ಸ್ಪೀಕರ್ ಲೋಕಕ್ಕೆ ಹೆಜ್ಜೆ ಇಟ್ಟ ಇನ್ಸ್ಪಾನ್ ಇನ್ಪೋಟೆಕ್

|

ಸ್ಪೀಕರ್ ಲೋಕಕ್ಕೆ ಹೆಜ್ಜೆ ಇಟ್ಟ ಇನ್ಸ್ಪಾನ್ ಇನ್ಪೋಟೆಕ್
ಇನ್ಸ್ಪಾನ್ ಇನ್ಫೋಟೆಕ್ ಇದುವರೆಗೆ ಅಧಿಕ ಗಮನನ್ನು ಹರಿಸಿದ್ದು ಮದರ್ ಬೋರ್ಡ್ ಮತ್ತು ಹಾರ್ಡ್ ವೇರ್ ಸಾಧನಗಳ ವಿತರಣೆಯಲ್ಲಿ . ಇತ್ತೀಚಿಕೆಗೆ ಈ ಕಂಪನಿ ಹೊಸ ಸ್ಪೀಕರ್ ಬಿಡುಗಡೆ ಮಾಡಿದ್ದು ಇದನ್ನು SW- 2.1 360 ಸ್ಪೀಕರ್ ಸಿಸ್ಟಮ್ ಎಂದು ಕರೆಯಲಾಗಿದೆ. ಈ ಸ್ಪೀಕರ್ 3 ಸ್ಪೀಕರ್ ಸಿಸ್ಟಮ್ ಗಳನ್ನು ಒಳಗೊಂಡು ತಯಾರಿಸಲಾಗಿದ್ದು, ಸ್ಪಷ್ಟ ಮತ್ತು ಅಧಿಕ ಮಟ್ಟದ ಶಬ್ದವನ್ನು ಉಂಟು ಮಾಡುವ ಹಾಗೆ ಇದನ್ನು ತಯಾರಿಸಲಾಗಿದೆ.

SW- 2.1 360 ಸ್ಪೀಕರ್ ಸಿಸ್ಟಮ್ ಮುಖ್ಯವಾಗಿ ಈ ಕೆಳಗಿನ ಗುಣಲಕ್ಷಣವನ್ನು ಹೊಂದಿದೆ.

* 3 ಸ್ಪೀಕರ್ ಸಿಸ್ಟಮ್

* ಮರದ ಸಬ್ ವೂಫರ್ಸ್

* 4 ಇಂಚಿನ ಯೂನಿಟ್ ಡ್ರೈವರ್

* ಟ್ವಿನ್ ಸ್ಯಾಟಲೈಟ್ ಸ್ಪೀಕರ್

* 2.75 ಬಣ್ಣ ಲೇಪಿತ ಡ್ರೈವರ್

* 155 ಮಿಮಿ x 222ಮಿಮಿ x 209 ಮಿಮಿ ವೂಫರ್ಸ್ ಸುತ್ತಳತೆ

* 85 ಮಿಮಿ x 130ಮಿಮಿ x 86 ಮಿಮಿ

* 1,800 ಗ್ರಾಂ ತೂಕ

ಈ ಸ್ಪೀಕರ್ ಅನ್ನು ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ನಲ್ಲಿ ಜೋಡಿಸ ಬಹುದಾಗಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದನ್ನು ಬಳಸುವುದರ ಬಗ್ಗೆ ಮಾಹಿತಿ ಬುಕ್ ( ಮ್ಯಾನ್ಯೂಲ್) ಬಹು ಭಾಷೆಗಳಲ್ಲಿ ಲಭ್ಯವಿರುವುದರಿಂದ ಆಯಾ ಭಾಷೆಗಳಲ್ಲಿ ಓದಿ ಅರ್ಥೈಹಿಸಿಕೊಳ್ಳಲು ಅನುಕೂಲಕರವಾಗಿದೆ.

ಉತ್ತಮ ಗುಣಮಟ್ಟವನ್ನು ಹೊಂದಿರುವ SW- 2.1 360 ಸ್ಪೀಕರ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು.1, 200 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X