Subscribe to Gizbot

ಐಪೋಡ್ ನ್ಯಾನೊದ ರಕ್ಷಣೆಗೆ ಈ ವಾಚ್ ಬ್ಯಾಂಡ್

Posted By:
ಐಪೋಡ್ ನ್ಯಾನೊದ ರಕ್ಷಣೆಗೆ ಈ ವಾಚ್ ಬ್ಯಾಂಡ್

ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳಿರಲಿ ಅವುಗಳ ಪ್ರಮುಖ ಶತ್ರು ಅಂದರೆ ಬೆವರು ಮತ್ತು ತೇವಾಂಶ. ಟಿವಿ, ಲ್ಯಾಪ್ ಟಾಪ್, ಮೊಬೈಲ್, ಹೀಗೆ ಎಲ್ಲವನ್ನು ನೀರಿನಿಂದ ದೂರ ಇಡಬೇಕು. ಲ್ಯಾಪ್ ಟಾಪ್, ಟಿವಿ ಇವುಗಳನ್ನು ನೀರಿನಿಂದ ದೂರ ಇಡಬಹುದಾದರೂ ಮೊಬೈಲ್, ಐಪೋಡ್ ಇಂತಹವುಗಳನ್ನು ಜೊತೆಗೆ ಕೊಂಡೊಯ್ಯುವಂತಹ ವಸ್ತುಗಳಾದ್ದರಿಂದ ನೀರಿನಿಂದ ಇವುಗಳಿಗೆ ಅಪಾಯ ಒಂದಲ್ಲ ಒಂದು ದಿನ ಬಂದೇ ಬರುತ್ತದೆ.

ಆದರೆ ಐಪೋಡ್ ನಲ್ಲಿ ಈ ಸಮಸ್ಯೆಗೆ ಪರಿಹಾರವಾಗಿ ಕ್ವಾಡ್ ಮೌಂಟೈನ್ ಅಲ್ಟಿಮೇಟ್ ಒನ್ ವಾಚ್ ಬ್ಯಾಂಡ್ ಐಪೋಡ್ ನ್ಯಾನೊಗಾಗಿ ತಯಾರಿಸಲಾಗಿದೆ. ಇದರಿಂದಾಗಿ ಬೆವರಿನಿಂದ ರಕ್ಷಣೆ ಪಡೆಯಬಹುದಾಗಿದೆ. ಇದನ್ನು ಸ್ಟೈನ್ ಲೆಸ್ ಸ್ಟೀಲ್ ಬಳಸಿ ಮಾಡಲಾಗಿದ್ದು ಆ ಬ್ಯಾಂಡ್ ಅನ್ನು ಒಂದೇ ಒಂದು ಸಿಲಿಕಾನ್ ತುಂಡು ಬಳಸಿ ತಯಾರಿಸಲಾಗಿದೆ.ಇದರಲ್ಲಿ ತೂತ ಇದ್ದು ಗಾಳಿ ಸಂಚಲನಕ್ಕೆ ಸಹಾಯವಾಗುತ್ತದೆ.

ಈ ವಾಚ್ ಬ್ಯಾಂಡ್ ಕೆಂಪು, ಬಿಳಿ, ಕಪ್ಪು, ಗುಲಾಬಿ, ಕಿತ್ತಳೆ ಮತ್ತು ಹಸಿರು ಬಣ್ಣದಲ್ಲಿ ಲಭ್ಯವಿದೆ. ಇದು ಇಂಚು ಉದ್ದವನ್ನು ಹೊಂದಿದೆ. ಈ ವಾಚ್ ಬ್ಯಾಂಡ್ ಅನ್ನು ನ್ಯಾನೊದಲ್ಲಿ ಬಳಸಿ ವ್ಯಾಯಾಮ ಹೀಗೆ ಯಾವುದೇ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಈ ವಾಚ್ ಬ್ಯಾಂಡ್ ನಲ್ಲಿ ನ್ಯಾನೊ ಐಪೋಡ್ ತುಂಬಾ ಸುರಕ್ಷಿತವಾಗಿ ಇರುವುದು. ಈ ಸಾಧನಗಳನ್ನು ಜೋಡಿಯಾಗಿ ತೆಗೆಯುವುದಾದರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot