Subscribe to Gizbot

ಮೆದುಳಿಗೆ ಕೆಲಸ ಕೊಡುವ ಟಾಪ್ 10 ಸ್ಮಾರ್ಟ್‌ಫೋನ್ ಗೇಮ್ಸ್

By: Shwetha PS

ಸ್ಮಾರ್ಟ್‌ಫೋನ್‌ಗಳ ಜಗತ್ತಿನಲ್ಲಿ ಇಂದು ದಿನದಿಂದ ದಿನಕ್ಕೆ ಹೆಚ್ಚಿನ ಬದಲಾವಣೆಗಳು ನಡೆಯುತ್ತಲೇ ಇದೆ. ಹೊಸ ಹೊಸ ಮಾಡೆಲ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆಯೇ ಅದರಲ್ಲಿರುವ ವೈಶಿಷ್ಟ್ಯಗಳು, ಬೆಲೆ, ಸ್ಪರ್ಧೆಗಳು ಬದಲಾಗುತ್ತಲೇ ಇರುತ್ತದೆ. ಇಂದಿನ ಲೇಖನದಲ್ಲಿ ನಾವು ಚರ್ಚಿಸುವ ವಿಷಯ ಗೇಮಿಂಗ್ ಕುರಿತಾಗಿದೆ.

ಮೆದುಳಿಗೆ ಕೆಲಸ ಕೊಡುವ ಟಾಪ್ 10 ಸ್ಮಾರ್ಟ್‌ಫೋನ್ ಗೇಮ್ಸ್

ನೀವು ಉಚಿತವಾಗಿ ಅದೇ ರೀತಿ ಹಣ ಕೊಟ್ಟು ಸಬ್‌ಸ್ಕ್ರಪ್ಶನ್ ಮೂಲಕ ಪಡೆಯಬಹುದಾದ ಗೇಮ್‌ಗಳೂ ಈಗ ಪ್ಲೇಸ್ಟೋರ್ ಐಓಎಸ್ ಮೊದಲಾ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.

ಇಂದಿನ ಲೇಖನದಲ್ಲಿ ನಿಮ್ಮ ಮೊಬೈಲ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾದ ಗೇಮ್‌ಗಳ ಬಗ್ಗೆ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ರ್ಯಾಶ್‌ಲ್ಯಾಂಡ್ಸ್

ಕ್ರ್ಯಾಶ್‌ಲ್ಯಾಂಡ್ಸ್

ಈ ಗೇಮ್ ಮೂಲಕ ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳಬಹುದು. ಪ್ರಖ್ಯಾತ ಆಂಡ್ರಾಯ್ಡ್ ಗೇಮ್‌ಗಳಲ್ಲಿ ಇದೂ ಒಂದು. ಏಲಿಯನ್ ಪ್ಲಾನೆಟ್‌ನಲ್ಲಿ ಟ್ರಕ್ಕರ್ ಕ್ರ್ಯಾಶ್ ಆಗಿ ಲ್ಯಾಂಡ್ ಆಗುವುದರಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ಏನು ನಡೆಯುತ್ತದೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮ್ಮಷ್ಟಕ್ಕೇ ಬೇಸ್ ರಚಿಸಿ ಮತ್ತು ಭೂಮಿಯನ್ನು ಉಳಿಸಲು ಬೇರೆ ಬೇರೆ ಐಟಂಗಳನ್ನು ಸಂಗ್ರಹಿಸಿ.

ಜಿಯೋಮೆಟ್ರಿ ವಾರ್ಸ್

ಜಿಯೋಮೆಟ್ರಿ ವಾರ್ಸ್

ಇದು 100 ಲೆವೆಲ್‌ಗಳನ್ನು ಹೊಂದಿದ್ದು 12 ಯುದ್ಧ ರೀತಿಗಳಿವೆ ಇದನ್ನು 15 3ಡಿ ಗ್ರಿಡ್‌ಗಳೊಂದಿಗೆ ಆಡಲಾಗುತ್ತದೆ. ನೀವು ಸ್ನೇಹಿತರೊಂದಿಗೆ ಈ ಆಟದಲ್ಲಿ ಸ್ಪರ್ಧೆಯನ್ನು ನಡೆಸಬಹುದಾಗಿದೆ. ಇದು ಉಚಿತ ಗೇಮ್ ಅಲ್ಲ ನೀವು ಇದಕ್ಕೆ ರೂ 690 ಅನ್ನು ಪಾವತಿ ಮಾಡಬೇಕು.

ಹಾರ್ಟ್‌ಸ್ಟೋನ್

ಹಾರ್ಟ್‌ಸ್ಟೋನ್

ಮೋಸದ ರೀತಿಯಲ್ಲಿ ಈ ಆಟವನ್ನು ಆಡಬಹುದಾಗಿದೆ. ಈ ಆಟಕ್ಕಾಗಿ ನಿಮ್ಮ ಡಿವೈಸ್‌ನಲ್ಲಿ 2ಜಿಬಿ ಇನ್‌ಸ್ಟಾಲ್ ಮಾಡಿರುವ ಸ್ಥಳಾವಕಾಶ ಬೇಕು.

ಪೋಕಿಮೆನ್ ಗೊ

ಪೋಕಿಮೆನ್ ಗೊ

ಈ ಆಟವನ್ನು 750 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ ಮತ್ತು "ಬೆಸ್ಟ್ ಮೊಬೈಲ್ ಗೇಮ್" ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಈ ಗೇಮ್ ಡೆವಲಪ್ ಮಾಡಿದವರಿಗೆ ಪುರಸ್ಕಾರ ಕೂಡ ದೊರೆತಿದೆ. ಪೋಕಿಮೆನ್ ಅನ್ನು ನೀವು ಹುಡುಕಬೇಕು ನಿಮ್ಮ ಸಮೀಪದಲ್ಲಿ ಪೋಕಿಮೆನ್ ಇದ್ದಾಗ ಡಿವೈಸ್ ವೈಬ್ರೇಟ್ ಆಗುತ್ತದೆ. ಹೋಗಿ ಅದನ್ನು ಸಂಗ್ರಹಿಸಿ.

ರಾಕ್‌ಸ್ಟಾರ್ ಗೇಮ್ಸ್

ರಾಕ್‌ಸ್ಟಾರ್ ಗೇಮ್ಸ್

ಇದರಲ್ಲಿ ಬೇರೆ ಬೇರೆ ಬಗೆಗಳಿದ್ದು ನೀವು ಇದನ್ನು ಆಡಬಹುದಾಗಿದೆ. ಗ್ರ್ಯಾಂಡ್ ಥೆಪ್ಟ್ ಆಟೊ 3, ವೈಸ್ ಸಿಟಿ, ಸಾನ್ ಆಂಡ್ರಿಯಾಸ್ ಮೊದಲಾದ ಗ್ಲಾಸ್ ಗೇಮ್‌ಗಳನ್ನು ಹೊಂದಿರಬಹುದು. ಆದರೆ ಅದೆಲ್ಲವುಕ್ಕಿಂತ ಈ ಗೇಮ್ ಅದ್ಭುತವಾಗಿದೆ.

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!
 ರಿಪಿಟೈಡ್ ಜಿಪಿ: ರೆನೆಗ್ರೇಡ್

ರಿಪಿಟೈಡ್ ಜಿಪಿ: ರೆನೆಗ್ರೇಡ್

ವಿಪರೀತ ಜಲಪಾತದ ನಡುವೆ ಹೈಡ್ರೋ ಜೆಟ್ ರೇಸಿಂಗ್ ಅನ್ನು ಮಾಡಿ, ಬೇರೆ ವಾಹನಗಳನ್ನು ನಿಮಗೆ ಅನ್‌ಲೋಕ್ ಕೂಡ ಮಾಡಬಹುದಾಗಿದೆ. 4 ಆಟಗಾರರೊಂದಿಗೆ ಕೂಡ ಆಟವನ್ನು ಆಡಬಹುದಾಗಿದೆ.

ದಿಸ್ ವಾರ್ ಆಫ್ ಮೈನ್

ದಿಸ್ ವಾರ್ ಆಫ್ ಮೈನ್

ಈ ಆಟದಲ್ಲಿ ನಾಗರಿಕರು ನಗರದಲ್ಲಿ ಬದುಕುಳಿಯುವುದಕ್ಕೆ ಪ್ರಯತ್ನಿಸುತ್ತಿರುವ ಆಟವಾಗಿದೆ. ಎಲ್ಲರನ್ನೂ ಸಂರಕ್ಷಿಸುವ ಆಟ ಬಲು ಚತುರತೆಯಿಂದ ಕೂಡಿದೆ.

ಟೈಟನ್ ಕ್ವೆಸ್ಟ್

ಟೈಟನ್ ಕ್ವೆಸ್ಟ್

ಇದೊಂದು ಆಕ್ಶನ್ ಗೇಮ್ ಆಗಿದ್ದು ಜೈಲಿನಿಂದ ತಪ್ಪಿಸಿಕೊಳ್ಳುವ ಟೈಟನ್‌ಗಳು ಭೂಮಿಯನ್ನು ನಾಶ ಮಾಡಲು ಹೊರಟಿರುತ್ತಾರೆ. ನೀವು ಈ ಆಟದಲ್ಲಿ ಚತುರತೆಯನ್ನು ಪಡೆದಿರಬೇಕು.

ಅನ್‌ಕಿಲ್‌ಡ್: ಮಲ್ಟಿಪ್ಲೇಯರ್ ಝೋಂಬಿ ಸರ್ವೈವಲ್ ಶೂಟರ್

ಅನ್‌ಕಿಲ್‌ಡ್: ಮಲ್ಟಿಪ್ಲೇಯರ್ ಝೋಂಬಿ ಸರ್ವೈವಲ್ ಶೂಟರ್

ಹೆಚ್ಚು ರೋಚಕಮಯವಾಗಿರುವ ಈ ಆಟದಲ್ಲಿ ಅನನ್ಯ ವೈಶಿಷ್ಟ್ಯತೆಗಳನ್ನು ಬಳಸಿಕೊಂಡು ಆಡಬಹುದಾಗಿದೆ. ನೀವು ಇದನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ವೇಯಿಂಗ್ಲೋರಿ

ವೇಯಿಂಗ್ಲೋರಿ

ಬೋಟ್ಸ್ ಮತ್ತು ನಿಜವಾದ ಆಟಗಾರರನ್ನು ನಿಮಗೆ ನೀಡಲಾಗುತ್ತದೆ. ಮತ್ತು ನೀವು ನಾಯಕನಂತೆ ಭಾಗವಹಿಸಿ ನಿಮ್ಮ ತಂಡವನ್ನು ಅರಣ್ಯದಲ್ಲಿ ಮುನ್ನಡೆಸಬಹುದಾಗಿದೆ. ನೀವು ಈ ಆಟವನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Gaming in smartphones has improved a long way with lots intensive and immersive graphic experience, story, game play and much more. Let's have a look at the top 10 games that you can install right now on your mobile.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot