Subscribe to Gizbot

ನಿಮ್ಮನ್ನು ವಿಸ್ಮಿತಗೊಳಿಸುವ ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

Written By:

ಸಾಮಾಜಿಕ ಜಾಲತಾಣವಾಗಿ ಜಗದ್ವಿಖ್ಯಾತಿಯನ್ನು ಗಳಸಿಕೊಳ್ಳುತ್ತಿರುವ ಫೇಸ್‌ಬುಕ್ ಎಂಬ ತಾಣ ಚಿಣ್ಣರಿಂದ ಹಿಡಿದು ದೊಡ್ಡವರವರೆಗೂ ಅಚ್ಚಮೆಚ್ಚಿನದ್ದಾಗಿದೆ. ಫೋಟೋಗಳನ್ನು ಶೇರ್ ಮಾಡುವುದು, ವಾಲ್‌ನಲ್ಲಿ ಪೋಸ್ಟ್ ಅಂಟಿಸುವುದು, ಚಾಟ್ ಮಾಡುವುದು ಹೀಗೆ ಹತ್ತು ಹಲವು ಚಟುವಟಿಕೆಗಳ ಆಗರವಾಗಿರುವ ಫೇಸ್‌ಬುಕ್ ತಾಣ ಬಳಕೆದಾರ ಸ್ನೇಹಿ ಎಂದೆನಿಸಿದೆ.

ಇದನ್ನೂ ಓದಿ: ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನ ನೀವು ತಿಳಿಯದ ಟಾಪ್ 10 ಅಂಶಗಳನ್ನು ತಿಳಿಸಲಿದ್ದೇವೆ. ಇದು ನಿಜಕ್ಕೂ ಹೆಚ್ಚು ಆಕರ್ಷಣೀಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಕ್ ಜುಕರ್‌ಬರ್ಗ್ ವಾಲ್ ನೋಡಬೇಕೇ?

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಫೇಸ್‌ಬುಕ್ ಯುಆರ್‌ಎಲ್‌ ಕೊನೆಯಲ್ಲಿ ಸಂಖ್ಯೆ 4 ಅನ್ನು ಸೇರಿಸುವುದು ನಿಮ್ಮನ್ನು ಜುಕರ್‌ಬರ್ಗ್ ವಾಲ್‌ಗೆ ಕೊಂಡೊಯ್ಯುತ್ತದೆ.

ಫೇಸ್‌ಬುಕ್‌ನಲ್ಲಿ ಭಾಷೆ ಬದಲಾವಣೆ

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ನೀವು ಖಾತೆ/ಲಾಂಗ್ವೇಜಸ್/ಇಂಗ್ಲೀಷ್ ಇಲ್ಲಿ ನಿಮ್ಮ ಮೆಚ್ಚಿನ ಭಾಷೆಯನ್ನು ಆಯ್ಕೆಮಾಡಬಹುದಾಗಿದೆ.

 ಫೇಸ್‌ಬುಕ್ ಅಭಿಮಾನ

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಚೀನಾದಲ್ಲಿ ಫೇಸ್‌ಬುಕ್ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದು ವಿಶ್ವದಲ್ಲೇ ಅತಿ ಹೆಚ್ಚು ಫೇಸ್‌ಬುಕ್ ಬಳಸುವವರು ಚೀನೀಯರಾಗಿದ್ದಾರೆ.

ಫೇಸ್‌ಬುಕ್ ಪೋಸ್ಟ್

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಒಂದು ಟ್ರಿಲಿಯನ್‌ಗಿಂತಲೂ ಅಧಿಕ ಫೇಸ್‌ಬುಕ್ ಪೋಸ್ಟ್‌ಗಳಿವೆ ಎಂಬುದು ನಿಮಗೆ ಗೊತ್ತೇ?

ಫೇಸ್‌ಬುಕ್ ಹಿರಿಮೆ

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಫೇಸ್‌ಬುಕ್ ವಾಟ್ಸಾಪ್, ಟ್ವಿಟ್ಟರ್, ಮತ್ತು ಇನ್‌ಸ್ಟಾಗ್ರಾಮ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಸಾಮಾಜಿಕ ತಾಣ ದೈತ್ಯ $20 ಬಿಲಿಯನ್ ಅನ್ನು ಕಳೆದ ಎರಡು ವರ್ಷಗಳಲ್ಲಿ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಮೇಲೆ ಖರ್ಚು ಮಾಡಿದೆ.

ಮೊಬೈಲ್‌ನಲ್ಲಿ ಫೇಸ್‌ಬುಕ್

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ತಿಂಗಳ ಲೆಕ್ಕದಲ್ಲಿ 1.1 ಬಿಲಿಯನ್‌ಗಿಂತಲೂ ಹೆಚ್ಚಿನ ಜನರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ಅನ್ನು ಬಳಸುತ್ತಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಮಾರ್ಕ್ ಜುಕರ್‌ಬರ್ಗ್ ತಮ್ಮ ಮೊಬೈಲ್‌ನಲ್ಲಿ ಏನು ಹೊಂದಿದ್ದಾರೆ

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಮಾರ್ಕ್ ತಮ್ಮ ಮೊಬೈಲ್‌ನಲ್ಲಿ ಹತ್ತು ಅಪ್ಲಿಕೇಶನ್‌ಗಳನ್ನು ಹೊಂದಿದ್ದಾರೆ ಅಂದರೆ ಫೇಸ್‌ಬುಕ್, ಫೇಸ್‌ಬುಕ್ ಮೆಸೆಂಜರ್, ಫೇಸ್‌ಬುಕ್ ಪೇಜಸ್ ಮ್ಯಾನೇಜರ್, ಪೇಪರ್, ಸ್ಲಿಂಗ್‌ಶಾಟ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಬೋಲ್ಟ್, ರೂಮ್ಸ್ ಮತ್ತು ಮೂವ್ಸ್ ಎಂದಾಗಿದೆ.

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ ಹಿರಿದು

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ 1 ಬಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.

ಫೇಸ್‌ಬುಕ್ ಖ್ಯಾತಿ

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಆಪಲ್ ಬಳಿ $155 ಬಿಲಿಯನ್ ದುಡ್ಡಿದ್ದು ಇದು ಏಳು ವಾಟ್ಸಾಪ್‌ಗಳನ್ನು ಖರೀದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದರೆ ಫೇಸ್‌ಬುಕ್ ತನ್ನ ಹಿರಿಮೆಯಿಂದ ಈ ಸಂದೇಶ ಅಪ್ಲಿಕೇಶನ್ ಅನ್ನು $22 ಬಿಲಿಯನ್‌ಗೆ ಖರೀದಿಸಿದೆ.

ಜಾಹೀರಾತು ಖ್ಯಾತಿ

ಟಾಪ್ 10 ಫೇಸ್‌ಬುಕ್ ವೈಶಿಷ್ಟ್ಯಗಳು

ಫೇಸ್‌ಬುಕ್ 1.5 ಮಿಲಿಯನ್ ಸಕ್ರಿಯ ಜಾಹೀರಾತುದಾರರನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about very interesting 10 facts about facebook you never missed out. All the details about facebook we can get here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot