Subscribe to Gizbot

ಎಲ್‌ಟಿಇ ತಂತ್ರಜ್ಞಾನದಲ್ಲಿ ವಿಶ್ವದಾಖಲೆ!..1.2Gbps ವೇಗದಲ್ಲಿ ಡೇಟಾ ಡೌನ್‌ಲೋಡ್!!

Written By:

5G ಯುಗಕ್ಕೆ ಕಾಲಿಡಲು ಇನ್ನು ಮೂರರಿಂದ ನಾಲ್ಕು ವರ್ಷಗಳಾದರೂ ಬೇಕು ಎನ್ನುತ್ತಿವೆ ವರದಿಗಳು. ಆದರೆ, ಚೀನಾದ ಅತಿದೊಡ್ಡ ಟೆಲಿಕಾಂ ಕಂಪೆನಿಯೊಂದು 4G ಎಲ್‌ಟಿಯಿ ತಂತ್ರಜ್ಞಾನದಲ್ಲಿಯೇ 1.2 ಜಿಬಿಪಿಎಸ್ ಡೌನ್ಲೋಡ್ ವೇಗವನ್ನು ಸಾಧಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.!!

ಹೌದು, ಚೀನಾದ ಅತಿದೊಡ್ಡ ಟೆಲಿಕಾಂ ಆಪರೇಟರ್ ಯುನಿಕಾಮ್ ಜಗತ್ತಿನ ಯಾವುದೇ ಟೆಲಿಕಾಂ ಆಪರೇಟರ್ ಸಾಧಿಸದ ವಿಶಿಷ್ಟ ಸಾಧನೆಯೊಂದನ್ನು ನಿರ್ಮಿಸಿದೆ. ಚೀನೀ ಮಾಧ್ಯಮಗಳ ವರದಿ ಪ್ರಕಾರ, ಯೂನಿಕಾಮ್ 1.155 Mbps ಡೌನ್‌ಲೋಡ್ ವೇಗವನ್ನು ಸಾಧಿಸಿದ್ದು, ಇದು 1.2Gbps ವೇಗಕ್ಕೆ ಸಮನಾಗಿದೆ ಎಂದು ಹೇಳಿವೆ.!!

ಎಲ್‌ಟಿಇ ತಂತ್ರಜ್ಞಾನದಲ್ಲಿ ವಿಶ್ವದಾಖಲೆ!..1.2Gbps ವೇಗದಲ್ಲಿ ಡೇಟಾ ಡೌನ್‌ಲೋಡ್!!

ಯುನಿಕಾಮ್ 1.2 ಜಿಬಿಪಿಎಸ್ ವೇಗದ ಡೌನ್‌ಲೋಡ್ ಸ್ಪೀಡ್ ಅನ್ನು ಕ್ವಾಲ್ಕಮ್ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 835 Soc ಪ್ರೊಸೆಸರ್‌ನಲ್ಲಿ ಸಾಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಈ ಸ್ನ್ಯಾಪ್‌ಡ್ರಾಗನ್ 835 Soc ಪ್ರೊಸೆಸರ್ ಕ್ವಾಲ್ಕಮ್‌ನ ಎಕ್ಸ್‌ 20 ಎಲ್‌ಟಿಯಿ ಮೋಡೆಮ್ ಸಪೋರ್ಟೆಡ್ ಆಗಿದೆ.!!

ಎಲ್‌ಟಿಇ ತಂತ್ರಜ್ಞಾನದಲ್ಲಿ ವಿಶ್ವದಾಖಲೆ!..1.2Gbps ವೇಗದಲ್ಲಿ ಡೇಟಾ ಡೌನ್‌ಲೋಡ್!!

ಇನ್ನು ಯುನಿಕಾಮ್ ಸಾಧಿಸಿರುವ 1.2Gbps ಡೌನ್‌ಲೋಡ್ ವೇಗ 5G ವೇಗಕ್ಕೆ ಹತ್ತಿರವಾಗಿದೆ ಎಂದು ಹೇಳಲಾಗಿದ್ದು, ಸ್ನ್ಯಾಪ್‌ಡ್ರಾಗನ್ 835 Soc ಪ್ರೊಸೆಸರ್ ಅಳವಡಿಸಿರುವ ಸ್ಮಾರ್ಟ್‌ಫೋನ್‌ಗಳು ಈ ವೇಗಕ್ಕೆ ಸರಿಹೊಂದುವ ನಿರೀಕ್ಷೆ ಇದೆ.! ಹಾಗಾಗಿಯೇ ಈ ಸುದ್ದಿ ವೈರಲ್ ಆಗಿದೆ.!!

ಓದಿರಿ: ಕೇವಲ ಕ್ಯಾಮೆರಾಗಾಗಿ ಮಾತ್ರ ಮೊಬೈಲ್ ಖರೀದಿಸುತ್ತಿರಾ?..ಕಂಪೆನಿಗಳ ಮೋಸ ತಿಳಿಯುತ್ತಿಲ್ಲವೇ?

English summary
World’s Fastest 1.2 Gbps LTE Download Speed Connection
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot