ಸಂಗೀತ ಕೇಳ ಬೇಕೆನಿಸಿದರೆ ಲ್ಯಾಪ್ ಟಾಪ್ ಆಗುತ್ತೆ ಆಡಿಯೊ

|
ಸಂಗೀತ ಕೇಳ ಬೇಕೆನಿಸಿದರೆ ಲ್ಯಾಪ್ ಟಾಪ್ ಆಗುತ್ತೆ ಆಡಿಯೊ

ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಎದುರು ಗಂಟೆ ಗಟ್ಟಲೆ ಕೆಲಸದ ಒತ್ತಡದಿಂದ ಕೂತಾಗ ಮನಸ್ಸು ವಿಶ್ರಾಂತಿಯನ್ನು ಬಯಸುತ್ತದೆ. ಆಗ ಸಂಗೀತ ಕೇಳುವುದು ಬೆಸ್ಟ್. ಆದರೆ ಇದಕ್ಕಾಗಿ ನೀವು ಬೇರೆ ಮ್ಯೂಸಿಕ್ ಸಿಸ್ಟಮ್ ಮೊರೆ ಹೋಗಬೇಕಾಗಿಲ್ಲ. ಏಕೆಂದರೆ HP ಕಂಪನಿಯು HP ವೈರ್ ಲೆಸ್ ಆಡಿಯೊ ಅನ್ನು ಪರಿಚಯಿಸಿದೆ.

ಇದನ್ನು ಬಳಸಿ ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಅನ್ನು ಸಂಗೀತದ ಸಾಧನವಾಗಿ ಬಳಸಬಹುದಾಗಿದೆ. ಕಂಪ್ಯೂಟರ್ ನಲ್ಲಿ ಇಂಟರ್ ನೆಟ್ ಮ್ಯೂಸಿಕ್ ಅಪ್ಲಿಕೇಶನ್ ಇದ್ದರೂ ಕೆಲವೊಮ್ಮೆ ಅದು ಸಾಕಾಗುವುದಿಲ್ಲ.ಲ್ಯಾಪ್ ಟಾಪ್ ನಲ್ಲಿ ಅಥವಾ ಡೆಸ್ಕ್ ಟಾಪ್ ನಲ್ಲಿ ಹೈ ಡೆಫಿನಿಷನ್ ಆಡಿಯೊ ಸಿಸ್ಟಮ್ ಅಥವಾ ಹೋಂ ಸ್ಪೀಕರ್ ಅನ್ನು ಕನೆಕ್ಟ್ ಮಾಡುವಷ್ಟು ಜೋಡಣೆಯ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇದರಲ್ಲಿ ಇವುಗಳನನ್ಉ ಪ್ಲಗ್ ಮತ್ತು ಪ್ಲಗ್ ತೆಗೆಯಲು ಸ್ವಲ್ಪ ಕಷ್ಟವಾಗುತ್ತದೆ.

ಆದರೆ ಇವಕ್ಕೆಲ್ಲ ಪರಿಹಾರವಾಗಿ HP ವೈರ್ ಲೆಸ್ ಆಡಿಯೊ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಉತ್ತಮ ಗುಣ ಮಟ್ಟದಲ್ಲಿ ಸಂಗೀತವನ್ನು ನೀಡಿ ಮನರಂಜನೆಯನ್ನು ನೀಡುತ್ತದೆ. ಈ ಸಾಧನದಲ್ಲಿ 2 ಭಾಗವಿದ್ದು ಮೊದಲ ಭಾಗವು ಚಿಕ್ಕ ಡೋಂಗಲ್ ಇದ್ದು ಇದನ್ನು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಗೆ ಅಟ್ಯಾಚ್ ಮಾಡಬಹುದಾಗಿದೆ. ಇದರಿಂದ ನಂತರ ಮೀಡಿಯ ಕಂಟೆಂಟ್ ಗೆ ಲಿಂಕ್ ಸಿಗುತ್ತದೆ.

ಇದು ಚಿಕ್ಕ ಕಂಪ್ಯಾಕ್ಟ್ ಬಾಕ್ಸ್ ಗಾತ್ರದ ಸಾಧನವಾಗಿದ್ದು, ಸ್ಪೀಕರ್ ಅನ್ನು ಈ ಇದರಲ್ಲಿನ ಪೋರ್ಟ್ ಗೆ ಜೋಡಿಸಬಹುದಾಗಿದೆ. ಇದರಿಂದ ಬಳಕೆದಾರಿಗೆ 5.1 ಕಾನ್ ಫಿಗರ್ಡ್ ಸ್ಪೀಕರ್ ವರೆಗಿನ ಸಪೋರ್ಟ್ ಪಡೆಯಬಹುದಾಗಿದೆ. ಇದರಲ್ಲಿ ಟ್ರೈ ಬಾಂಡ್ ಸಂಪರ್ಕವು ಟ್ರಾನ್ಸ್ ಮೀಟರ್ ಮತ್ತು ಬಳಕೆದಾರರ ನಡುವೆ ಇರುತ್ತದೆ. ಟ್ರೈ ಬಾಂಡ್ ಸಂಪರ್ಕ ಅಂದರೆ ಇದು 3 ಬೇರೆ -ಬೇರೆ ಕಪನಾಂಕದಲ್ಲಿ ಕೆಲಸಮಾಡುತ್ತದೆ ಎಂಬುದಾಗಿದೆ.

ಆ ಕಂಪನಾಂಕಗಳು 2.4, 5.2 ಮತ್ತು 5.8 GHz ಆಗಿವೆ. ಇದನ್ನು 30 ಮೀಟರ್ ಅಂತರದಲ್ಲಿ ಯಾವುದೆ ಭಾಗದಲ್ಲಿ ಇಟ್ಟು ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ ಈ ಸಾಧನವು ಇನ್ನಷ್ಟೆ ಮಾರುಕಟ್ಟೆಗೆ ಬರಲಿದ್ದು ಇದರ ಬೆಲೆಯ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X