ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಜೀವನದ 10 ರೋಚಕ ಅಂಶಗಳು

By Shwetha
|

ಸ್ಟೀಫನ್ ಹಾಕಿಂಗ್ ಹೆಸರನ್ನು ಯಾರು ಕೇಳಿಲ್ಲ ಹೇಳಿ. ತಮ್ಮ ಶೈಕ್ಷಣಿಕ ಸಾಧನೆಗಳಿಂದ ವಿಶ್ವದ ಗಮನ ಸೆಳೆದ ಹಾಕಿಂಗ್ ಕುರಿತು ನೀವು ಕೇಳರಿಯದ ಸಾಕಷ್ಟು ಆಸಕ್ತಿಕರ ಸಂಗತಿಗಳಿವೆ. ಮಾನವನ ಬಗೆಗಿನ ಅವರ ನಿಲುವು, ಭೂಮಿಗೆ ಬರಲಿರುವ ಹಾರುವ ತಟ್ಟೆಗಳು, ವಿಶ್ವದ ವಿನಾಶ ಹೀಗೆ ಅವರು ನೀಡುವ ಮಾಹಿತಿಗಳು ಸತ್ಯಕ್ಕೆ ಹತ್ತಿರವಾಗಿರುವಂಥದ್ದು.

ಇಂದಿನ ಲೇಖನದಲ್ಲಿ ಈ ಅದ್ಭುತ ಪ್ರತಿಭೆಯನ್ನು ಕುರಿತಾದ ಇನ್ನಷ್ಟು ರೋಚಕ ಅಂಶಗಳನ್ನು ನಾವು ನಿಮಗೆ ತಿಳಿಸಲಿದ್ದು ಇವರು ಏಕೆ ಇಷ್ಟೊಂದು ವಿಭಿನ್ನರು ಎಂಬುದನ್ನು ತಿಳಿದುಕೊಳ್ಳಲು ಇದೊಂದು ಅವಕಾಶವಾಗಿದೆ. ಹಾಗಿದ್ದರೆ ಬನ್ನಿ ಆ ಮಾಹಿತಿಗಳನ್ನು ಅರಿತುಕೊಳ್ಳೋಣ.

ತುಸು ಕಷ್ಟ

#1

ಸ್ಟೀಫನ್ ಸಿದ್ಧಾಂತಗಳನ್ನು ವೈಜ್ಞಾನಿಕವಲ್ಲದ ಮೆದುಳು ತಿಳಿದುಕೊಳ್ಳುವುದು ತುಸು ಕಷ್ಟವೇ. ಶಾಲಾ ದಿನಗಳಲ್ಲಿ ಅಷ್ಟೊಂದು ಬುದ್ಧಿವಂತರಾಗಿರದಿದ್ದ ಸ್ಟೀಫನ್ ಅತಿ ಕಷ್ಟದಿಂದ ಪಾಸಾಗುತ್ತಿದ್ದರು. ಅದಾಗ್ಯೂ ಅವರಲ್ಲಿದ್ದ ಪ್ರತಿಭೆಯಿಂದ ಭವಿಷ್ಯದಲ್ಲಿ ಅವರೊಬ್ಬ ಶ್ರೇಷ್ಟ ಸಾಧಕರಾಗುತ್ತಾರೆಂದೇ ಅವರು ಗುರುಗಳು ಅರಿತುಕೊಂಡಿದ್ದರು.

ಜೀವಶಾಸ್ತ್ರದ ಬಗೆಗಿನ ಅಸಡ್ಡೆ

#2

ಸ್ಟೀಫನ್ ತಂದೆ ಫ್ರಾಂಕ್‌ಗೆ ಅವರು ವೈದ್ಯಕೀಯ ಕಲಿಯಬೇಕೆಂಬ ಆಸೆ ಇತ್ತು. ಆದರೆ ಸ್ಟೀಫನ್‌ಗೆ ಒಲವು ಇದ್ದದ್ದು ವಿಜ್ಞಾನದಲ್ಲಿ. ಅವರು ಜೀವ ಶಾಸ್ತ್ರದ ಮೇಲೆ ಒಲವನ್ನು ಇರಿಸಿಕೊಂಡಿರಲಿಲ್ಲ.

ಆಕ್ಸ್‌ಪರ್ಡ್ ತಂಡ

#3

ಆಕ್ಸ್‌ಪರ್ಡ್‌ನಲ್ಲಿ ಪ್ರಥಮ ವರ್ಷದ ಅಧ್ಯಯನವನ್ನು ಸ್ಟೀಫನ್ ಅತಿಕಷ್ಟದಲ್ಲಿ ಕಳೆದಿದ್ದರಂತೆ. ಹಾಕಿಂಗ್ಸ್ ಕಾಲೇಜಿನ ರೋವಿಂಗ್ ತಂಡವನ್ನು ಸೇರಿಕೊಂಡರು ಮತ್ತು ಕಾಲೇಜಿನಲ್ಲಿ ಪ್ರಸಿದ್ಧರಾದರು.

21 ರ ಹರೆಯದಲ್ಲೇ ರೋಗ ನಿರ್ಧಾರ

#4

ಸ್ಟೀಫನ್ 21 ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ತಮ್ಮ ದೇಹದಲ್ಲಿ ಉಂಟಾಗುತ್ತಿರುವ ದೋಷಗಳನ್ನು ಕಂಡುಕೊಂಡರು. ಲೋ ಗೆರಿಗ್ಸ್ ರೋಗ ಅಂದರೆ ನರವೈಜ್ಞಾನಿಕ ರೋಗದಿಂದ ಅವರು ಬಳಲುತ್ತಿದ್ದುದನ್ನು ಪರೀಕ್ಷೆಯಿಂದ ಕಂಡುಕೊಂಡ ಸ್ಟೀಫನ್ ದೇಹಗಳ ಮೇಲಿನ ಸ್ನಾಯುಗಳ ನಿಯಂತ್ರಣವನ್ನು ಕಳೆದುಕೊಂಡಿದ್ದರು. ಸ್ವಲ್ಪ ಸಮಯವೇ ಬದುಕುವ ಆಸೆಯನ್ನು ಅವರಿಟ್ಟುಕೊಂಡಿದ್ದರು.

ಬೌಂಡ್‌ಲೆಸ್ ಯೂನಿವರ್ಸ್ ಸಿದ್ಧಾಂತ

#5

ಹಾಕಿಂಗ್‌ರ ಮುಖ್ಯ ಸಾಧನೆಗಳಲ್ಲಿ 1983 ರ ವಿಶ್ವಕ್ಕೆ ಯಾವುದೇ ಸೀಮೆಗಳಿಲ್ಲ ಎಂಬ ಸಿದ್ಧಾಂತವು ಅತಿಮುಖ್ಯವಾದುದು. ವಿಶ್ವದ ಸ್ವಭಾವ ಮತ್ತು ಆಕಾರವನ್ನು ಅರಿತುಕೊಳ್ಳಲು ಅವರು ಪ್ರಯತ್ನಪಟ್ಟರು. ಅದರಂತೆಯೇ ವಿಶ್ವಕ್ಕೆ ಯಾವುದೇ ಸೀಮೆಗಳಿಲ್ಲ ಎಂಬುದನ್ನು ಕಂಡುಕೊಂಡರು.

ಬ್ಲ್ಯಾಕ್ ಹೋಲ್ಸ್ (ಕಪ್ಪು ಕುಳಿಗಳು)

#6

1997 ರಲ್ಲಿ ತಮ್ಮ ಸಹ ವಿಜ್ಞಾನಿಗಳೊಂದಿಗೆ ಅವರು ಪಂಥವನ್ನು ಕಟ್ಟಿದ್ದು ಕಪ್ಪು ಕುಳಿಗಳು ಅಂದರೇನು ಎಂಬುದನ್ನು ವಿಶ್ವಕ್ಕೆ ತೋರಿಸುವ ಹಟ ತೊಟ್ಟರು. ನಕ್ಷತ್ರಗಳು ದೈತ್ಯಾಕಾರವನ್ನು ಹೊಂದಿದ್ದು ಅವುಗಳ ಗುರುತ್ವಾಕರ್ಷಣ ಶಕ್ತಿ ಹೆಚ್ಚು ಶಕ್ತಿಯುವಾಗಿರುತ್ತದೆ. ನಕ್ಷತ್ರಗಳು ತಮ್ಮ ನ್ಯೂಕ್ಲಿಯರ್ ಇಂಧವನ್ನು ಉರಿಸಲು ಆರಂಭಿಸುತ್ತಿದ್ದಂತೆ ಗುರುತ್ವವನ್ನು ಪ್ರತಿರೋಧಿಸುತ್ತಾ ಈ ಶಕ್ತಿಯನ್ನು ಹೊರಕ್ಕೆ ಹಾಕುತ್ತವೆ . ದೊಡ್ಡ ನಕ್ಷತ್ರ ಸತ್ತಾಗ ಅಥವಾ ಉರಿದು ಹೋದಾಗ ಗುರುತ್ವವು ಪ್ರಬಲ ಶಕ್ತಿಯಾಗಿ ಮಾರ್ಪಡುತ್ತದೆ ಮತ್ತು ದೊಡ್ಡ ನಕ್ಷತ್ರವು ಸ್ವಯಂ ಕುಸಿಯಲು ಕಾರಣವಾಗುತ್ತದೆ. ಇದುವೇ ವಿಜ್ಞಾನಿಗಳು ಕರೆಯವ ಬ್ಲ್ಯಾಕ್ ಹೋಲ್ ಆಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

#7

ಭೌತಶಾಸ್ತ್ರದಲ್ಲಿ ಅವರ ಸಾಧನೆಯು ಅವರನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಯಿತು. 1974 ರಲ್ಲಿ ರಾಯಲ್ ಸೊಸೈಟಿ ಗೌರವ ಮತ್ತು ವಿಜ್ಞಾನದಲ್ಲಿ ಚಿನ್ನದ ಪದಕ, ಅಲ್ಬರ್ಟ್ ಐನ್‌ಸ್ಟೈನ್ ಪ್ರಶಸ್ತಿಗಳು ಅವರಿಗೆ ಸಂದಿವೆ.

ಪುಸ್ತಕ ಬರಹಗಾರ

#8

ಮಕ್ಕಳ ಪುಸ್ತಕಗಳನ್ನು ಬರೆಯುವ ಪ್ರಚಂಡ ಬುದ್ಧಿಮತ್ತೆಯನ್ನು ಸ್ಟೀಫನ್ ಹೊಂದಿದ್ದಾರೆ. 2007 ರಲ್ಲಿ ಸ್ಟೀಫನ್ ಮತ್ತು ಅವರ ಮಗಳು ಲೂಸಿ ಹಾಕಿಂಗ್, ಜಾರ್ಸಸ್ ಸೀಕ್ರಟ್ ಕೀ ಟು ದ ಯುನಿವರ್ಸ್ ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದು ಜಾರ್ಜ್ ಎಂಬ ಹುಡುಗನ ಕುರಿತಾದ ವಿಜ್ಞಾನ ಕಥಾನಕವಾಗಿದ್ದು ಹೆತ್ತವರ ವಿಜ್ಞಾನದ ಬಗೆಗಿನ ದ್ವೇಷದ ವಿರುದ್ಧ ಸಿಡಿದೇಳುವ ಹುಡುಗನ ಕಥೆಯಾಗಿದೆ.

ಏಲಿಯನ್ ಪ್ರಸ್ತುತತೆ

#9

ಕಾಸ್ಮಲಜಿಯಲ್ಲಿ ಅವರ ಜ್ಞಾನವನ್ನು ಕಂಡು ಜನರು ಸ್ಟೀಫನ್‌ರ ಏಲಿಯನ್ ಹಾಜರಾತಿ ಕುರಿತು ಯಾವುದೇ ಅಪಂಬಿಕೆಯನ್ನು ಹೊರಹಾಕಲಿಲ್ಲ. ನಾಸಾದ 50 ನೇ ವಾರ್ಷಿಕ ಆಚರಣೆ ಸಂದರ್ಭದಲ್ಲಿ ಏಲಿಯನ್ ಕುರಿತು ಅವರ ಆಲೋಚನೆಗಳು ಮತ್ತು ನಂಬಿಕೆಗಳನ್ನು ಪ್ರಸ್ತುತಪಡಿಸಿದರು.

ಮಾನವ ಜನಾಂಗ ರಕ್ಷಣೆಗೆ ಸೊನ್ನೆ ಗುರುತ್ವ ಫ್ಲೈಟ್

#10

2007 ರಲ್ಲಿ 65 ರ ಹರೆಯದವರಾದ ಸ್ಟೀಫನ್ ಸೊನ್ನೆ ಗುರುತ್ವದ ಅಂಶಗಳ ಬಗೆಗೆ ಕಂಡುಕೊಂಡರು. ಅಂತೆಯೇ 25 ಸೆಕೆಂಡ್‌ಗಳಷ್ಟು ದೀರ್ಘ ಸಮಯದ ಹಗರು ವಿಮಾನದ ನಿರ್ಮಾಣವನ್ನು ಈ ಯೋಜನೆ ಒಳಗೊಂಡಿತ್ತು. ವಿಮಾನಯಾನದಲ್ಲಿ ಪ್ರಯಾಣಿಕರು ಹಗುರಯಾನವನ್ನು ಮಾಡಬಹುದಾಗಿತ್ತು.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಬರೇ ಒಂದೇ ಟ್ರಿಕ್‌ನಿಂದ ಫೋನ್‌ನ ವೇಗ ಹೆಚ್ಚಿಸಿ

ನಿಮ್ಮ ಫೋನ್ ಸರಿಯಾಗಿ ಚಾರ್ಜ್ ಆಗುತ್ತಿಲ್ಲವೇ? ಇಲ್ಲಿದೆ ಪರಿಹಾರ

ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ

ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಫೇಸ್‌ಬುಕ್

ಇನ್ನಷ್ಟು ಸುದ್ದಿಗಾಗಿ ನಮ್ಮ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ

Most Read Articles
Best Mobiles in India

English summary
Even if you are familiar with his academic work, however, there are many interesting facts you might not know about Hawking, stretching from his time at school and gradual development of disability to his opinions on the future of the human race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more