಹಾಗೂ ಭಾರತೀಯ ಮಾರುಕಟ್ಟೆಯಲ್ಲಿನ ಬಿಡುಗಡೆಯ ದಿನಾಂಕದ ಕುರಿತಾಗಿ ಸಂಸ್ಥೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ವಿಮರ್ಶಕರುಗಳು ನವೆಂಬರ್‌ನಲ್ಲಿಯೇ ನೂತನ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅಂದಹಾಗೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಪ್ರಿಯರಿಗಾಗಿ ಎಲ್‌ಜಿ ನೆಕ್ಸಸ್‌ ಸ್ಮಾರ್ಟ್‌ಫೋನ್‌ನಲ್ಲಿ ಗೋಗಲ್‌ನ ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ. ಅಂದಹಾಗೆ ಎಲ್‌ಜಿ ನೆಕ್ಸಸ್‌ ಖರೀದಿಸ ಬೇಕೆಂದಿರುವ ಭಾರತೀಯ ಗ್ರಾಹಕರುಗಳಿಗೊಂದು ಸಿಹಿ ಸುದ್ಧಿ. ಜಾಗತಿಕ ಬಹುದೊಡ್ಡ ಆನ್‌ಲೈನ್‌ ಮಳಿಗೆಯಾದಂತಹ ಇ-ಬೇ ಭಾರತದಲ್ಲಿ ನೂತನ ಎಲ್‌ಜಿ ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ನ 8ಜಿಬಿ ಹಾಗೂ 16ಜಿಬಿ ಮಾದರಿಯನ್ನು ಕ್ರಮಾವಾಗಿ ರೂ 23,490 ಹಾಗೂ ರೂ. 27,490 ದರದಲ್ಲಿ ಪ್ರಿ-ಆರ್ಡರ್‌ನಲ್ಲಿ ನೀಡುತ್ತಿದ್ದು, ಭಾರತೀಯ ಗ್ರಾಹಕರುಗಳು ಪ್ರಿ-ಆರ್ಡರ್‌ ನಲ್ಲಿ ನೂತನ ಸ್ಮಾರ್ಟ್‌ಫೋನ್‌ ಖರೀದಿಸಿ ಕೊಳ್ಳಬಹುದಾಗಿದೆ. ಆನ್‌ಲೈನ್‌ನಲ್ಲಿ ಮತ್ತಷ್ಟು ಸ್ಮಾರ್ಟ್‌ಫೋನ್‌ ಖರೀದಿಗಾಗಿ ಗೋಪ್ರೋಬೋಗೆ ಬೇಟಿನೀಡಿ.

ಮತ್ತಷ್ಟು ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ...

ಅಂದಹಾಗೆ ನೂತನ ಎಲ್‌ಜಿ ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ನ ವಿಶೇಷತೆ ಕುರಿತಾಗಿ ಹೇಳುವುದಾದರೆ 4.7-ಇಂಚಿನ IPS ದರ್ಶಕ ದೊಂದಿಗೆ 1280 x 768 ಪಿಕ್ಸೆಲ್ಸ್‌ ಹೊಂದಿದ್ದು ಝೀರೋ ಗ್ಯಾಪ್‌ ತಂತ್ರಜ್ಞಾನ ಹೊಂದಿದೆ. ಇದಲ್ಲದೇ ಕ್ವಾಡ್ ಕೋರ್‌ 1.5GHz ಕ್ವಾಲ್ಕಾಮ್‌ ಸ್ನಾಪ್‌ ಡ್ರಾಗನ್‌ ಎಸ್‌4 ಪ್ರೊ ಪ್ರೊಸೆಸರ್‌, 2ಜಿಬಿ RAM, 8ಜಿಬಿ/16ಜಿಬಿ ಆಮತರಿಕ ಸ್ಟೋರೇಜ್‌, 8ಎಂಪಿ ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 1.3 ಎಂಪಿ ನ ಮುಂಬದಿಯ ಕ್ಯಾಮೆರಾ, ಎನ್‌ಎಫ್‌ಸಿ, ವೈರ್ಲೆಸ್‌ ಚಾರ್ಜಿಂಗ್‌, ವೈ-ಫೈ, ಬ್ಲೂಟೂತ್‌ ಹಾಗು 2,100 mAh Li-Po ಬ್ಯಾಟರೀ ನೀಡಲಾಗಿದ್ದು 15.3 ಗಂಟೆಗಳ ಟಾಕ್‌ಟೈಮ್‌ ಹಾಗೂ 390 ಗಳಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಟಾಪ್‌ 5 : ಅತ್ಯುತ್ತಮ ಫ್ರಂಟ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X