ಐಪೋಡ್ ಸಾಮರ್ಥ್ಯ ಹೆಚ್ಚಿಸುತ್ತೆ ಈ ಸ್ಪೀಕಲ್ ಮಿ ಸೋಸರ್ ಡಕ್

|


ಐಪೋಡ್ ಸಾಮರ್ಥ್ಯ ಹೆಚ್ಚಿಸುತ್ತೆ ಈ  ಸ್ಪೀಕಲ್  ಮಿ ಸೋಸರ್ ಡಕ್
ಸ್ಪೀಕಲ್ ಕಂಪನಿಯು ಇದುವರೆಗೆ ಅನೇಕ ಮ್ಯೂಸಿಕ್ ಸಾಧನಗಳನ್ನು ತಯಾರಿಸಿ ಬಿಡುಗಡೆ ಮಾಡಿ ಒಳ್ಳೆಯ ಹೆಸರನ್ನು ಗಳಿಸಿದೆ. ಈಗ ಇದು ಐಫೋನ್ ಮತ್ತು ಐಪೋಡ್ ಗಳಲ್ಲಿ ಬಳಸಲು ಸ್ಪೀಕಲ್ ಮಿ ಸೋಸರ್ ಡಕ್ ಅನ್ನು ಅಂತರಾಷ್ಟೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸಾಧನವು ನೀಲಿ, ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ದೊರೆಯುತ್ತಿದ್ದು ಇದನ್ನು ಆಪಲ್ ಸಂಗೀತ ಸಾಧನಗಳಲ್ಲಿ ಬಳಸಿದರೆ ಬಳಕೆದಾರರಿಗೆ ಉತ್ತಮ ಗುಣ ಮಟ್ಟದ ಸಂಗೀತದಿಂದ ಅಧಿಕ ಮನರಂಜನೆ ದೊರೆಯುತ್ತದೆ.

ಈ ಸಾಧನದಲ್ಲಿ 2.1 ಸ್ಟಿರಿಯೊ ಸ್ಪೀಕರ್ ಸಿಸ್ಟಮ್ ಇದ್ದು ಇದು ಶಬ್ದ ಗುಣಮಟ್ಟದಲ್ಲಿ ದೊರೆಯುವಂತೆ ಮಾಡುತ್ತದೆ.ಇದರಲ್ಲಿ ರಿಮೋಟ್ ಕಂಟ್ರೋಲ್ ಇದ್ದು ಇದನ್ನು ಬಳಸಿ ಐಫೋನ್ ಮತ್ತು ಸ್ಪೀಕರ್ ಅನ್ನು ನಿಯಂತ್ರಿಸಬಹುದಾಗಿದೆ. ಈ ಸಾಧನವು 25+ವ್ಯಾಟ್ ಮೊತ್ತದ ಔಟ್ ಪುಟ್ ನೀಡುತ್ತದೆ. ಇದರಲ್ಲಿ 15W ಸಾಮರ್ಥ್ಯದ ಸಬ್ ವೂಫರ್ಸ್ ಅಳವಡಿಸಲಾಗಿರುತ್ತದೆ. ಅಲ್ಲದೆ ಇದರಲ್ಲಿ 3.5 mm AUX ಇನ್ ಪುಟ್ ಜಾಕ್ ಇದ್ದು ಇದನ್ನು ಬಳಸಿ ಬೇರೆ ಬೇರೆ ಸಂಗೀತ ಸಾಧನಕ್ಕೆ ಜೋಡಿಸಬಹುದಾಗಿದೆ.

ಈ ಸಾಧನದ ತೂಕ 4.2 ಇದ್ದು ಇದರ ಗಾತ್ರ 7.9 x 7.9 x 7.2 ಇಂಚು ಆಗಿದೆ. ಆದರೆ ಈ ಸಂಗೀತ ಸಾಧನದ ಬೆಲೆಯ ಬಗ್ಗೆ ಯಾವುದೆ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X