Subscribe to Gizbot

ಸಂಗೀತದ ಅಬ್ಬರಕ್ಕೆ ಸ್ಕಾಶ್ ಬೂಮ್ ಕ್ಯಾನ್ ಸ್ಪೀಕರ್

Posted By:
ಸಂಗೀತದ ಅಬ್ಬರಕ್ಕೆ ಸ್ಕಾಶ್ ಬೂಮ್ ಕ್ಯಾನ್ ಸ್ಪೀಕರ್
ಜೊತೆಯಲ್ಲಿ ಕೊಂಡೊಯ್ಯಬಹುದಾದ ಮ್ಯೂಸಿಕ್ ಸಾಧನಗಳು ಬಂದು ಮ್ಯೂಸಿಕ್ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಆದರೆ ಇತ್ತೀಚಿಗೆ ಬಂದ ಸ್ಕಾಶ್ ಬೂಮ್ ಕ್ಯಾನ್ ಮ್ಯೂಸಿಕ್ ಸ್ಪೀಕರ್ ಪೋರ್ಟೇಬಲ್ ಅಥವಾ ಜೊತೆಗೆ ಕೊಂಡೊಯ್ಯಬಹುದಾದ ಸ್ಪೀಕರ್ ಗಳ ನಡುವೆ ಈ ಸ್ಪೀಕರ್ ಹೊಸ ಗಾಳಿಯನ್ನೇ ಬೀಸಿದೆ.

ಈ ಸ್ಪೀಕರ್ ಐಫೋನ್, ಐಪೋಡ್ ಮತ್ತು ಐಪ್ಯಾಡ್ ಗಳಲ್ಲಿ ಬಳಸಿದರೆ ಇದು ನೀಡುವ ಶಬ್ದವು ಉತ್ತಮ ಗುಣಮಟ್ಟವನ್ನು ಹೊಂದಿದ್ದು , ಇದನ್ನು ಲ್ಯಾಪ್ ಟಾಪ್, ಆಂಡ್ರಾಯ್ಡ್ ಇರುವ ಸಾಧನಗಳಲ್ಲಿ ಕೂಡ ಬಳಸಬಹುದಾಗಿದೆ.ಈ ಸಾಧನವು ಗಾತ್ರದಲ್ಲಿ 2 ಇಂಚಿ ಅಗಲ ಮತ್ತು 2.5 ಇಂಚಿಗಿಂತ ಕಡಿಮೆ ಎತ್ತರವನ್ನು ಹೊಂದಿದೆ.

ಇದರಲ್ಲಿ ಚಾರ್ಜ್ ಮಾಡಲು ಚಿಕ್ಕ USB ಪೋರ್ಟ್ ಮತ್ತು 3.5 mm ಆಡಿಯೊ ಔಟ್ ಪುಟ್ ಜಾಕ್ ಹೊಂದಿದೆ. ಇದರಲ್ಲಿ ಹಾಡುಗಳ ಶಬ್ದ ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಿಸುತ್ತದೆ. ಈ ಸ್ಪೀಕರ್ ಬಳಸಿ 7 ಗಂಟೆಗಳ ಕಾಲ ನಿರಂತರವಾಗಿ ಸಂಗೀತವನ್ನು ಕೇಳಬಹುದಾಗಿದ್ದು, ಇದು ಬಳಕೆದಾರರು ಬಯಸುವ ಎಲ್ಲಾ ಗುಣಲಕ್ಷಣವನ್ನು ಹೊಂದಿರುವಂತಹ ಸ್ಪೀಕರ್ ಆಗಿದೆ.

ಈ ಸ್ಪೀಕರ್ ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 2,000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot