ಸಂಗೀತ ಪ್ರಿಯರಿಗೆ 'ಹಾಡುಗಳ 'ಗುಂಗು' ಹಿಡಿಸಲಿದೆ 'ಸ್ಪಾಟಿಫೈ' ಮ್ಯೂಸಿಕ್ ಆಪ್‌!!

|

ಇಂದು ಮ್ಯೂಸಿಕ್‌ಗೆ ಸಂಬಂಧಿಸಿದಂತೆ ಸಾಕಷ್ಟು ಮ್ಯೂಸಿಕ್ ಆಪ್‌ಗಳು ಲಭ್ಯವಿದ್ದು, ಯಾವ ಹಾಡು ಬೇಕಾದರೂ ಕ್ಷಣ ಮಾತ್ರದಲ್ಲಿ ಕೇಳಲು ಸಾಧ್ಯವಿದೆ. ಇದೀಗ ಭಾರತೀಯ ಮ್ಯೂಸಿಕ್ ಮಾರುಕಟ್ಟೆಗೆ 'ವಿಶ್ವದ ಜನಪ್ರಿಯ 'ಸ್ಪಾಟಿಫೈ' ಮ್ಯೂಸಿಕ್ ಕಂಪನಿ ಮ್ಯೂಸಿಕ್ ಆಪ್‌ ಪರಿಚಯಿಸಿದ್ದು, ಒಟ್ಟು ನಾಲ್ಕು ಕೋಟಿ ಹಾಡುಗಳನ್ನು ಒಳಗೊಂಡು ಈ ಆಪ್, ಮ್ಯೂಸಿಕ್ ಪ್ರಿಯರನ್ನು ರಂಜಿಸಲು ಮುಂದಾಗಿದೆ. ಹೆಡ್‌ಫೋನಗಳಲ್ಲಿನ್ನು ಮ್ಯೂಸಿಕ್ ಸೌಂಡ್‌ ಜೋರಾಗಿರಲಿದೆ.

ಸಂಗೀತ ಪ್ರಿಯರಿಗೆ 'ಹಾಡುಗಳ 'ಗುಂಗು' ಹಿಡಿಸಲಿದೆ 'ಸ್ಪಾಟಿಫೈ' ಮ್ಯೂಸಿಕ್ ಆಪ್‌!!

ಹೌದು, ಸ್ವೀಡಿಷ್ ಮೂಲದ ಜನಪ್ರಿಯ ಮ್ಯೂಸಿಕ್ ಕಂಪನಿ 'ಸ್ಪಾಟಿಫೈ' ತನ್ನ ಆಪ್ ಮೂಲಕ ಭಾರತದಲ್ಲಿ ಮ್ಯೂಸಿಕ್ ಗಾನ ಶುರುಮಾಡಲು ಎಂಟ್ರಿ ಕೊಟ್ಟಿದೆ. ಸ್ಪಾಟಿಫೈ ಕಂಪನಿಯು ದೇಶದ ಪ್ರಾದೇಶಿಕ ಭಾಷೆಗಳ ಹಾಡುಗಳೊಂದಿಗೆ ವಿಶ್ವ ಮಟ್ಟದ ಸಂಗೀತವನ್ನು ಭಾರತೀಯರಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ ಎಂದು 'ಸ್ಪಾಟಿಫೈ' ಮ್ಯೂಸಿಕ್ ಕಂಪನಿಯ ಸಿಇಓ ಮತ್ತು ಸ್ಥಾಪಕರು ಆಗಿರುವ ''ಡೇನಿಯಲ್ ಎಕ್'' ತಿಳಿಸಿದ್ದಾರೆ.

ಸಂಗೀತ ಪ್ರಿಯರಿಗೆ 'ಹಾಡುಗಳ 'ಗುಂಗು' ಹಿಡಿಸಲಿದೆ 'ಸ್ಪಾಟಿಫೈ' ಮ್ಯೂಸಿಕ್ ಆಪ್‌!!

ಈಗಾಗಲೇ ಭಾರತೀಯ ಮೂಲದ ಜನಪ್ರಿಯ ಮ್ಯೂಸಿಕ್ ಸಂಸ್ಥೆ 'ಟಿ-ಸಿರೀಸ್' ಯೊಂದಿಗೆ ಮಾತುಕತೆ ನಡೆಸಿರುವ ಸ್ಪಾಟಿಫೈ, ತನ್ನ ಮ್ಯೂಸಿಕ್ ಆಪ್‌ನಲ್ಲಿ 'ಟಿ-ಸಿರೀಸ್' ಕೆಟಲಾಗ್‌ನಲ್ಲಿನ ಸುಮಾರು 1,60,000 ಸಾಂಗ್ಸ್‌ಗಳನ್ನು ಬಳಸಿಕೊಳ್ಳಲು ಅನುಮತಿ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸೋನಿ, ಯುನಿವರ್ಸಲ್ ಮತ್ತು ವಾರ್ನರ್, ಜನಪ್ರಿಯ ಮ್ಯೂಸಿಕ್ ಸಂಸ್ಥೆಗಳೊಂದಿಗೆಯೂ ಸಹಭಾಗಿತ್ವ ಹೊಂದುವುದಾಗಿ ತಿಳಿಸಿದೆ.

ಪ್ರಾದೇಶಿಕ ಭಾಷೆಗಳಿಗೆ ಬೆಂಬಲ

ಪ್ರಾದೇಶಿಕ ಭಾಷೆಗಳಿಗೆ ಬೆಂಬಲ

ಸ್ಪಾಟಿಫೈ ಮ್ಯೂಸಿಕ್ ಆಪ್ ನಲ್ಲಿ ಹಿಂದಿಯ ಬಾಲಿವುಡ್ ಹಾಡುಗಳೊಂದಿಗೆ ಐದು ಸ್ಥಳೀಯ ಪ್ರಾದೇಶಿಕ ಭಾಷೆಗಳಾದ ಪಂಜಾಬಿ, ತಮಿಳ,ತೆಲಗು, ಮಲಯಾಳಂ ಮತ್ತು ಬಂಗಾಲಿ ಭಾಷೆಗಳನ್ನು ಸಹ ಕೇಳುಗರಿಗೆ ನೀಡಲಾಗುವುದು ಎನ್ನಲಾಗುತ್ತಿದೆ. ಭಾರತದಲ್ಲಿ ಜನಪ್ರಿಯತೆ ಗಳಿಸಿಲು ಪ್ರದೇಶಿಕ ಭಾಷೆಗಳಿಗೆ ಬೆಂಬಲ ನೀಡುವುದು ಅಗತ್ಯ ಎನ್ನುವುದನ್ನು ಕಂಪನಿ ಅರಿತುಕೊಂಡಿದೆ.

ತೀವ್ರ ಸ್ಪರ್ಧೆ!

ತೀವ್ರ ಸ್ಪರ್ಧೆ!

ಭಾರತೀಯ ಮ್ಯೂಸಿಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಸ್ಪಾಟಿಫೈ ಮ್ಯೂಸಿಕ್ ಆಪ್, ದೇಶಿಯ ಜನಪ್ರಿಯ ಮ್ಯೂಸಿಕ್ ಆಪ್‌ಗಳಾದ ಗಾನಾ, ಸಾವನ್ ಮತ್ತು ಆಪಲ್ ಮ್ಯೂಸಿಕ್‌ಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಸ್ಪಾಟಿಫೈ ಮ್ಯೂಸಿಕ್ ಆಪ್‌ ಪ್ರಾದೇಶಿಕ ಹಾಡುಗಳೊಂದಿಗೆ ವಿದೇಶಿ ಹಾಡುಗಳನ್ನು ಒಳಗೊಂಡಿರುವುದರಿಂದ ಸ್ಥಳೀಯ ಮ್ಯೂಸಿಕ್ ಆಪ್‌ಗಳಿಗೆ ಪ್ರಬಲ ಎದುರಾಳಿ ಆದಲಿದೆ.

ಡೌನ್‌ಲೋಡ್‌

ಡೌನ್‌ಲೋಡ್‌

ಸ್ಪಾಟಿಫೈ ಮ್ಯೂಸಿಕ್ ಆಪ್‌ ಗೂಗಲ್ ಪ್ಲೇ ಸ್ಟೋರ್, ಆಪಲ್ ಆಪ್‌ ಸ್ಟೋರ್‌ಗಳಲ್ಲಿ ದೊರೆಯಲಿದ್ದು, ಅಂಡ್ರಾಯ್ಡ್‌ ಮತ್ತು ಐಓಎಸ್ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರು ಡೇಸ್ಕ್‌ಟಾಪ್‌ನಲ್ಲಿಯೂ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಚಂದಾದಾರಿಕೆಯ ಶುಲ್ಕ

ಚಂದಾದಾರಿಕೆಯ ಶುಲ್ಕ

ಸ್ಪಾಟಿಪೈ ಆಪ್ ಪ್ರಾಯೋಗಿಕವಾಗಿ 30 ದಿನಗಳ ಉಚಿತ ನೀಡಲಿದ್ದು, ನಂತರದಲ್ಲಿ ತಿಂಗಳಿಗೆ 119ರೂ.ಗಳ ದರ ನಿಗದಿಮಾಡಲಿದೆ. ಇದರೊಂದಿಗೆ ಕೇವಲ 13ರೂ.ಗೆ ಒಂದು ದಿನದ ಟಾಪ್‌ಅಪ್ ರಿಚಾರ್ಜ್ ಆಯ್ಕೆಯೊಂದಿಗೆ, 39ರೂ.ಗಳಿಗೆ ಒಂದು ವಾರದ, 389ರೂ.ಗಳಿಗೆ ಮೂರು ತಿಂಗಳ, 719ರೂ.ಗಳಿಗೆ ಆರು ತಿಂಗಳ ಚಂದಾದಾರರಾಗಲೂ ಆಯ್ಕೆಗಳನ್ನು ನೀಡಿದೆ. ಪೇಟಿಎಮ್ ಆಪ್‌ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಸ್ಟೂಡೆಂಟ್‌ ಆಫರ್!

ಸ್ಟೂಡೆಂಟ್‌ ಆಫರ್!

ಯುವಜನತೆ ಹೆಚ್ಚಾಗಿ ಹಾಡುಗಳನ್ನು ಕೇಳುತ್ತಾರೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಇಯರ್‌ಫೋನ್ ನೊಂದಿಗೆ ನಿರಂತರ ಮ್ಯೂಸಿಕ್ ಗುಂಗಿನಲ್ಲಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳೇ ಪ್ರಮುಖ ಟಾರ್ಗೆಟ್ ಆಡಿಯನ್ಸ್‌ ಆಗಿದ್ದು, ಅದಕ್ಕಾಗಿ ತಿಂಗಳ ಚಂದಾದಾರಿಕೆಯ ಪ್ಲಾನಿನಲ್ಲಿ ವಿದ್ಯಾರ್ಥಿಗಳಿಗೆ ಶೇ.50% ರಿಯಾಯಿತಿ ನೀಡುವುದಾಗಿ ಕಂಪನಿ ತಿಳಿಸಿದೆ.

Best Mobiles in India

English summary
Spotify is now available in India. Here’s how to get started with the long-awaited music streaming application.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X