Subscribe to Gizbot

ಫೇಸ್‌ಬುಕ್ ಇನ್ನು ವಿಶ್ವದ ಶ್ರೀಮಂತ ಆಪಲ್ ತೆಕ್ಕೆಗೆ ಇದೆಷ್ಟು ನಿಜ?

Posted By:

ತನ್ನ ಮ್ಯಾಕ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಆಪಲ್ ಕೆಲವೊಂದು ಉಚಿತ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುವ ಸನ್ನಾಹದಲ್ಲಿದೆ. ಮ್ಯಾಕ್ ಕಂಪ್ಯೂಟರ್‌ಗಳಿಗೆ ಹೊಸ ಫೋಟೋಗಳ ಅಪ್ಲಿಕೇಶನ್ ಅನ್ನು ಈ ಅಪ್‌ಡೇಟ್ ತರಲಿದ್ದು ಆನ್‌ಲೈನ್ ಫೋಟೋ ಸ್ಟೋರೇಜ್ ಸೇವೆಯಾದ ಐಕ್ಲೌಡ್ ಫೋಟೋ ಲೈಬ್ರರಿ ಎಂದು ಇದನ್ನು ಕರೆಯಲಾಗಿದೆ.

ಓದಿರಿ: ವಿಶ್ವದ ಅದ್ಭುತ ಆಪಲ್‌ ಶಾಖೆಗಳನ್ನು ನೋಡಬನ್ನಿ

ಇಂದಿನ ಲೇಖನದಲ್ಲಿ ಆಪಲ್ ಕುರಿತಾ ಇನ್ನಷ್ಟು ರೋಚಕ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ. ನೀವು ಅರಿಯದ ಕೆಲವೊಂದು ಆಪಲ್ ಕುರಿತಾದ ರಹಸ್ಯಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಿರಿಮೆ

ಆಪಲ್ ಆದಾಯ

2014 ರ ಮೊದಲ ಮೂರು ತಿಂಗಳಲ್ಲಿ ಆಪಲ್ $43.7 ಬಿಲಿಯನ್ ಅನ್ನು ಉತ್ಪಾದಿಸಿದೆ. ಇದು ಗೂಗಲ್, ಅಮೆಜಾನ್ ಮತ್ತು ಫೇಸ್‌ಬುಕ್ ಅನ್ನು ಒಗ್ಗೂಡಿಸಿ ದೊರೆಯುವ ಹಣಕ್ಕಿಂತಲೂ ಹೆಚ್ಚಾಗಿದೆ.

ಕಡಿಮೆ ಉತ್ಪನ್ನದಲ್ಲೇ ಹೆಚ್ಚಿನ ಲಾಭ

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ಉತ್ಪಾದಿಸುವುದಕ್ಕಿಂತಲೂ ಎರಡು ಪಟ್ಟು ಹೆಚ್ಚು ಸ್ಯಾಮ್‌ಸಂಗ್ ತನ್ನ ಫೋನ್‌ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಆದರೆ ಕಡಿಮೆ ಲಾಭವನ್ನು ಪಡೆಯುತ್ತದೆ. ಆದರೆ ಆಪಲ್ ಕಡಿಮೆ ಉತ್ಪನ್ನದಲ್ಲೇ ಹೆಚ್ಚಿನ ಲಾಭವನ್ನು ಗಿಟ್ಟಿಸಿಕೊಳ್ಳುತ್ತದೆ.

ಐಫೋನ್ ವ್ಯವಹಾರ

ಮೈಕ್ರೋಸಾಫ್ಟ್‌ಗಿಂತಲೂ ಆಪಲ್ ದೊಡ್ಡದು

ಜನವರಿ ಮಾರ್ಚ್ ತಿಂಗಳಲ್ಲಿ ಆಪಲ್‌ನ ಐಫೋನ್ ವ್ಯವಹಾರವು $26 ಬಿಲಿಯನ್ ಆದಾಯವನ್ನು ಉತ್ಪಾದಿಸಿದೆ. ಮೈಕ್ರೋಸಾಫ್ಟ್‌ನ ಸಂಪೂರ್ಣ ವ್ಯವಹಾರದ ಆದಾಯ $20.4 ಬಿಲಿಯನ್ ಆಗಿದೆ. ಮೈಕ್ರೋಸಾಫ್ಟ್‌ಗಿಂತಲೂ ಐಫೋನ್ ವೇಗವಾಗಿ ಬೆಳೆಯುತ್ತಿದೆ ಕೂಡ.

ಆಪಲ್ ಆದಾಯ

ಫೇಸ್‌ಬುಕ್ ಅನ್ನು ಹಿಂದಿಕ್ಕಿದ ಆಪಲ್

ಐಪ್ಯಾಡ್ $7.6 ಬಿಲಿಯನ್ ಉತ್ಪಾದಿಸಿದೆ. ಇದನ್ನು ತ್ರೈಮಾಸಿಕದ ಆದಾಯವೆಂದು ಪರಿಗಣಿಸಲಾಗಿದೆ. ಫೇಸ್‌ಬುಕ್ ಕೊನೆಯ ತ್ರೈಮಾಸಿಕದಲ್ಲಿ $2.5 ಬಿಲಿಯನ್ ಅನ್ನು ಉತ್ಪಾದಿಸಿದೆ. ಕಳೆದ 12 ತಿಂಗಳುಗಳಲ್ಲಿ, ಫೇಸ್‌ಬುಕ್ ಆದಾಯ $8.9 ಬಿಲಿಯನ್ ಆಗಿದೆ.

ಅಮೆಜಾನ್ ಗಳಿಸಿರುವ ಆದಾಯಕ್ಕಿಂತಲೂ ಹೆಚ್ಚಾಗಿದೆ

ಅಮೆಜಾನ್‌ಗಿಂತಲೂ ಹಿರಿದು

ಮೊದಲ ತ್ರೈಮಾಸಿಕದಲ್ಲಿ ಆಪಲ್‌ನ ನಿವ್ವಳ ಆದಾಯ $10.2 ಬಿಲಿಯನ್ ಆಗಿದೆ. ತನ್ನ 20 ವರ್ಷದ ಅಸ್ತಿತ್ವದಲ್ಲಿ ಅಮೆಜಾನ್ ಗಳಿಸಿರುವ ಆದಾಯಕ್ಕಿಂತಲೂ ಇದು ಹೆಚ್ಚಾಗಿದೆ.

ಆಪಲ್ ವರಮಾನ

ಫೇಸ್‌ಬುಕ್‌ ಖರೀದಿ

ಆಪಲ್ $ 150.6 ಬಿಲಿಯನ್ ಹಣವನ್ನು ತನ್ನ ಬಳಿ ಹೊಂದಿದೆ. ಈ ದುಡ್ಡಿನಲ್ಲಿ ಫೇಸ್‌ಬುಕ್‌ ಅನ್ನು ಖರೀದಿಸುವ ಸಾಮರ್ಥ್ಯ ಕೂಡ ಅದಕ್ಕಿದೆ. ನೆಟ್‌ಫ್ಲಿಕ್ಸ್, ತೆಲ್ಸಾ, ಟ್ವಿಟ್ಟರ್, ಡ್ರಾಪ್‌ಬಾಕ್ಸ್, ಪಂಡೋರಾವನ್ನು ಕೂಡ ಖರೀದಿಸುವ ತಾಕತ್ತಿದೆ.

ಅಧಿಕ

ಐಟ್ಯೂನ್ಸ್ ಖಾತೆ

ಆಪಲ್ ಇದೀಗ 800 ಮಿಲಿಯನ್ ಐಟ್ಯೂನ್ಸ್ ಖಾತೆಗಳನ್ನು ತನ್ನ ಬಳಿ ಹೊಂದಿದೆ. 800 ಮಿಲಿಯನ್ ಕ್ರೆಡಿಟ್ ಕಾರ್ಡ್‌ಗಳನ್ನು ಫೈಲ್‌ನಲ್ಲಿ ಹೊಂದಿದೆ. ಜಗತ್ತಿನ ಯಾವುದೇ ಕಂಪೆನಿಗಿಂತಲೂ ಇದು ಅಧಿಕವಾಗಿದೆ.

ಹೊಸ ಬಳಕೆದಾರರು

ಹೊಸ ಬಳಕೆದಾರರು

ಕಳೆದ ಆರು ತಿಂಗಳಲ್ಲಿ ಆಪಲ್ 60 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ ಎಂದು ಹೇಳಿದೆ. ಉಚಿತವಾಗಿರುವ ಟ್ವಿಟ್ಟರ್ ಆರು ತಿಂಗಳಲ್ಲಿ ಬರೇ 23 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ.

14 ನೇ ಅಧಿಕ

ಆಪಲ್‌ನ ನಿವ್ವಳ ಆದಾಯ

ಆಪಲ್‌ನ ನಿವ್ವಳ ಆದಾಯ ಇತಿಹಾಸದಲ್ಲಿಯೇ 14 ನೇ ಅಧಿಕ. ಎಕ್ಸೋನಸ್‌ನ ನಾಲ್ಕನೇ ತ್ರೈಮಾಸಿಕ ಆದಾಯಕ್ಕಿಂತಲೂ ಇದು ಅಧಿಕ.

ಐಟ್ಯೂನ್ಸ್ ವಿಭಾಗ

ಆಪಲ್‌ ಲಾಭ

ಮೊದಲನೇ ತ್ರೈಮಾಸಿಕ ಮಾರಾಟದಲ್ಲಿ ಆಪಲ್‌ನ ಐಟ್ಯೂನ್ಸ್/ಸಾಫ್ಟ್‌ವೇರ್ ವಿಭಾಗ $4.57 ಬಿಲಿಯನ್ ಆದಾಯವನ್ನು ಗಳಿಸಿದೆ. ಕಳೆದ 12 ತಿಂಗಳುಗಳಿಂದ ನೆಟ್‌ಫ್ಲಿಕ್ಸ್ ಮಾರಾಟದಲ್ಲಿ $4.37 ಬಿಲಿಯನ್ ಅನ್ನು ಗಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple is undoubtedly among the world's largest companies. Its cash coffers hold over $150 billion. We take a look at Apple’s latest quarterly results and give you 10 facts that show how big Apple really is.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot