ವಿ ಮೋಡಾ ಫಡೆರ್ಸ್ ಇಯರ್ ಫೋನ್

|
ವಿ ಮೋಡಾ ಫಡೆರ್ಸ್ ಇಯರ್ ಫೋನ್

ಆಡಿಯೊ ಸಾಧನಗಳ ಉತ್ಪಾದನೆಯಲ್ಲಿ ವಿ-ಮೋಡಾ ಕಂಪನಿ ಕೂಡ ತನ್ನದೇ ಆದ ಛಾಪನ್ನು ಹೊಂದಿದೆ. ಇದೀಗ ಈ ಕಂಪನಿ ವಿ ಮೋಡಾ ಫಡೆರ್ಸ್ ಎಂಬ ಇಯರ್ ಫೋನ್ ತಯಾರಿಸಿದೆ . ಈ ಇಯರ್ ಫೋನ್ ಬಳಸುವುದರಿಂದ ಕಿವಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಎಂದು ಈ ಕಂಪನಿ ಭರವಸೆಯನ್ನು ಕೂಡ ನೀಡುತ್ತಿದೆ.

ಈ ಇಯರ್ ಫೋನ್ ವಿನ್ಯಾಸವನ್ನು ಮಾಡುವಾಗ ವೈದ್ಯರು ಮತ್ತು ಇತರ ಪರಿಣತರ ಅಭಿಪ್ರಾಯವನ್ನು ಪಡೆದು ಈ ಹೆಡ್ ಫೋನ್ ತಯಾರಿಸಲಾಗಿದೆ. ಈ ಇಯರ್ ಫೋನ್ ಬಳಸಿದರೆ ಕಿವಿಗೆ ಹಾನಿ ಉಂಟು ಮಾಡುವ ಶಬ್ದವನ್ನು ಸಹ 12dBಕ್ಕೆ ಪರಿವರ್ತಿಸಿ ಕಿವಿಗೆ ಯಾವುದೆ ಹಾನಿ ಉಂಟಾಗದಂತೆ ತಡೆಯುತ್ತದೆ. ಈ ಇಯರ್ ಫೋನ್ ಬಳಿಸಿದರೆ ಸ್ಪಷ್ಟವಾದ ಶಬ್ದವನ್ನು ಪಡೆಯಬಹುದು.

ಇದರ ಇಯರ್ ಪ್ಲಗ್ ಚಿಕ್ಕ, ಮಧ್ಯಮ ಮತ್ತು ದೊಡ್ಡ ಗಾತ್ರದಲ್ಲಿ ಇದ್ದು ಕಿವಿಗೆ ಸರಿಹೊಂದುವಂತೆ ಇದೆ. ಈ ಇಯರ್ ಪೋನ್ ಅನ್ನು ಮೋಟಾರ್ ರೇಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುದಾದರೆ, ಗದ್ದಲವಿರುವ ಮಾರುಕಟ್ಟೆಯಲ್ಲಿ ಹೋಗುವಾಗ, ಪ್ರಯಾಣಿಸುವಾಗ ಬಳಸಿದರೆ ಇದು ಗದ್ದಲವನ್ನು ಕಡಿಮೆ ಮಾಡಿ ಕಿವಿಗೆ ಸ್ಪಷ್ಟವಾದ ಶಬ್ದವನ್ನು ನೀಡುವುದರಿಂದ ಕಿವಿಗೆ ಯಾವುದೆ ರೀತಿಯ ಹಾನಿ ಉಂಟಾಗುವುದಿಲ್ಲ.

ಈ ವಿ-ಮೋಡಾ 3 ಬಣ್ಣದಲ್ಲಿ ಲಭ್ಯವಿದ್ದು ಕಿವಿಗೆ ಸುರಕ್ಷೆ ಜೊತೆ ಉತ್ತಮ ಸಂಗೀತವನ್ನು ನೀಡುವ ಈ ಇಯರ್ ಫೋನ್ ಬೆಲೆ ರು 1,000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X