ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು

By Shwetha
|

ಆಂಡ್ರಾಯ್ಡ್ 6.0 ಮಾರ್ಶ್‌ ಮಲ್ಲೊ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಿಗೆ ಕಾಲಿರಿಸಿದೆ. ನಿಮ್ಮ ಫೋನ್ ಈ ಅಪ್‌ಡೇಟ್‌ಗೆ ಯೋಗ್ಯವಾಗಿದೆ ಎಂದಾದಲ್ಲಿ ಅದು ನಿಮ್ಮ ಫೋನ್ ಅನ್ನು ಯಾವಾಗ ಬೇಕಾದರೂ ತಲುಪಬಹುದು. ನಿಮ್ಮ ಫೋನ್‌ಗೆ ಈ ಅಪ್‌ಡೇಟ್‌ಗಳನ್ನು ನೀವು ಮಾಡಿಕೊಳ್ಳುವ ಮೊದಲು ಕೆಲವೊಂದು ಅಂಶಗಳನ್ನು ನೀವು ತಿಳಿದುಕೊಳ್ಳಬೇಕಾದ್ದು ಅನಿವಾರ್ಯವಾಗಿದೆ.

ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಅಪ್‌ಡೇಟ್ಸ್ ಕೆಲವೊಂದು ಪ್ರಯೋಜನಗಳನ್ನು ಮತ್ತು ದುಷ್ಪರಿಣಾಮಗನ್ನು ಒಳಗೊಂಡು ಬಂದಿದ್ದು ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಅಪ್‌ಡೇಟ್‌ನಿಂದ ಉಂಟಾಗುವ ಅತ್ಯಗತ್ಯಗಳನ್ನು ನೋಡಿ.

#1

#1

ಅಪ್‌ಡೇಟ್ ಕುರಿತು ನೀವು ಅರಿತುಕೊಂಡು ನಂತರ ಇದನ್ನು ಫೋನ್‌ಗೆ ಅಪ್‌ಡೇಟ್ ಮಾಡಿಕೊಳ್ಳಿ. ಅಪ್‌ಡೇಟ್ ಕುರಿತಾದ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕುರಿತು ನೀವು ಅರಿತುಕೊಳ್ಳಬೇಕು. ನಿಮ್ಮ ಫೋನ್‌ಗೆ ಇದು ತರುವ ಬದಲಾವಣೆಗಳನ್ನು ನೀವು ಅರಿತುಕೊಳ್ಳಬೇಕಾಗಿದೆ. ನಿಮಗೆ ಲಾಲಿಪಪ್ ಇಷ್ಟವಾಗಿದೆ ಎಂದಾದಲ್ಲಿ ಮಾರ್ಶ್ ಮಲ್ಲೊಗೆ ಅಪ್‌ಡೇಟ್‌ ಆಗುವ ಅವಶ್ಯಕತೆ ಇಲ್ಲ.

#2

#2

ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ನಿಮ್ಮೆಲ್ಲಾ ಫೈಲ್‌ಗಳು ಅಂದರೆ ಸಂಪರ್ಕಗಳು, ಫೋಟೋಗಳು, ವೀಡಿಯೊಗಳು ಮತ್ತು ಅಗತ್ಯ ಅಪ್ಲಿಕೇಶನ್ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಲು ಮರೆಯದಿರಿ.

#3

#3

ನಿಮ್ಮ ಫೋನ್‌ನ ಜಂಕ್ ಕ್ಲೀನ್ ಮಾಡಿ ಅಂದರೆ ಬೇಡದ ಫೈಲ್‌ಗಳು, ಹಾಡುಗಳನ್ನು ಡಿಲೀಟ್ ಮಾಡುವುದರಿಂದ ಸ್ಥಳ ದೊರೆಯುತ್ತದೆ.

#4

#4

ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವುದಕ್ಕೆ ಮುನ್ನ ನಿಮ್ಮ ಫೋನ್ ಅನ್ನು 80 ಶೇಕಡಾಕ್ಕೆ ಚಾರ್ಜ್ ಮಾಡಲು ಮರೆಯದಿರಿ. ಡೌನ್‌ಲೋಡ್ ಮಾಡುವುದಕ್ಕೂ ಮುನ್ನ ಫೋನ್‌ಗೆ ಚಾರ್ಜ್ ಮಾಡುವುದು ಅಗತ್ಯವಾಗಿದೆ. ಅಪ್‌ಡೇಟ್ ಅನ್ನು ನೀವು ಡೌನ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ ಫೋನ್ ಅನ್ನು ಚಾರ್ಜ್‌ಗೆ ಇರಿಸಿಕೊಳ್ಳಿ ಇದರಿಂದ ಬಳಸಲು ನಿಮಗೆ ಸುಲಭ.

#5

#5

ಮಾರ್ಶ್ ಮಲ್ಲೊ ಸ್ವೀಕರಿಸುತ್ತಿರುವ ಅಪ್‌ಡೇಟ್‌ಗಾಗಿ ಆನ್‌ಲೈನ್‌ನಲ್ಲಿ ನೋಡಿ. ಇದು ಧನಾತ್ಮಕ ಮತ್ತು ಋಣಾತ್ಮಕ ವಿಮರ್ಶೆಗಳನ್ನು ಹೊಂದಿರುತ್ತದೆ.

#6

#6

ಮಾರ್ಶ್ ಮಲ್ಲೊನಲ್ಲಿ ಕ್ರಶ್ ಆಗುವ ಅಪ್ಲಿಕೇಶನ್‌ಗಳಿಗಾಗಿ ನೋಡಿ. ನೀವು ನಿರ್ದಿಷ್ಟ ಅಪ್ಲಿಕೇಶನ್‌ ಅನ್ನು ಬಳಸುತ್ತಿದ್ದು ಅದು ಮಾರ್ಶ್ ಮಲ್ಲೊನಲ್ಲಿ ಕ್ರಶ್ ಆಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

#7

#7

ಅಪ್ಲಿಕೇಶನ್ ಅನುಮತಿಗಳನ್ನು ಕುರಿತು ತಿಳಿದುಕೊಳ್ಳಿ. ಮಾರ್ಶ್ ಮಲ್ಲೊನಲ್ಲಿ ಅಪ್ಲಿಕೇಶನ್ ಅನುಮತಿಗಳಿದ್ದು ನಿಮ್ಮೆಲ್ಲಾ ವಯಕ್ತಿಕ ವಿವರಗಳನ್ನು ಲಾಗಿನ್ ಮಾಡುವಾಗ ಅಪ್ಲಿಕೇಶನ್ ಮೇಲೆ ಅಧಿಕಾರವನ್ನು ಗಳಿಸಿಕೊಳ್ಳಬಹುದಾಗಿದೆ.

#8

#8

ಫೋನ್ ಅನ್ನು ಕಚೇರಿ ಕೆಲಸಗಳಿಗಾಗಿ ನೀವು ಬಳಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ ಆಂಡ್ರಾಯ್ಡ್‌ನಲ್ಲಿ ನಿರ್ದಿಷ್ಟ ಫೋನ್ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಅರಿತುಕೊಳ್ಳಲು ಐಟಿ ವಿಭಾಗದೊಂದಿಗೆ ಪರಿಶೀಲಿಸಿಕೊಳ್ಳಿ.

#9

#9

ಮಾರ್ಶ್ ಮಲ್ಲೊನಲ್ಲಿ ಅಪ್ಲಿಕೇಶನ್ ಅಪ್‌ಡೇಟ್ಸ್ ಕುರಿತು ಅರಿತುಕೊಳ್ಳಿ. ಹಳೆಯ ಫೀಚರ್‌ಗಳನ್ನು ಹೊಸ ಅಪ್‌ಡೇಟ್‌ಗಳು ಬೆಂಬಲಿಸದೇ ಇರಬಹುದು. ಆದ್ದರಿಂದ ಸಮಸ್ಯೆಯನ್ನು ಎದುರಿಸಬಹುದಾದ ಅಪ್ಲಿಕೇಶನ್ ಯಾವುವು ಎಂಬುದನ್ನು ಕಂಡುಕೊಳ್ಳಿ.

#10

#10

ಮಾರ್ಶ್ ಮಲ್ಲೊ ಬಳಸಲು ನಿಮಗೆ ಆರಾಮದಾಯವಾಗಿದೆಯೇ ಎಂಬುದನ್ನು ಕಂಡುಕೊಳ್ಳಿ. ಇಂಟರ್ಫೇಸ್‌ನೊಂದಿಗೆ ನೀವು ಆರಾಮದಾಯಕವಾಗಿಲ್ಲ ಎಂದಾದಲ್ಲಿ ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಮಾಡಿಕೊಳ್ಳಬೇಡಿ ಅಂತೆಯೇ ಆಂಡ್ರಾಯ್ಡ್‌ನ ಹಳೆಯ ಓಎಸ್‌ ಅನ್ನೇ ಬಳಸಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ</a><br /><a href=ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು
ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ? ಇಲ್ಲಿದೆ ಪರಿಹಾರ
ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ" title="ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ
ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು
ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ? ಇಲ್ಲಿದೆ ಪರಿಹಾರ
ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ" />ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ
ಕಾಣೆಯಾದ ಮಗುವನ್ನು 2 ಗಂಟೆಗಳಲ್ಲಿ ವಾಟ್ಸಾಪ್‌ನಿಂದ ಪತ್ತೆಹಚ್ಚಿದ ಪೋಲಿಸರು
ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ? ಇಲ್ಲಿದೆ ಪರಿಹಾರ
ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X