ಮಾರ್ಷಲ್ ಮೇಜರ್ ವೈಟ್ ಹೆಡ್ ಫೋನ್

|
ಮಾರ್ಷಲ್ ಮೇಜರ್ ವೈಟ್  ಹೆಡ್ ಫೋನ್

ಮಾರ್ಷಲ್ ಕಂಪನಿಯು ಒಳ್ಳೆಯ ಗುಣಮಟ್ಟದ ಆಂಪ್ಲಿಫೈಯರ್, ಮತ್ತು ಮಾನಿಟರ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವ ಕೆಲಸವನ್ನು ತುಂಬಾ ಸಮಯದಿಂದ ಮಾಡುತ್ತಾ ಬಂದಿದೆ, ಆದರೆ ಇದೀಗ ಈ ಕಂಪನಿ ಚಿತ್ತ ಹೆಡ್ ಫೊನ್ ಮೇಲೆ ಸಹ ಬಿದ್ದಿದ್ದು ಹೆಡ್ ಫೋನ್ ಗಳ ಮೂಲಕ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿದೆ.

ಈ ಮಾರ್ಷಲ್ ಈಗಾಗಲೆ ವೈಟ್ ಮಾರ್ಷಲ್ ಮೇಜರ್ ಹೆಡ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೆಡ್ ಫೋನ್ ರೆಟ್ರೊ ಆಕಾರದಲ್ಲಿದ್ದು ಅದರ ಇಯರ್ ಕಪ್ ಚೌಕ ಆಕಾರದಲ್ಲಿದ್ದು ಹೊರಗಿನಿಂದ ನೋಡಲು ಈ ಹೆಡ್ ಫೋನ್ ಸಂಪೂರ್ಣವಾಗಿ ಬಿಳಿ ಬಣ್ಣವನ್ನು ಹೊಂದಿದೆ. ಹೆಡ್ ಫೋನ್ ನ ಒಳಗಡೆ ಇಯರ್ ಕಪ್ ಕಪ್ಪು ಬಣ್ಣದಲ್ಲಿದೆ. ಇದರ ಆಂಪ್ಲಿಫೈಯರ್ ನಲ್ಲಿ ಬಳಸಿದಂತಹ ವಿನಿ 1 ಅನ್ನು ಬಳಸಲಾಗಿದೆ.

ಇದು ವಿನ್ಯಾಸದಲ್ಲಿ ಗಟ್ಟಿಯಾಗಿದ್ದು, ಇಯರ್ ಕಪ್ ಕಿವಿಗೆ ಸರಿಯಾಗಿ ಹೊಂದಿಕೊಂಡು ಕೂರುವಂತೆ ದೊಡ್ಡದಾಗಿದೆ. ಅಲ್ಲದೆ ಈ ಇಯರ್ ಕಪ್ ಅನ್ನು ಚೆನ್ನಾಗಿಇ ಪ್ಯಾಡ್ ಮಾಡಲಾಗಿದ್ದು ಮೃದುವಾಗಿದೆ.ಈ ಹೆಡ್ ಫೋನ್ ನಲ್ಲಿ ಕನೆಕ್ಟರ್ 3.5 mm ಹೊಂದಿದೆ. ಇದನ್ನು 3.5 mm ಹೆಡ್ ಫೋನ್ ಜಾಕ್ ಇರುವ ಮೊಬೈಲ್ ಗಳಿಗೆ ಜೋಡಿಸಬಹುದಾಗಿದೆ. ಈ ಇಯರ್ ಫೋನ್ ಡ್ರೈವರ್ 40 mm ಆಗಿದ್ದು ಇದು ಚಲಿಸುವ ಕಾಯಿಲ್ ರೀತಿಯಲ್ಲಿದೆ. ಇದರ ಸೆನ್ಸಟಿವಿಟಿ 1 KHz ಅಂದರೆ 121dBನಷ್ಟಿದೆ.

ಇದರಲ್ಲಿ ಶಬ್ದದ ಕಂಪನಾಂಕದ ಮಿತಿಯು 20Hz ಮತ್ತು 20, 000 Hz ರ ನಡುವೆ ಇದೆ. ಇದರ ಇಂಪೆಡೆನ್ಸ್ 32 ohms ಆಗಿದ್ದು ಇದರ ಕಂಪನಾಕ 1 KHz ಆಗಿದೆ.ಇದು ಉತ್ತಮ ಗುಣ ಮಟ್ಟದ ಶಬ್ದವನ್ನು ನೀಡುವುದರಿಂದ ಬಳಕೆದಾರರ ಮೆಚ್ಚುಗೆಯನ್ನು ಗಳಿಸುವುದರಲ್ಲಿ ಯಾವುದೆ ಸಂಶಯವಿಲ್ಲ. ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು.6, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X