Subscribe to Gizbot

1.3 ಕೋಟಿ ಸಂಬಳಕ್ಕೆ ಫೇಸ್ ಬುಕ್ ಸೇರಿದ ಭಾರತೀಯ

Posted By: Varun

 

1.3 ಕೋಟಿ ಸಂಬಳಕ್ಕೆ ಫೇಸ್ ಬುಕ್ ಸೇರಿದ ಭಾರತೀಯ

ವಿಶ್ವದ ನಂ 1 ಸಾಮಾಜಿಕ ಜಾಲ ತಾಣ ಫೇಸ್ ಬುಕ್ 800 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ವಿಷಯ ನಿಮಗೆ ಗೊತ್ತೇ ಇದೆ. ಫೇಸ್ ಬುಕ್ ನಲ್ಲಿ ಖಾತೆ ಹೊಂದಿರುವುದೇ ಹೆಮ್ಮೆಯ ವಿಷಯವಾಗಿರುವಾಗ, ಅಲಹಾಬಾದ್ ನ ಮೋತಿಲಾಲ್ ನೆಹರೂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಿ.ಟೆಕ್ ವಿದ್ಯಾರ್ಥಿಯೊಬ್ಬನನ್ನು ಫೇಸ್ ಬುಕ್ ,ವಾರ್ಷಿಕ 1.3 ಕೋಟಿ ರೂಪಾಯಿ ಸಂಬಳಕ್ಕೆ ಸೇರಿಸಿಕೊಂಡಿದೆ.

ಇದುವರೆಗೂ ಐಐಎಂ ನಂತಹ ಪ್ರತಿಷ್ಟಿತ ಕಾಲೇಜುಗಳಲ್ಲಿ ಮಾತ್ರ ಈ ರೀತಿಯ ಪ್ಯಾಕೇಜ್ ಅನ್ನು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಪಡೆಯುತ್ತಿದ್ದ ಸುದ್ದಿ ನಾವು ಕೇಳಿದ್ದೆವು. ಈಗ ಇದುಇಂಜಿನಿಯರಿಂಗ್ ಕಾಲೇಜುಗಳಲ್ಲೇಅತೀ ಹೆಚ್ಚು ಸಂಬಳದ ಆಫರ್ ಇದಾಗಿದೆ.

ಭದ್ರತಾ ಕಾರಣಗಳಿಂದ ವಿದ್ಯಾರ್ಥಿಯ ಹೆಸರನ್ನು ಹೇಳಲು ಇಚ್ಛಿಸದ ಮೋತಿಲಾಲ್ ನೆಹರೂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡೈರೆಕ್ಟರ್ ಈ ವಿಷಯವನ್ನು ಮಾಧ್ಯಮದ ಜೊತೆ ಹಂಚಿಕೊಂಡರು.

ಕಳೆದ ಅಕ್ಟೋಬರ್ ನಿಂದ 9 ಸುತ್ತಿನ ಸಂದರ್ಶನ ನಡೆಸಿದ ಫೇಸ್ ಬುಕ್ ಮಾರ್ಚ್ 27 ಕ್ಕೆ ಆ ವಿದ್ಯಾರ್ಥಿಗೆ ಆಯ್ಕೆ ಕನ್ಫರ್ಮ್ ಮಾಡಿ ಆಫರ್ ಲೆಟರ್ ಕೊಟ್ಟಿದೆ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot