ಆಂಡ್ರಾಯ್ಡ್ ಟಾಪ್ 10 ವಿಶೇಷತೆಗಳು

By Shwetha
|

ಜಗತ್ತಿನಾದ್ಯಂತ ಆಂಡ್ರಾಯ್ಡ್ ಹೆಚ್ಚು ಬಳಕೆಯಾಗುತ್ತಿರುವ ಓಎಸ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೆಚ್ಚು ಕಸ್ಟಮೈಸ್ ಮಾಡಬಹುದಾದ ಓಎಸ್ ಆಗಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಡ್ರಾಯ್ಡ್ ಒಂದು ಸ್ವತಂತ್ರ ವೇದಿಕೆ ಎಂದೇ ಪ್ರಸಿದ್ಧಿಯಲ್ಲಿದೆ. ಹೆಚ್ಚಿನ ಫೋನ್ ಬಳಕೆದಾರರು ಆಂಡ್ರಾಯ್ಡ್ ಅನ್ನೇ ನೆಚ್ಚಿಕೊಂಡಿದ್ದು ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ಗಿರುವ ಕೆಲವೊಂದು ವಿಶೇಷತೆಗಳನ್ನು ನೋಡೋಣ.

ಓದಿರಿ: ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

ಬನ್ನಿ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ಗಿರುವ ವಿಶೇಷತೆಗಳನ್ನು ನೋಡೋಣ.

ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ

ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ

ನಿಮ್ಮ ಫೋನ್‌ಗೆ ನೀವು ಡೌನ್‌ಲೋಡ್ ಮಾಡಿಕೊಂಡಿರುವ ಅಪ್ಲಿಕೇಶನ್‌ಗಳನ್ನು ದಿನಾಂಕದವರೆಗೆ ಪರಿಶೀಲಿಸಿಕೊಳ್ಳಿ. ನಿಮ್ಮ ಗೂಗಲ್ ಐಡಿಯಿಂದ ನೀವು ಇನ್‌ಸ್ಟಾಲ್ ಮಾಡಿಕೊಂಡಿರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು.

ಸ್ವಯಂಚಾಲಿತ ಫೋನ್ ಅನ್‌ಲಾಕ್

ಸ್ವಯಂಚಾಲಿತ ಫೋನ್ ಅನ್‌ಲಾಕ್

ಸ್ಮಾರ್ಟ್ ಲಾಕ್ ಫೀಚರ್ ಅನ್ನು ಬಳಸಿಕೊಂಡು ನಿಮ್ಮ ಫೋನ್‌ನ ಭದ್ರತೆಯನ್ನು ಮಾಡಿಕೊಳ್ಳಬಹುದಾಗಿದೆ.

ಅಳಿಸಿದ ಅಧಿಸೂಚನೆಗಳನ್ನು ಮರುಪಡೆದುಕೊಳ್ಳುವುದು

ಅಳಿಸಿದ ಅಧಿಸೂಚನೆಗಳನ್ನು ಮರುಪಡೆದುಕೊಳ್ಳುವುದು

ಆಂಡ್ರಾಯ್ಡ್ ಹೋಮ್ ಸ್ಕ್ರೀನ್‌ನ ಖಾಲಿ ಜಾಗದಲ್ಲಿ ದೀರ್ಘವಾಗಿ ಒತ್ತಿರಿ ಮತ್ತು ವಿಜೆಟ್‌ಗಳ ಮೇಲೆ ಸ್ಪರ್ಶಿಸಿ. ಎಡಕ್ಕೆ ಸ್ವೈಪ್ ಮಾಡುವ ಮೂಲಕ ಸೆಟ್ಟಿಂಗ್ಸ್ ಶಾರ್ಟ್‌ಕಟ್ ವಿಜೆಟ್ ಅನ್ನು ಪಡೆದುಕೊಳ್ಳಿ ನಂತರ ಅದನ್ನು ಮುಖ್ಯಪರದೆಗೆ ತನ್ನಿ.

ಸೈಲೆಂಟ್ ಮೋಡ್‌ನಲ್ಲಿ ಸ್ಮಾರ್ಟ್‌ಫೋನ್ ಹುಡುಕುವುದು

ಸೈಲೆಂಟ್ ಮೋಡ್‌ನಲ್ಲಿ ಸ್ಮಾರ್ಟ್‌ಫೋನ್ ಹುಡುಕುವುದು

ಬ್ರೌಸರ್ ತೆರೆಯಿರಿ ಮತ್ತು ಆಂಡ್ರಾಯ್ಡ್ ಡಿವೈಸ್ ಮೂಲಕ "ಫೈಂಡ್ ಮೈ ಫೋನ್" ಟೈಪ್ ಮಾಡಿ. ನಿಮ್ಮ ಗೂಗಲ್ ಐಡಿಯಿಂದ ಸೈನ್ ಇನ್ ಮಾಡಿ. ಇಲ್ಲಿ ಮೂರು ಆಯ್ಕೆಗಳು ದೊರೆಯುತ್ತವೆ. ರಿಂಗ್, ಲಾಕ್ ಮತ್ತು ಇರೇಸ್. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇವುಗಳನ್ನು ಆರಿಸಿ.

ಯಾವುದೇ ಪರದೆಯ ಮೇಲೆ ಜೂಮ್ ಮಾಡಿ

ಯಾವುದೇ ಪರದೆಯ ಮೇಲೆ ಜೂಮ್ ಮಾಡಿ

ಸೆಟ್ಟಿಂಗ್‌ಗಳಲ್ಲಿ ಆಕ್ಸೆಸಿಬಿಲಿಟಿ ಮೆನುಗೆ ಹೋಗಿ ಮತ್ತು ಮ್ಯಾಗ್ನಿಫಿಕೇಶನ್ ಗೆಸ್ಚರ್‌ಗಳನ್ನು ಆನ್ ಮಾಡಿ. ವಿಷಯವನ್ನು ದೊಡ್ಡದಾಗಿಸಲು ಮೂರು ಬಾರಿ ಸ್ಪರ್ಶಿಸಿ. ವಿಷಯವನ್ನು ನೋಡಲು ಡ್ರಾಗ್ ಮಾಡಬಹುದು ಅಥವಾ ಪ್ಯಾನ್ ಮಾಡಿಕೊಳ್ಳಬಹುದು.

ಕರೆಗಳು ಮತ್ತು ಪಠ್ಯಗಳನ್ನು ನಿರ್ಬಂಧಿಸುವುದು

ಕರೆಗಳು ಮತ್ತು ಪಠ್ಯಗಳನ್ನು ನಿರ್ಬಂಧಿಸುವುದು

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 5.0 ಲಾಲಿಪಪ್ ಅಥವಾ ಮೇಲ್ಮಟ್ಟದ್ದು ಚಾಲನೆಯಾಗುತ್ತಿದೆ ಎಂದಾದಲ್ಲಿ, ನಿಮಗೆ ಅನುಮತಿಗಳನ್ನು ಹೊಂದಿಸಿಕೊಳ್ಳಬಹುದಾಗಿದೆ. ಸೌಂಡ್ ಮತ್ತು ನೋಟಿಫಿಕೇಶನ್‌ಗೆ ಹೋಗಿ ಇಲ್ಲಿ ಇಂಟರಪ್ಶನ್ ಸ್ಕ್ರಾಲ್ ಮಾಡಿ. "ಕಾಲ್ಸ್/ಟೆಕ್ಸ್ಟ್ ಫ್ರಮ್" ಆಪ್ಶನ್ ದೊರೆಯುತ್ತದೆ.

ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು

ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು

ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಲು ಸೆಟ್ಟಿಂಗ್ ಮೆನುವಿನಲ್ಲಿ ಸೌಂಡ್ ಮತ್ತು ನೋಟಿಫಿಕೇಶನ್‌ಗೆ ಹೋಗಿ ನೋಟಿಫಿಕೇಶನ್‌ಗೆ ಸ್ಕ್ರಾಲ್ ಮಾಡಿ ಮತ್ತು ವೆನ್ ಡಿವೈಸ್ ಈಸ್ ಅನ್‌ಲಾಕ್ಡ್ ಸ್ಪರ್ಶಿಸಿ.

 ಅಪ್ಲಿಕೇಶನ್‌ಗಳ ಬಳಕೆ

ಅಪ್ಲಿಕೇಶನ್‌ಗಳ ಬಳಕೆ

ಬಾರ್ ಲಾಂಚರ್, ನೋಟಿಫಿಕೇಶನ್ ಪ್ಯಾನಲ್‌ನಲ್ಲಿ ಅದನ್ನು ಇರಿಸಿ. ಈ ಅಪ್ಲಿಕೇಶನ್‌ಗಳು ಉಚಿತವಾಗಿದ್ದು ಯಾವುದೇ ದರ ಇಲ್ಲ.

ಫೋನ್‌ನ ಹಾರ್ಡ್‌ವೇರ್‌ನಲ್ಲಿ ಪರಿಶೀಲಿಸುವುದು

ಫೋನ್‌ನ ಹಾರ್ಡ್‌ವೇರ್‌ನಲ್ಲಿ ಪರಿಶೀಲಿಸುವುದು

ನಿಮ್ಮ ಸ್ಮಾರ್ಟ್‌ಫೋನ್‌ನ ಹಾರ್ಡ್‌ವೇರ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಕೊಳ್ಳಲು ಫೋನ್ ಟೆಸ್ಟರ್ ಅನ್ನು ಅಳವಡಿಸಿಕೊಳ್ಳಿ. ಇದು ಫೋನ್‌ನ ಸಂಪೂರ್ಣ ಹಾರ್ಡ್‌ವೇರ್ ಮಾಹಿತಿಯನ್ನು ನೀಡುತ್ತದೆ.

ಅಧಿಸೂಚನೆಗಳನ್ನು ಓದುವುದು

ಅಧಿಸೂಚನೆಗಳನ್ನು ಓದುವುದು

ಕೆಲವೊಮ್ಮೆ ನೀವು ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಧಿಸೂಚನೆಗಳನ್ನು ನಿಮಗಾಗಿ ಓದಿಸಬಹುದಾಗಿದೆ. ರೀಡ್ ಇಟ್ ಟು ಮಿ, ಶೌಟರ್, ಸ್ಪೀಕ್ ಮಿ ಮುಂತಾದವು.

Best Mobiles in India

English summary
If you think you have explored your Android phone to the fullest, then take a look at these 10 tips and tricks that will make you see your phone in a different light.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X