ಜನಪ್ರಿಯವಾಗಿಲ್ಲದಿದ್ದರೂ ಖರೀದಿಸಲು ಯೋಗ್ಯವಾದ ಈ ವರ್ಷದ ಫೋನ್‌ಗಳಿವು!

|

ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಅದರಲ್ಲೂ ಪ್ರತಿಯೊಂದು ಫೋನ್‌ಸಹ ಭಿನ್ನ ವಿಭಿನ್ನ ಫೀಚರ್ಸ್‌ಗಳನ್ನು ಪಡೆಯುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ. ಅದಾಗ್ಯೂ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಅದೆಷ್ಟೋ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ಪಾರುಪತ್ಯ ತೋರಿಸಿವೆ. ಅಂತೆಯೇ ಈ ವರ್ಷ ಮುಗಿಯಲು ಇನ್ನೇನು ಒಂದು ತಿಂಗಳು ಬಾಕಿ ಇದೆ. ಈ ನಡುವೆ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳಿ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈ ಕ್ಷಣಕ್ಕೂ ಕಂಪೆನಿಗಳು ತಮ್ಮ ಫೋನ್‌ಗಳನ್ನು ಅನಾವರಣ ಮಾಡುತ್ತಲೇ ಬರುತ್ತಿವೆ. ಆದರೆ, ಈ ವರ್ಷ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳನ್ನು ಹಿಂತಿರುಗಿ ನೋಡುವ ಸಮಯ ಬಂದಿದೆ. ಇದರಲ್ಲಿ ಕೆಲವು ಆಸಕ್ತಿದಾಯಕ ಡಿವೈಸ್‌ಗಳು ಲಾಂಚ್‌ ಆಗಿದ್ದರೆ, ಹಲವು ಡಿವೈಸ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸಿದ್ದವು. ಹಾಗೆಯೇ ಇನ್ನೂ ಕೆಲವು ಸದ್ದಿಲ್ಲದೆ ಮರೆಯಾದವು. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳು ಕಡಿಮೆ ಜನಪ್ರಿಯತೆ ಪಡೆದುಕೊಂಡಿವೆ , ಏನೆಲ್ಲಾ ಪ್ರಮುಖ ಫಿಚರ್ಸ್ ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಐಕ್ಯೂ 9 SE

ಐಕ್ಯೂ 9 SE

ಐಕ್ಯೂ 9 SE ಸ್ಮಾರ್ಟ್‌ಫೋನ್‌ 33,990 ರೂ. ಗಳ ಬೆಲೆಯಲ್ಲಿ ಮಾರಾಟವಾಗುತ್ತಿರುವ ಫೋನ್‌ ಅಗಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಐಕ್ಯೂನ ಫೋನ್‌ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಫೋನ್ ಇದಾಗಿದ್ದು, ಇತರೆ ಪ್ರಭಾವಶಾಲಿ ಫೋನ್‌ಗಳಿಗೂ ಪೈಪೋಟಿ ನೀಡುವ ಸಾಮರ್ಥ್ಯ ಪಡೆದುಕೊಂಡಿದೆ ಹಾಗೆಯೇ ಈ ಫೋನ್ 48MP ಪ್ರಾಥಮಿಕ ಕ್ಯಾಮೆರಾ ಹೊಂದಿರುವುದು ವಿಶೇಷ. ಇನ್ನು 4,500mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, 66W ನ ವೇಗದ ಚಾರ್ಜಿಂಗ್ 30 ನಿಮಿಷಗಳಲ್ಲಿ ಬ್ಯಾಟರಿಯನ್ನು ಭರ್ತಿ ಮಾಡುತ್ತದೆ. ಇನ್ನು ಕೆಲವು ಬ್ಲೋಟ್‌ವೇರ್ ಸಮಸ್ಯೆಗಳ ಹೊರತಾಗಿಯೂ ಈ ಫೋನ್‌ ಗ್ರಾಹಕರಿಗೆ ಇಷ್ಟವಾಗಿದೆ.

ಐಕ್ಯೂ 9T

ಐಕ್ಯೂ 9T

ಐಕ್ಯೂ ಕಂಪೆನಿಯ ಮತ್ತೊಂದು ಫೋನ್‌ ಆದ ಐಕ್ಯೂ 9T ಒನ್‌ಪ್ಲಸ್‌ಫೋನ್‌ಗೆ ಪೈಪೋಟಿ ಎಂದೇ ಹೇಳಬಹುದಾಗಿದೆ. ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 SoC ಪ್ರೊಸೆಸರ್‌ನಲ್ಲಿ ಕಾರ್ಯರ್ನಿಹಿಸಲಿದ್ದು, ಇದು ಈ ಹಿಂದಿನ ಥರ್ಮಲ್ ಥ್ರೊಟ್ಲಿಂಗ್ ಸಮಸ್ಯೆಗಳನ್ನು ಸರಿಪಡಿಸಿಕೊಂಡಿದೆ. ಅದರಲ್ಲೂ ಹೊಸ ಚಿಪ್‌ಸೆಟ್‌ನೊಂದಿಗೆ ಲಾಂಚ್‌ ಆದ ಭಾರತದ ಮೊದಲ ಫೋನ್‌ ಎಂಬ ಹೆಗ್ಗಳಿಕೆ ಸಹ ಇದಕ್ಕಿದೆ. ಈ ಫೋನ್‌ ಅನ್ನು ಒನ್‌ಪ್ಲಸ್‌10Tಗೆ ಹೋಲಿಕೆ ಮಾಡಿದರೆ ಐಕ್ಯೂ 9T ಹೊರನೋಟದಲ್ಲಿ ಸ್ವಲ್ಪ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ.

ರಿಯಲ್‌ಮಿ GT ನಿಯೋ 3

ರಿಯಲ್‌ಮಿ GT ನಿಯೋ 3

ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಒನ್‌ಪ್ಲಸ್‌‌ 10R ರೀತಿಯ ಫೀಚರ್ಸ್ ಅನ್ನೇ ಪಡೆದುಕೊಂಡಿದ್ದು, ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಒನ್‌ಪ್ಲಸ್‌ 10R ಗಿಂತ ಕಡಿಮೆ ಥ್ರೊಟ್ಲಿಂಗ್ ಅನ್ನು ತೋರಿಸುತ್ತದೆ. ಅಂತೆಯೇ ಈ ಫೋನ್ ಬೆಳಕು ಮತ್ತು ಶಬ್ದವನ್ನು ಸರಿಯಾಗಿ ನಿರ್ವಹಿಸುವುದರೊಂದಿಗೆ ಇತರೆ ಫೋನ್‌ಗಳಿಗಿಂತ ಉತ್ತಮ ಎನಿಸಿಕೊಂಡಿದೆ.

ವಿವೋ X80

ವಿವೋ X80

ವಿವೋ X80 ವರ್ಷದ ಅತ್ಯಂತ ಕಡಿಮೆ ರೇಟಿಂಗ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಅದಾಗ್ಯೂ ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ ಹೊಂದಿರುವ ಏಕೈಕ ಫೋನ್ ಆಗಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ ಆಂಡ್ರಾಯ್ಡ್ ಫೋನ್‌ ಸಹ ಇದಾಗಿದೆ. ಈ ಫೋನ್‌ ಸೋನಿಯ IMX 866 ಕ್ಯಾಮೆರಾ ಸೆನ್ಸರ್‌ ಹೊಂದಿದ್ದು, 80W ನ ಸೂಪರ್ ಫಾಸ್ಟ್ ಚಾರ್ಜಿಂಗ್‌ ಆಯ್ಕೆ ಪಡೆದುಕೊಂಡಿದೆ.

ಮೊಟೊರೊಲಾ ಎಡ್ಜ್ 30 ಫ್ಯೂಷನ್

ಮೊಟೊರೊಲಾ ಎಡ್ಜ್ 30 ಫ್ಯೂಷನ್

ಮೊಟೊರೊಲಾ ಸ್ಮಾರ್ಟ್‌ಫೋನ್‌ ಹಣಕ್ಕೆ ತಕ್ಕಂತೆ ಫೀಚರ್ಸ್ ಹೊಂದಿದೆ ಎಂದು ಹೇಳಬಹುದು. ಈ ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 888+ ನಲ್ಲಿ ಕಾರ್ಯನಿರ್ವಹಿಸಲಿದ್ದು, HDR10+ ಬೆಂಬಲದೊಂದಿಗೆ FHD+ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಅದರಂತೆ ಈ ಫೋನ್‌ 50MP ಪ್ರಮುಖ ಕ್ಯಾಮೆರಾ, 13MP ಅಲ್ಟ್ರಾ ವೈಡ್ ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಪ್ಯಾಕ್‌ ಆಗಿದೆ. ಇದರೊಂದಿಗೆ ಈ ಫೋನ್‌ ಐಕ್ಯೂ, ರಿಯಲ್‌ಮಿ, ಒನ್‌ಪ್ಲಸ್‌ ಮತ್ತು ಇನ್ನಿತರೆ ಫೋನ್‌ಗಳೊಂದಿಗೆ ಸ್ಪರ್ಧಿಸುತ್ತದೆ.

Best Mobiles in India

Read more about:
English summary
underrated smartphones list of 2022 in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X