ಚಿನ್ನದ ಖನಿಯಂತಿರುವ 'ಬಿಲ್‌ಗೇಟ್ಸ್' ಅವರ ಬಂಗಲೆಗೆ ಮನಸೋಲದವರು ಯಾರು?

|

ಒಂದು ದಶಕದ ಕಾಲ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಬಿಲ್‌ಗೇಟ್ಸ್ ಅವರು ಯಾರಿಗೆ ಗೊತ್ತಿಲ್ಲಾ ಹೇಳಿ? ಓರ್ವ ಕಂಪ್ಯೂಟರ್ ಪ್ರೋಗ್ರಾಮರ್‌ ಆಗಿ 'ಕಂಪ್ಯೂಟರ್‌ ಪ್ರಪಂಚ'ವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಬಿಲ್‌ಗೇಟ್ಸ್ ಅವರು ಈಗ ಎಲ್ಲರಿಗೂ ಚಿರಪರಿಚಿತರು. ಆದರೆ, ಶ್ರೀಮಂತನಾಗಿ ಮಾತ್ರವಲ್ಲ, ಲೋಕೋಪಕಾರಿ ಮತ್ತು ಸರಳ ಜೀವಿಯಾಗಿ.!

ಹೌದು, ಬಿಲ್‌ಗೇಟ್ಸ್ ಅವರು ಗಳಿಸಿದ ತನ್ನ ಆಸ್ತಿಯ ಬಹುಪಾಲನ್ನು ದಾನ ಮಾಡಿದಂತಹ ವ್ಯಕ್ತಿ. ಸಾವಿರಾರು ಕೋಟಿ ರೂಪಾಯಿಗಳನ್ನು ಲೋಕಕಲ್ಯಾಣಕ್ಕಾಗಿ ವಿನಿಯೋಗಿಸಿದ ಇವರು ತುಂಬಾ ಸರಳ ಜೀವಿ. ಹಾಗಂತ, ಬಿಲ್‌ಗೇಟ್ಸ್ ಅವರು ವಾಸಿಸುತ್ತಿರುವ ಮನೆ ಮಾತ್ರ ರಟ್ಟಿನ ಪೆಟ್ಟಿಗೆ ರೀತಿಯಲ್ಲಿ ಕಾಣುತ್ತದೆ ಎಂದು ತಿಳಿಯಬೇಡಿ. ಅದೂ ಕೂಡ ಒಂದು ಅದ್ಬುತವೇ.!

ಚಿನ್ನದ ಖನಿಯಂತಿರುವ 'ಬಿಲ್‌ಗೇಟ್ಸ್' ಅವರ ಬಂಗಲೆಗೆ ಮನಸೋಲದವರು ಯಾರು?

ಬಹುಶಃ ಯಾರಿಗೂ ಊಹಿಸಲಾಗದಂತಹ ಅತ್ಯುತ್ತಮ ವಾತಾವರಣದಲ್ಲಿ ಬಿಲ್‌ಗೇಟ್ಸ್ ಅವರ ಮನೆಯರಬಹುದು. ಬಿಲ್‌ಗೇಟ್ಸ್‌ ಅವರ ಮನೆ ಇರುವ ಸ್ಥಳ, ಮನೆಯ ವಿನ್ಯಾಸ, ಮನೆಯೊಳಗಿನ ಸೌಂದರ್ಯ ಎಂತಹವರನ್ನು ಬೆರಗುಗೊಳಿಸಬಹುದು.! ನಿಮಗೂ ಈ ಬಗ್ಗೆ ಕುತೋಹಲವೇ?.ಹಾಗಾದ್ರೆ, ಮುಂದೆ ಬಿಲ್‌ಗೇಟ್ಸ್ ಅವರ ಮನೆಯ ಚಿತ್ರಣವನ್ನು ಪಡೆಯಿರಿ.

1 ಬಿಲ್‌ ಗೇಟ್ಸ್‌'ರವರ ಮನೆ ಇರುವ ಸ್ಥಳ

1 ಬಿಲ್‌ ಗೇಟ್ಸ್‌'ರವರ ಮನೆ ಇರುವ ಸ್ಥಳ

ಅಂದಹಾಗೆ ನೀವು ಮೊದಲಿಗೆ ನೋಡುತ್ತಿರುವ ಈ ಪ್ರಸಿದ್ಧ ಫೋಟೋ ಬಿಲ್‌ಗೇಟ್ಸ್‌'ರವರ ಮನೆಯೊಳಗಿನ ಮನಿಬ್ಯಾಗ್ಸ್ ಪ್ರದೇಶ. ಬಿಲ್‌ ಗೇಟ್ಸ್‌'ರವರ ಮನೆ ವಾಷಿಂಗ್ಟನ್‌'ನ ಮೆಡಿನಾ ಬೆಟ್ಟದ ಮೇಲೆ ನಿಂತು ನೋಡಿದರೆ ಕಾಣುವ ಸರೋವರದ ಪಕ್ಕದಲ್ಲಿ ವಿಶಾಲ ಭೂಮಿಯಲ್ಲಿ ಇದೆ.

2 ಮನಿಬ್ಯಾಗ್ಸ್ ಕ್ರಿಬ್

2 ಮನಿಬ್ಯಾಗ್ಸ್ ಕ್ರಿಬ್

ಅಂದಹಾಗೆ ಯಾರಾದರೂ ಅಪ್ಪಣೆ ಇಲ್ಲದೇ ಬಿಲ್‌ಗೇಟ್ಸ್‌'ರವರ ಮನೆಯೊಳಗೆ ಹೋಗಲು ಪ್ರಯತ್ನಿಸಿದರೆ ರೋಬೋಟ್‌ಗಳಿಂದ ದಾಳಿಗೆ ಒಳಗಾಗುತ್ತಾರೆ. ಕಾರಣ ಬಿಲ್‌ ಗೇಟ್ಸ್‌ರವರ ಮನಿಬ್ಯಾಗ್ಸ್ ಸ್ಥಳದಲ್ಲಿ ಲೇಸರ್‌ ಗನ್ ಹೊಂದಿರುವ ರೋಬೋಟ್‌ಗಳು ಇವೆ.

3 ಬಿಲ್‌ ಗೇಟ್ಸ್‌ ಮನೆ ವಿನ್ಯಾಸಗಾರರು

3 ಬಿಲ್‌ ಗೇಟ್ಸ್‌ ಮನೆ ವಿನ್ಯಾಸಗಾರರು

ಜೇಮ್ಸ್‌ ಕಟ್ಲರ್ ಎಂಬ ವ್ಯಕ್ತಿಯೊಬ್ಬರು ಬಿಲ್‌ ಗೇಟ್ಸ್‌ರವರ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ಉತ್ತರವೆಸ್ಟ್‌'ನ 'ಪೆಸಿಫಿಕ್‌ ಲಾಡ್ಜ್‌" ಶೈಲಿಯಲ್ಲಿ ವಿನ್ಯಾಸಗೊಂಡಿದೆ.

4 ಬೃಹತ್‌ ಮರಗಳ ಪ್ಯಾನೆಲ್‌

4 ಬೃಹತ್‌ ಮರಗಳ ಪ್ಯಾನೆಲ್‌

ವಿಶೇಷ ಅಂದ್ರೆ ಬಿಲ್‌ ಗೇಟ್ಸ್‌'ರವರ ಮನೆಯನ್ನು ಕೇವಲ ಬೃಹತ್‌ ಮರಗಳ ಪ್ಯಾನೆಲ್‌ನಿಂದ ನಿರ್ಮಿಸಿದ್ದು, 'ಕ್ಯಾಬಿನ್‌ ಲಾಡ್ಜ್‌" ಸಹ ಇದೆ. ವಿನ್ಯಾಸಕ್ಕೆ ಕಂಪ್ಯೂಟರ್‌ ಬಳಸಿಕೊಳ್ಳಲಾಗಿದೆ.

5 ಬಿಲ್‌ ಗೇಟ್ಸ್‌ ಖರೀದಿಸಿ ಭೂಮಿ ಬೆಲೆ

5 ಬಿಲ್‌ ಗೇಟ್ಸ್‌ ಖರೀದಿಸಿ ಭೂಮಿ ಬೆಲೆ

ಬಿಲ್‌ ಗೇಟ್ಸ್‌'ರವರು ಪ್ರಸ್ತುತದಲ್ಲಿರುವ ಮನೆಯ ವಿಶಾಲ ಭೂಮಿಯನ್ನು 1988 ರ ಹಿಂದೆ $2 ಮಿಲಿಯನ್‌ ಬೆಲೆಗೆ ಖರೀದಿಸಿದ್ದರು. ಆದರೆ ಇದರ ಬೆಲೆ 2005 ಕ್ಕೆ $200 ಮಿಲಿಯನ್‌ ಆಗಿತ್ತು. ಇದರ ವಾರ್ಷಿಕ ಆಸ್ತಿ ತೆರಿಗೆ $991,000.

6 ಬಿಲ್‌ ಗೇಟ್ಸ್‌ ಮನೆಯ ವಿಸ್ತೀರ್ಣ

6 ಬಿಲ್‌ ಗೇಟ್ಸ್‌ ಮನೆಯ ವಿಸ್ತೀರ್ಣ

ಬಿಲ್‌ ಗೇಟ್ಸ್‌'ರವರ ಮನೆಯ ವಿಸ್ತೀರ್ಣ 50,000 ಚದರ ಅಡಿಯಲ್ಲಿ 5.15 ಎಕರೆ ಜಮೀನಿನಿಂದ ಆವೃತ್ತವಾಗಿದೆ. ಅಲ್ಲದೇ ಗ್ಯಾರೇಜ್‌ ಸ್ಪೇಸ್‌ 16,000 ಚದರ ಅಡಿ ಸ್ಥಳವನ್ನು ಆವರಿಸಿದೆ.

7 ಈಜು ಕೊಳ

7 ಈಜು ಕೊಳ

ಬಿಲ್‌ ಗೇಟ್ಸ್'ರವರ ಮನೆಯ ಈಜುಕೊಳ 17 × 60 ವಿಸ್ತೀರ್ಣವಿದ್ದು, ಅಂಡರ್‌ವಾಟರ್‌ ಸಂಗೀತತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಲಾಗಿದೆ. ವಿಶೇಷ ನೆಲದಡಿ ವಿನ್ಯಾಸ ನೀಡಲಾಗಿದೆ.

8  ಬೆಡ್ ರೂಂಗಳು!

8 ಬೆಡ್ ರೂಂಗಳು!

ಈ ಅಗಾಧವಾದ ಐಶಾರಾಮಿ ಮನೆಯಲ್ಲಿ ಕೇವಲ 7 ಬೆಡ್ ರೂಂಗಳಿವೆ. ಬಿಲ್‌ಗೇಟ್ಸ್ ಹೆಚ್ಚು ಹುಚ್ಚುತನವನ್ನೂ ಇಷ್ಟಪಡುವುದಿಲ್ಲ. ಹಾಗಾಗಿ, ಸಮಂಜಸವಾದ ವಿಷಯಗಳೊಂದಿಗೆ ಬೆಡ್ ರೂಂ ಯೋಗ್ಯವಾವೆ. ಬಿಲ್‌ಗೇಟ್ಸ್ ಅವರು ಮಲಗುವ ಕೋಣೆಗೆ ಬಂದಾಗ ಅದು ವೈಯಕ್ತಿಕ ವಿಷಯವಾಗಿದೆ.

9 ವರ್ಚುವಲ್ ವೀಕ್ಷಣೆ

9 ವರ್ಚುವಲ್ ವೀಕ್ಷಣೆ

ಬಿಲ್‌ ಗೇಟ್ಸ್‌ ಮನೆಯ ವರ್ಚುವಲ್ ವೀಕ್ಷಣೆ ಡಿಜಿಟಲ್‌ ವಿನ್ಯಾಸದಲ್ಲಿ ನೋಡುವುದಾದರೆ ಹೇಗಿದೆ ನೋಡಿ.

10ಟ್ರಂಪೊಲೈನ್ ಹಾಲ್

10ಟ್ರಂಪೊಲೈನ್ ಹಾಲ್

ಬಿಲ್‌ ಗೇಟ್ಸ್‌'ರವರ ಮನೆಯೊಳಗಿರುವ ವ್ಯಾಯಾಮಕ್ಕಾಗಿ ಬಳಸುವ ಟ್ರಂಪೊಲೈನ್ ಹಾಲ್ ಇದು. 200 ಚದರ ಮೀಟರ್‌ ವಿಸ್ತೀರ್ಣವಿದೆ.

11 ಭೋಜನ ಭವನ (dining hall )

11 ಭೋಜನ ಭವನ (dining hall )

ಬಿಲ್‌ ಗೇಟ್ಸ್‌'ರವರ ಮನೆಯೊಳಗಿರುವ ಸುಂದರವಾದ ಭೋಜನ ಹಜಾರವಿದು.

12 ಬೃಹತ್‌ ಮರದಿಂದ ನಿರ್ಮಿಸಿದ ಮನೆಯ ಒಳವಿನ್ಯಾಸ

12 ಬೃಹತ್‌ ಮರದಿಂದ ನಿರ್ಮಿಸಿದ ಮನೆಯ ಒಳವಿನ್ಯಾಸ

ಬಿಲ್‌ ಗೇಟ್ಸ್‌'ರವರ ಮನೆಯ ಒಳಗಿನ ವಿನ್ಯಾಸವನ್ನು ಸಹ ಬೃಹತ್‌ ಮರ ಬಳಸಿ ನಿರ್ಮಿಸಿರುವುದಕ್ಕೆ ಈ ಚಿತ್ರ ಸಾಕ್ಷಿ. ಆದರೆ ಇವರ ಮನೆಗೆ ಬಳಸಲಾಗಿರುವ ಮರ ಪ್ರಪಂಚದಾದ್ಯಂತದ ಅಪರೂಪದ ಮರಗಳು.

Best Mobiles in India

English summary
Have you ever wondered how the richest man on earth lives like? It’s no question that you begin to scale Bill Gates. to know more vist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X