ಲೈಫ್ ಸ್ಟೈಲ್ ಬುಕ್ ನೊಂದಿಗೆ ಥಿಕ್ ಸೌಂಡ್ ಇಯರ್ ಫೋನ್

|

ಲೈಫ್ ಸ್ಟೈಲ್ ಬುಕ್ ನೊಂದಿಗೆ ಥಿಕ್ ಸೌಂಡ್ ಇಯರ್ ಫೋನ್
ಅಧಿಕ ಶಬ್ದದ ಆಡಿಯೊ ಸಾಧನಗಳನ್ನು ತಯಾರಿಸಿದ ಕಂಪನಿಗಳಲ್ಲಿ 'ಥಿಕ್ ಸೌಂಡ್' ಮೊದಲಿನದು. ಈಗ ಇದರ ಮತ್ತೊಂದು ಅಡಿಯೊ ಸಾಧನವಾದ 'ms01 ಇನ್ ಇಯರ್ ಹೆಡ್ ಫೋನ್' ಸಧ್ಯದಲ್ಲಿಯೆ ಬಿಡುಗಡೆ ಮಾಡಲಿದೆ ಎಂದು ಘೋಷಿಸಿದೆ. ಈ ಇಯರ್ ಫೋನ್ ನಲ್ಲಿ ಇಷ್ಟವಾದ ಹಾಡುಗಳನ್ನು ಕೇಳುತ್ತಿದ್ದರೆ ಅದು ಬಳಕೆದಾರರಿಗೆ ಮತ್ತಷ್ಟು ಚೈತ್ಯನ್ಯವನ್ನು ತುಂಬುವಂತಹ ವಿನ್ಯಾಸವನ್ನು ಹೊಂದಿದೆ.

ಈ ಇಯರ್ ಫೋನ್ ಅನ್ನು ಎಂಜಿನಿಯರ್ ಮತ್ತು ಗ್ರ್ಯಾಮಿ ಪ್ರಶಸ್ತಿಯನ್ನು ಗಳಿಸಿದಂತಹ ಸಂಗೀತ ಶಾಸ್ತ್ರಜ್ಞರೊಬ್ಬರ ಮಾರ್ಗದರ್ಶನದಲ್ಲಿ ಇದನ್ನು ತಯಾರಿಸಲಾಗಿದೆ.

ಈ ಇಯರ್ ಫೋನ್ ನಲ್ಲಿ ಮುಖ್ಯವಾಗಿ ಈ ಕೆಳಗಿನ ಲಕ್ಷಣಗಳನ್ನು ಕಾಣಬಹುದು.

* ಆಕರ್ಷಕ ವಿನ್ಯಾಸ

* 8 mm ಹೈ ಡೆಫಿನಿಷನ್ ಡ್ರೈವರ್

* ಗದ್ದಲ ನಿಯಂತ್ರಣ

* 9.5 ಗ್ರಾಂ ತೂಕ

* ಯಾವುದೇ ವಸ್ತುಗಳಿಗೆ ಸಿಕ್ಕಿ ಹಾಕಿಕೊಳ್ಳದಂತಹ PVC ಕೇಬಲ್

* ಲೈಫ್ ಸ್ಟೈಲ್ ಇಯರ್ ಬುಕ್

ಈ ಇಯರ್ ಫೋನ್ ಒಂದು ವರ್ಷ ಗ್ಯಾರಂಟಿಯೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದು ಬೆಲೆ ಸುಮಾರು ರು.5, 000 ಎಂದು ಹೇಳಲಾಗುತ್ತಿದ್ದು ಆನ್ ಲೈನ್ ಕೊಳ್ಳುವುದಾದರೆ ಬೆಲೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮಾಡಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X