ಪ್ಯೂರ್ ಕಂಟ್ರೋರ್ ಏರ್ ವೇವ್ ಡಕ್

Posted By:
ಪ್ಯೂರ್ ಕಂಟ್ರೋರ್ ಏರ್ ವೇವ್ ಡಕ್

ಏರ್ ವೇವ್ ಆಡಿಯೊ ಸಾಧನಗಳ ಮಾರುಕಟ್ಟೆಯಲ್ಲಿ ಪ್ಯೂರ್ ಕಂಪನಿಯು ನಾಯಕತ್ವದ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಇದರ ಸಾಧನಗಳಿಗೆ ಹೆಚ್ಚು ಬೇಡಿಕೆ ಇದ್ದು, ಇದರ ವಸ್ತುಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದೀಗ ಇದು ಪ್ಯೂರ್ ಕಂಟ್ರೋರ್ 100Di ಎಂಬ ಹೊಸ ಸಾಧನವನ್ನು ತಯಾರಿಸಿದೆ. ಆದರೆ ಈ ಸಾಧನವು ಐಫೋನ್ / ಐಪೋಡ್ ಡಕ್ ನಂತೆಯೆ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಿಗಿಂತ ವಿಶೇಷವಾದ ಕೆಲವು ಗುಣ ಲಕ್ಷಣಗಳನ್ನು ಹೊಂದಿದೆ. ಈ ಸಾಧನವನ್ನು ಇದರ ಹಳೆಯ ಮಾದರಿಗೆ ಹೋಲಿಸಿದರೆ ಸರಿ ಸುಮಾರು ಒಂದೇ ರೀತಿ ಇದ್ದು , ಈ 100Di ಸಾಧನವು ಹಳೆಯ ಪ್ಯೂರ್ ಕಂಟ್ರೋರ್ ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ಪ್ಯೂರ್ ಕಂಟ್ರೋರ್ ನೋಡಲು ಸಹ ಸುಂದರ ಮತ್ತು ಅರ್ಧ ವೃತ್ತಾಕಾರದ ರೀತಿಯಲ್ಲಿದ್ದು, ಡಕ್ ಅನ್ನು ಅದರ ಮುಂಭಾಗದಲ್ಲಿ ಹೊಂದಿದೆ. ಇದು ಗಾಢವಾದ ಬೂದು ಬಣ್ಣವನ್ನು ಹೊಂದಿದ್ದು , ಅದರ ತುದಿಯಲ್ಲಿ ಬೆಳ್ಳಿ ಬಣ್ಣದ ಲೇಪನವಿದೆ. ಡಕ್ ಕೂಡ ಅದೆ ಬಣ್ಣದಲ್ಲಿದ್ದು ಎದ್ದು ಕಾಣುವಂತೆ ಇದೆ. ಈ ಸಾಧನದ ಮೇಲ್ಭಾಗದ ಬಲ ಮತ್ತು ಎಡ ಭಾಗದಲ್ಲಿ ಕಂಟ್ರೋಲ್ ಬಟನ್ ಅನ್ನು ಅಳವಡಿಸಲಾಗಿದೆ.

ಇದನ್ನು ಬಳಸಿ ರೇಡಿಯೊ ಸ್ಟೇಷನ್ ಗಳನ್ನು ಸರ್ಚ್ ಮಾಡುವುದು, ಶಬ್ದವನ್ನು ಹೆಚ್ಚು ಅಥವಾ ಕಡಿಮೆ ಮಾಡುವುದು ಹೀಗೆ ಸಂಪೂರ್ಣವಾಗಿ ಈ ಸಾಧನದ ಕಾರ್ಯಗಳನ್ನು ನಿಯಂತ್ರಿಸಲು ಈ ಬಟನ್ ಗಳನ್ನು ಉಪಯೋಗಿಸಲಾಗುವುದು.

ಈ ಸಾಧನದಲ್ಲಿ ಬಟನ್ ಗಳನ್ನು ಹೊರತುಪಡಿಸಿ ರಿಮೋಟ್ ಕಂಟ್ರೋಲ್ ಇದ್ದು, ಇದನ್ನು ಬಳಸಿ ಕೂಡ ಈ ಸಾಧನದ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ.ಇದನ್ನು ಆಕ್ಸಿಲರಿ ಇನ್ ಪುಟ್ ಪೋರ್ಟ್ ಬಳಸಿ Mp3 ಪ್ಲೇಯರಿಗೆ ಜೊಡಿಸಿ ಸಂಗೀತವನ್ನು ಕೇಳಬಹುದಾಗಿದೆ. ಆದರೆ ಈ ಸಾಧನದ ಬೆಲೆಯ ಬಗ್ಗೆ ಪ್ಯೂರ್ ಕಂಪನಿಯಿಂದ ಯಾವುದೆ ಮಾಹಿತಿ ದೊರೆತಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot