ಸ್ಮಾರ್ಟ್‌ಫೋನ್‌ನಲ್ಲಿದೆ ಪ್ರಾಣಕ್ಕೆ ಕುತ್ತುತರುವ ಅಂಶಗಳು

Written By:

ಇಂದಿನ ಆಧುನಿಕ ಯುಗದ ರೀತಿ ರಿವಾಜಿಗೆ ತಕ್ಕಂತೆಯೇ ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್ ಅಂಶಗಳನ್ನೇ ನಮಗೆ ನೀಡುತ್ತಿವೆ. ವೆಬ್ ಸರ್ಫ್ ಮಾಡುವುದು, ನಿಮಗೆ ಬೇಕಾದ ಮಾಹಿತಿಯನ್ನು ಒದಗಿಸಿ ಕೊಡುವುದು, ಫೋಟೋ ತೆಗೆಯುವಿಕೆ ಅದನ್ನು ತ್ವರಿತವಾಗಿ ಶೇರ್ ಮಾಡುವುದು ಹೀಗೆ ತ್ವರಿತವಾಗಿ ನಿಮಗೆ ಬೇಕಾದ ರೀತಿಯಲ್ಲೇ ಕೆಲಸಗಳನ್ನು ನಿರ್ವಹಿಸುತ್ತಿದೆ.

ಓದಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ಆದರೆ ಸ್ಮಾರ್ಟ್‌ಫೋನ್‌ಗಳು ಒದಗಿಸುತ್ತಿರುವ ಈ ಪ್ರಯೋಜನಗಳು ಒಮ್ಮೊಮ್ಮೆ ಕಿರಿಕಿರಿಯನ್ನುಂಟು ಮಾಡುತ್ತದೆ. ಸ್ಮಾರ್ಟ್‌ಫೋನ್‌ಗಳ ಅತಿಹೆಚ್ಚು ಬಳಕೆ ಇಂದು ಪ್ರಾಣಕ್ಕೆ ಕುತ್ತಾಗಿದೆ. ಯುವಜನರು ತಪ್ಪು ಕೆಲಸಗಳಲ್ಲಿ ಮೈಮರೆಯುತ್ತಿದ್ದಾರೆ. ಇಂತಹುದೇ ಕೆಲವೊಂದು ತಲೆನೋವಿನ ಕೆಲಸಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಹಂಚಿಕೊಳ್ಳುತ್ತಿದ್ದು ಸ್ಮಾರ್ಟ್‌ಫೋನ್‌ಗಳು ಎಷ್ಟು ಬದಲಾವಣೆಯನ್ನು ಉಂಟುಮಾಡಿವೆ ಎಂಬುದನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಿರಿಕಿರಿ

ಕಿರಿಕಿರಿ

ಫೋಟೋ ಹಂಚಿಕೆ

ಇನ್ನು ಏನಾದರೂ ವಿಶೇಷ ಖಾದ್ಯವನ್ನು ತಯಾರಿಸಿದರೂ ಅದರ ಫೋಟೋ ತೆಗೆಯುವುದು ಮತ್ತು ಅದನ್ನು ಹಂಚಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಇತರರಿಗೆ ಇದು ಕಿರಿಕಿರಿಯನ್ನುಂಟು ಮಾಡುತ್ತದೆ ಎಂಬ ವಿಷಯ ನಮ್ಮ ತಲೆಯಲ್ಲಿ ಇರುವುದೇ ಇಲ್ಲ.

ಆಗಾಗ್ಗೆ ಸಂದೇಶ ರವಾನೆ

ಆಗಾಗ್ಗೆ ಸಂದೇಶ ರವಾನೆ

ವಿವಾದಗಳನ್ನು ಬಗೆಹರಿಸಿ

ಇನ್ನು ವಿವಾದಗಳನ್ನು ಬಗೆಹರಿಸಲು ಫೋನ್ ಅನ್ನು ಹೆಚ್ಚು ಹೆಚ್ಚು ಬಳಸುವವರಿದ್ದಾರೆ? ಇಂತಹ ಸಂದರ್ಭದಲ್ಲಿ ಅವರ ಕೈ ಸುಮ್ಮನೆ ಇರುವುದೇ ಇಲ್ಲ. ಫೋನ್‌ನಲ್ಲಿ ಆಗಾಗ್ಗೆ ಸಂದೇಶ ರವಾನೆಯಾಗುತ್ತಲೇ ಇರುತ್ತದೆ.

ಅನಿಯಮಿತ ಬಳಕೆ

ಅನಿಯಮಿತ ಬಳಕೆ

ಅನಿಯಮಿತ ಅಪ್ಲಿಕೇಶನ್‌ಗಳ ಬಳಕೆ

ಸ್ಮಾರ್ಟ್‌ಫೋನ್‌ಗಳು ಒದಗಿಸುತ್ತಿರುವ ಅಪ್ಲಿಕೇಶನ್‌ಗಳು ಒಮ್ಮೊಮ್ಮೆ ಪ್ರಯೋಜನಕಾರಿಯಾಗಿದ್ದರೂ ಇದರಿಂದ ತಲೆನೋವು ಇದ್ದೇ ಇದೆ. ಹೆಚ್ಚಿನ ಅಪ್ಲಿಕೇಶನ್‌ಗಳ ಬಳಕೆಯಿಂದಾಗಿ ನಿಮ್ಮ ಫೋನ್ ಕಸದ ಡಬ್ಬಿಯಾಗುವುದು ಖಂಡಿತ.

ಸೆಲ್ಫಿ ಸರಮಾಲೆ

ಸೆಲ್ಫಿ ಸರಮಾಲೆ

ಸೆಲ್ಫಿ ತೆಗೆಯಿರಿ

ಇನ್ನು ಫೋನ್‌ಗಳಲ್ಲಿ ಮುಂಭಾಗ ಕ್ಯಾಮೆರಾ ಇದೆ ಎಂದಾದಲ್ಲಿ ಬೇಕು ಬೇಕಾದ ಹಾಗೆ ಸೆಲ್ಫಿ ತೆಗೆಯುವುದು ಮೋಜುದಾಯಕವಾಗಿದೆ. ಕುಳಿತಲ್ಲಿ ನಿಂತಲ್ಲಿ ಹೀಗೆ ಬೇರೆ ಬೇರೆ ಪ್ರಕ್ರಿಯೆಗಳಲ್ಲಿ ಸೆಲ್ಫಿ ಸರಮಾಲೆ.

ಮ್ಯೂಸಿಕ್ ಪೆಟ್ಟಿಗೆ

ಮ್ಯೂಸಿಕ್ ಪೆಟ್ಟಿಗೆ

ನಿಮ್ಮ ಫೋನ್ ಅನ್ನೇ ಮ್ಯೂಸಿಕ್ ಪೆಟ್ಟಿಗೆಯನ್ನಾಗಿಸಿ

ಇನ್ನು ಕೆಲವರು ತಮ್ಮ ಫೋನ್‌ಗಳನ್ನೇ ಸಂಗೀತ ಪೆಟ್ಟಿಗೆಯನ್ನಾಗಿಸಿ ಸಾರ್ವಜನಿಕ ವಲಯಗಳಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಾರೆ. ಅವರಿಗೆ ಇದು ಒಂದು ರೀತಿಯ ಮೋಜನ್ನು ಉಂಟುಮಾಡುತ್ತಿದ್ದರೂ ಆಲಿಸುವವರಿಗೆ ಕಿರಿಕಿರಿ ಖಂಡಿತ.

ಬ್ಯುಸಿ

ಬ್ಯುಸಿ

ಲಿಫ್ಟ್‌ಗಳಲ್ಲಿ ಫೋನ್ ಬಳಕೆ

ಇನ್ನು ಲಿಫ್ಟ್‌ಗಳಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ ಎಂದಾದಲ್ಲಿ ಕೂಡ ಫೋನ್ ಬಳಕೆ ಮಾಡುವುದು ಅಸಹನೀಯವನ್ನುಂಟು ಮಾಡುತ್ತದೆ. ಫೋನ್‌ಗಳು ನಮ್ಮನ್ನು ಎಷ್ಟು ಬ್ಯುಸಿಯಾಗಿಸಿವೆ ಎಂಬುದು ಇದರಿಂದ ತಿಳಿದು ಬರುತ್ತದೆ.

ವೀಡಿಯೋ ಶೂಟಿಂಗ್

ವೀಡಿಯೋ ಶೂಟಿಂಗ್

ಪೋಟ್ರೇಟ್ ಮೋಡ್‌ನಲ್ಲಿ ವೀಡಿಯೋ ಶೂಟಿಂಗ್

ಇನ್ನು ಕೆಲವರು ಮೇಧಾವಿಗಳು ಫೋನ್‌ನಲ್ಲಿ ವೀಡಿಯೋ ಶೂಟಿಂಗ್ ಮಾಡುವಾಗ ಲಂಬವಾಗಿ ತಮ್ಮ ಫೋನ್ ಅನ್ನು ಹಿಡಿದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವಾಗ ಚಿತ್ರಗಳು ಸರಿಯಾಗಿ ಸೆರೆಯಾಗುವುದಿಲ್ಲ ಎಂಬ ಸಾಮಾನ್ಯ ಅಂಶ ಅವರ ತಲೆಯಲ್ಲಿರುವುದಿಲ್ಲ.

ಆಪಲ್ ಮ್ಯಾಪ್ಸ್

ಆಪಲ್ ಮ್ಯಾಪ್ಸ್

ಐಫೋನ್‌ಗಾಗಿ ಆಪಲ್ ಮ್ಯಾಪ್ಸ್

ಆಪಲ್‌ನ ಮ್ಯಾಪ್ಸ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದೇ ಇರುವುದು. ಆಪಲ್ ಮ್ಯಾಪ್ಸ್ ಅನ್ನು ಬಳಸುತ್ತಿರುವಾಗ ನೀವು ಮೂರನೇ ವ್ಯಕ್ತಿ ಅಪ್ಲಿಕೇಶನ್ ಅಥವಾ ಗೂಗಲ್ ಮ್ಯಾಪ್ಸ್‌ನ ನೆರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ಸ್ಮಾರ್ಟ್‌ಫೋನ್ ಸಂಗಾತಿ

ಸ್ಮಾರ್ಟ್‌ಫೋನ್ ಸಂಗಾತಿ

ನಡೆದಾಡುವಾಗ ಸ್ಮಾರ್ಟ್‌ಫೋನ್ ಸಂಗಾತಿ

ರಸ್ತೆಯಲ್ಲಿ ನಡೆದಾಡುವಾಗ ಕೂಡ ನಾವು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತೇವೆ. ಆದರೆ ಇದರಿಂದ ಉಂಟಾಗುವ ಅವಘಡಗಳ ಬಗ್ಗೆ ನಿಮಗೆ ಎಚ್ಚರವಿದೆಯೇ? ಫೋನ್ ಅನ್ನು ನಾವು ಬಳಸುತ್ತಿರುವಾಗ ಮೈಮರೆಯುವುದು ಸಹಜ. ಆದರೆ ಇದು ನಿಮ್ಮ ಪ್ರಾಣಕ್ಕೆ ಹಾನಿಯನ್ನುಂಟು ಮಾಡಬಲ್ಲುದು.

ನಿಯಮಗಳನ್ನು ಪಾಲಿಸಿ

ನಿಯಮಗಳನ್ನು ಪಾಲಿಸಿ

ಮೀಟಿಂಗ್‌ನಲ್ಲಿ ಫೋನ್ ಬಳಕೆ

ಕೆಲವೊಮ್ಮೆ ತುರ್ತಾದ ಮೀಟಿಂಗ್‌ಗಳ ಸಂದರ್ಭಗಳಲ್ಲಿ ನಿಮ್ಮ ಫೋನ್ ಕಿರಿಚಿಕೊಳ್ಳುತ್ತಿದ್ದರೆ ಬೇರೆಯವರಿಗೆ ಅದು ಅಸಹನೀಯವಾಗುತ್ತದೆ. ಆದ್ದರಿಂದ ಕೆಲವೊಂದು ಸ್ಥಳಗಳಲ್ಲಿ ಫೋನ್‌ ಬಳಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article discussed about 10 Amazingly Dumb Things We Do with Smartphones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot