Subscribe to Gizbot

ಬರಲು ಸಿದ್ಧವಾಗಿದೆ ಮಾಡರ್ನ್ ವಾರ್ ಫೇರ್ 3

Posted By:
ಬರಲು ಸಿದ್ಧವಾಗಿದೆ ಮಾಡರ್ನ್ ವಾರ್ ಫೇರ್ 3

ಲೈಫ್ ಸ್ಟೈಲ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿಭಾಗವನ್ನು ತಯಾರಿಸುವ ಮುನಿಶ್ಯೊ ಕಂಪನಿ ಪ್ರಪಂಚದಲ್ಲಿಯೆ ಮೊದಲ ಭಾರಿಗೆ 18-K ಕ್ಯಾರೆಟ್ ಗೋಲ್ಡ್ ಲೇಪಿತ ಇಯರ್ ಫೋನ್ ತಯಾರಿಸಿ ಭಾರಿ ಸುದ್ಧಿಯನ್ನು ಉಂಟು ಮಾಡಿತ್ತು. ಇದೀಗ ಈ ಕಂಪನಿ ಹೊಸ ಗೇಮಿಂಗ್ ಸಾಧನವಾದ ಮಾಡರ್ನ್ ವಾರ್ ಫೇರ್ 3 ಯನ್ನು ತಯಾರಿಸಿದ್ದುಮಾಡಿದ್ದು ಇದು COD ಪರಂಪರೆ ಹೊಂದಿದ್ದು ಇದರಲ್ಲಿ ಬಳಸಿರುವ ಗ್ರಾಫಿಕ್ಸ್ , ಶಬ್ದ, ಇದರ ಡಿಸೈನ್ 100% ಮನರಂಜನೆಯನ್ನು ಬಳಕೆದಾರರಿಗೆ ಕೊಡುವ ಸಾಮಾರ್ಥ್ಯವನ್ನು ಹೊಂದಿದೆ.

ಈ ಹೆಡ್ ಪೋನ್ ವಿನ್ಯಾಸವು ಬುಲೆಟ್ ರೀತಿ ಇದ್ದು ಆಕರ್ಷಕ ಗುಣಲಕ್ಷಣವನ್ನು ಹೊಂದಿದೆ. ಈ ಹೆಡ್ ಫೋನ್ ಹೊರಮೈಗೆ ಏರ್ ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಂ ಬಳಸಿ ತಯಾರಿಸಲಾಗಿದ್ದು , ಇದು ತುಂಬಾ ಹಗುರವಾಗಿದ್ದು ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ. ಇದು MW3 ಬಣ್ಣದಲ್ಲಿದ್ದು, ಜೆಟ್ ಬ್ಲ್ಯಾಕ್ ಮತ್ತು ಹಸಿರು ಬಣ್ಣದ ಕಾಂಬಿನೇಶನ್ ಇದನ್ನು ಮತ್ತಷ್ಟು ಸುಂದರವಾಗಿಗಿ ಕಾಣಿಸುಂತೆ ಮಾಡಿದೆ. ಈ ಹೆಡ್ ಪೋನ್ ಗಟ್ಟಿಯಾಗಿದ್ದು ಇದನ್ನು ಯಾವುದಾದರು ಮೇಲ್ಮೈಗೆ ಗುದ್ದಿದರು ಸಹ ಯಾವುದೆ ತೊಂದರೆ ಉಂಟಾಗುವುದಿಲ್ಲ.

ಆದ್ದರಿಂದ ಹೆಡ್ ಪೋನ್ ಜೊತೆಗೆ ಕೊಂಡೊಯ್ಯುವಾಗ ಏನಾಗುತ್ತದೆಯೊ ಎಂದು ಚಿಂತೆ ಮಾಡಬೇಕಾಗಿಲ್ಲ.ಇದರ ಕೇಬಲ್ ಕೇವ್ಲರ್ ಆಗಿದ್ದು , ಇದರ ಹೊರಮೈ ಗಟ್ಟಿ ಸ್ಟಲ್ ನಿಂದ ತಯಾರಿಸಿದಕ್ಕಿಂತ 5 ಪಟ್ಟು ಹೆಚ್ಚಾಗಿದೆ.

ಈ ಗೇಮಿಂಗ್ ಹೆಡ್ ಫೋನ್ ನಲ್ಲಿ ಗುಣಮಟ್ಟ ಕೂಡ ಉತ್ತಮ ರೀತಿಯಲ್ಲಿದ್ದು ಶಬ್ದದಲ್ಲಿ ಸ್ಪಷ್ಟತೆಯನ್ನು ಹೊಂದಿದೆ. ಇದರಲ್ಲಿ ಒಂದು ಬಟನ್ ಮಾತ್ರ ಇದ್ದು ಕರೆಯನ್ನು ಸ್ವೀಕರಿಸಲು ಮತ್ತು ಕಟ್ ಮಾಡಲು ಬಳಸಬಹುದಾಗಿದೆ.ಈ ಹೆಡ್ ಪೋನ್ ಇನ್ನಷ್ಟೆ ಮಾರುಕಟ್ಟೆಗೆ ಬರಬೇಕಾಗಿದ್ದು ಇದರ ಬೆಲೆಯನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot