ಅಪ್ಪನ ಫೇಸ್ ಬುಕ್ ಆಟ, ಮಗಳಿಗೆ ಪ್ರಾಣಸಂಕಟ

Posted By: Staff
ಅಪ್ಪನ ಫೇಸ್ ಬುಕ್ ಆಟ, ಮಗಳಿಗೆ ಪ್ರಾಣಸಂಕಟ

ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಏನು ಮಾಡಿದರೂ ಸುದ್ದಿಯಾಗುತ್ತದೆ. ಸಂಬಂಧಗಳನ್ನು ಬೆಸೆಯಲು ಈ ವೆಬ್ಸೈಟುಗಳು ಎಷ್ಟು ಸಹಕಾರಿಯೋ ಹಾಗೆಯೇ ಅನೈತಿಕ ಹಾಗು ಸಂಬಂಧ ಮುರಿಯುವ ಕೆಲಸಗಳಿಗೂ ವೇದಿಕೆಯಾಗುತ್ತಿದೆ.

ಫೇಸ್ ಬುಕ್ ನಲ್ಲಿ ಪ್ರೇಮಿಸಿ ವಂಚನೆ ಮಾಡುವ ಸುದ್ದಿಯನ್ನು ಟಿವಿಯಲ್ಲಿ ನೋಡೇ ಇರುತ್ತೀರಿ. ಗಂಡನ ಅಕ್ರಮ ಸಂಬಂಧವನ್ನು ಹೆಂಡತಿ, ಗಂಡನ ಆ ಗೆಳತಿಯ ಜೊತೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿ ಪತ್ತೆ ಮಾಡಿದ್ದನ್ನು ನಾವು ಕಳೆದ ತಿಂಗಳು ಓದಿದ್ದೆವು. ಈಗ ಗುಜರಾತ್ ನ ರಾಜ್ಕೋಟ್ ನಿಂದ ಮತ್ತೊಂದು ರೀತಿಯ ಫೇಸ್ ಬುಕ್ ಅನಾಹುತವೊಂದು ವರದಿಯಾಗಿದೆ.

ಸುದ್ದಿ ಏನೆಂದರೆ ಸಂಜಯ್ ಗಾಂಧಿ ಎಂಬ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್ ತನ್ನ ಪತ್ನಿಯೊಡನೆ ಜಗಳವಾಡಿಕೊಂಡು ಬೇರೆ ವಾಸಿಸುತ್ತಿದ್ದ. ಆತನ ಪತ್ನಿ ನಿಲ ಮತ್ತು ಅವನ ಮಗಳು ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು.

ತಾಯಿಯ ಜೊತೆಗಿದ್ದರೂ ಮಗಳು ಶಾಲೆಯ ಪ್ರಾಜೆಕ್ಟ್ ವಿಷಯವಾಗಿ ತಂದೆಯ ಮಾರ್ಗದರ್ಶನ ಪಡೆಯಲು ಫೇಸ್ ಬುಕ್ ನಲ್ಲಿ ಫ್ರೆಂಡ್ ಮಾಡಿಕೊಂಡು ತಂದೆಯ ಫೇಸ್ ಬುಕ್ ವಾಲ್ ನಲ್ಲಿ ನೋಡಿದಾಗ ಆಕೆಗೆ ನಿಜಕ್ಕೂ ಶಾಕ್ ಆಯಿತು. ಸಂಜಯ್ ಗಾಂಧಿ ವಾಲ್ ನಲ್ಲಿ ಹಲವಾರು ಹುಡುಗಿಯರ ಅಶ್ಲೀಲ ಚಿತ್ರಗಳನ್ನು ಹಾಕಿಕೊಂಡಿದ್ದ ಹಾಗು ಅವುಗಳನ್ನು ಲೈಕ್ ಮಾಡಿದ್ದ ಕೂಡ.

ಈ ಶಾಕ್ ಅನ್ನು ತಡೆದುಕೊಳ್ಳಲಾಗದ 14 ವರ್ಷದ ಆ ಹುಡುಗಿ ಪಾಪ ತನ್ನ ತಾಯಿಗೆ ಈ ವಿಷಯ ತಿಳಿಸಿದ್ದಾಳೆ. ಆಕೆ ತನ್ನ ಗಂಡನಿಗೆ ಛೀಮಾರಿ ಹಾಕಿ ಆ ಚಿತ್ರಗಳನ್ನು ಫೇಸ್ ಬುಕ್ ನಿಂದ ತೆಗೆದು ಮಗಳ ಕ್ಷಮೆ ಕೋರುವಂತೆ ಕೇಳಿಕೊಂಡಿದ್ದಾಳೆ. ಅದನ್ನು ನಿರಾಕರಿಸಿದ ಆತನ ಭಂಡತನಕ್ಕೆ ಪಾಠ ಕಲಿಸಲು ಆಕೆ ಅವನ ವಿರುದ್ಧ ತನ್ನ ಮಗಳ ಮಾನಸಿಕ ನೆಮ್ಮದಿ ಹಾಳು ಮಾಡಿರುವುದರಿಂದ ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾಳೆ.

ಈಗ ಸಂಜಯ್ ಗಾಂಧಿ ನಾಪತ್ತೆಯಾಗಿದ್ದಾನೆ. ಫೆಸ್ ಬುಕ್ ನಲ್ಲಿ ಆಡಿದ ಆಟವನ್ನು ಫೇಸ್ ಟು ಫೇಸ್ ಮಗಳ ಮುಂದೆ ಒಪ್ಪಿಕೊಂಡಿದ್ದರೆ ಈ ರೀತಿ ತಲೆಮರೆಸಿಕೊಳ್ಳುವ ಅವಶ್ಯಕತೆ ಬರುತ್ತಿತ್ತಾ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot