ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

Written By:

ಟೆಕ್ ಸ್ವಾಧೀನ ಏಕೆ ನಡೆಯುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಜ್ಞಾನವನ್ನು ಸಂಪಾದಿಸಲು, ಮೇಲೇಳುತ್ತಿರುವ ಸ್ಪರ್ಧಿಯನ್ನು ಮಟ್ಟಹಾಕಲು, ಪೇಟೆಂಟ್‌ಗಳ ಮೇಲೆ ಸ್ವಾಧೀನವನ್ನು ಗಳಿಸಿಕೊಳ್ಳಲು, ಮತ್ತು ಮಾಧ್ಯಮದಲ್ಲಿ ತಮ್ಮನ್ನು ತಾವೇ ಗುರುತಿಸಿಕೊಳ್ಳಲು ಟೆಕ್ ಸ್ವಾಧೀನ ನಡೆಯುತ್ತದೆ. ಈ ಸ್ವಾಧಿನಗಳು ಹೆಚ್ಚಿನ ಬೆಲೆಯನ್ನು ಒಳಗೊಂಡು ಬರುತ್ತವೆ ಮತ್ತು ಇದು ದುಬಾರಿ ಸ್ವಾಧೀನಪಡಿಸುವಿಕೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: ಇಂಟರ್ನೆಟ್ ಕಪಿಮುಷ್ಟಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕರಾಳ ಹೇಗೆ?

ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ದುಬಾರಿ ಸ್ವಾಧೀನಪಡಿಸುವಿಕೆಗಳ ಮೇಲೆ ಕಣ್ಣು ಹಾಯಿಸೋಣ. ಟೆಕ್ ಕ್ಷೇತ್ರದಲ್ಲಿ ನಡೆದಿರುವ ಈ ಸ್ವಾಧೀನಪಡಿಸುವಿಕೆ ನಿಜಕ್ಕೂ ಒಂದು ರೀತಿಯ ತಲ್ಲಣವನ್ನುಂಟುಮಾಡಿರುವುದು ನಿಜವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ನಿಂದ ವಾಟ್ಸಾಪ್ ಖರೀದಿ ( $19 ಬಿಲಿಯನ್)

ಫೇಸ್‌ಬುಕ್‌ನಿಂದ ವಾಟ್ಸಾಪ್ ಖರೀದಿ ( $19 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ವಾಟ್ಸಾಪ್‌ನ 450 ಮಿಲಿಯನ್ ಬಳಕೆದಾರರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ ಫೇಸ್‌ಬುಕ್ $19 ಬಿಲಿಯನ್ ಒಪ್ಪಂದವನ್ನು ಮಾಡಿಕೊಂಡು ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಗೂಗಲ್‌ನಿಂದ ಮೋಟೋರೋಲಾ ಮೊಬಿಲಿಟಿ ಖರೀದಿ ($12.5 ಬಿಲಿಯನ್)

ಗೂಗಲ್‌ನಿಂದ ಮೋಟೋರೋಲಾ ಮೊಬಿಲಿಟಿ ಖರೀದಿ ($12.5 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಗೂಗಲ್ ಮೋಟೋರೋಲಾ ಮೊಬಿಲಿಟಿಯನ್ನು 2011 ರಲ್ಲಿ $12.5 ಬಿಲಿಯನ್‌ಗೆ ಖರೀದಿ ಮಾಡಿತು. ಇದರೊಂದಿಗೆ ವೈರ್‌ಲೆಸ್ ಕಮ್ಯೂನಿಕೇಶನ್ ಟೆಕ್ನಾಲಜಿಗಾಗಿ ಬಾರ್‌ಗೇಯ್ನಿಂಗ್ ಚಿಪ್ ಅನ್ನು ಆಪಲ್ ವಿರುದ್ಧ ಗೂಗಲ್ ಭದ್ರಪಡಿಸಿಕೊಂಡಿತು.

ಎಚ್‌ಪಿಯಿಂದ ಆಟೊನಮಿ ಖರೀದಿ ($10.3 ಬಿಲಿಯನ್)

ಎಚ್‌ಪಿಯಿಂದ ಆಟೊನಮಿ ಖರೀದಿ ($10.3 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

2002 ರಲ್ಲಿ #17.6 ಬಿಲಿಯನ್‌ಗೆ ಕೋಂಪೇಕ್ ಅನ್ನು ಖರೀದಿಸಿದ ನಂತರ, ಎಚ್‌ಪಿ ಆಟೊನಮಿಯೊಂದಿಗೆ $10 ಬಿಲಿಯನ್ ಮಾರಾಟವನ್ನು ಎಚ್‌ಪಿ ಮಾಡಿಕೊಂಡಿತು.

ಮೈಕ್ರೋಸಾಫ್ಟ್‌ನಿಂದ ಸ್ಕೈಪ್ ಖರೀದಿ ($8.5 ಬಿಲಿಯನ್)

ಮೈಕ್ರೋಸಾಫ್ಟ್‌ನಿಂದ ಸ್ಕೈಪ್ ಖರೀದಿ ($8.5 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

2011 ರ ಮಧ್ಯಂತರದಲ್ಲಿ ಮೈಕ್ರೋಸಾಫ್ಟ್ ಸ್ಕೈಪ್ ಅನ್ನು ಖರೀದಿಸಿದ ನಂತರ, 2005 ರಲ್ಲಿ ಇಬೇ $3.1 ಬಿಲಿಯನ್‌ಗೆ ಸಂಪೂರ್ಣ ಮಾಲೀಕತ್ವವನ್ನು ಗಳಿಸಿಕೊಂಡಿತು. ನಂತರ ಇಬೇ ಇದನ್ನು 40% ನಷ್ಟದಲ್ಲಿ ಮಾರಾಟ ಮಾಡಿತು. ನಂತರ ಇದನ್ನು ಮೈಕ್ರೋಸಾಫ್ಟ್ $8.56 ಬಿಲಿಯನ್‌ಗೆ ಖರೀದಿಸಿ ತನ್ನ ಕುಟುಂಬಕ್ಕೆ ಆಮಂತ್ರಿಸಿತು.

ಒರೇಕಲ್‌ನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ ($7.4 ಬಿಲಿಯನ್‌)

ಒರೇಕಲ್‌ನಿಂದ ಸನ್ ಮೈಕ್ರೋಸಿಸ್ಟಮ್ಸ್ ಖರೀದಿ ($7.4 ಬಿಲಿಯನ್‌)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಸನ್ ಮೈಕ್ರೋಸಿಸ್ಟಮ್‌ನ ಖರೀದಿಯ ನಂತರ, ಜಾವಾಗಾಗಿ ಒರೇಕಲ್ ಮಾಲೀಕತ್ವವನ್ನು ಪಡೆದುಕೊಂಡಿತು.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಖರೀದಿ ($7.2 ಬಿಲಿಯನ್‌)

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಖರೀದಿ ($7.2 ಬಿಲಿಯನ್‌)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಜಗತ್ತಿನಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದ ಮೊಬೈಲ್ ತಯಾರಿಕಾ ಕಂಪೆನಿ ನೋಕಿಯಾ ತನ್ನ ಮೊಬೈಲ್ ಫೋನ್‌ಗಳನ್ನು ಮೈಕ್ರೋಸಾಫ್ಟ್‌ಗೆ $7 ಬಿಲಿಯನ್‌ಗೆ ಮಾರಾಟ ಮಾಡಿತು. ಇದು ನೋಕಿಯಾ ಪೇಟೆಂಟ್ ಪೋರ್ಟ್‌ಪೋಲಿಯೊ, ಮ್ಯಾಪಿಂಗ್ ಸರ್ವೀಸಸ್, 32,000 ಉದ್ಯೋಗಿಗಳನ್ನು ಈ ಒಪ್ಪಂದ ಒಳಗೊಂಡಿದೆ.

ಗೂಗಲ್‌ನಿಂದ ನೆಸ್ಟ್ ಲ್ಯಾಬ್ಸ್ ಖರೀದಿ ($3.2 ಬಿಲಿಯನ್)

ಗೂಗಲ್‌ನಿಂದ ನೆಸ್ಟ್ ಲ್ಯಾಬ್ಸ್ ಖರೀದಿ ($3.2 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಸರ್ಚ್ ಜಯೆಂಟ್ ಗೂಗಲ್ ನೆಸ್ಟ್ ಲ್ಯಾಬ್ ಅನ್ನು $3.2 ಬಿಲಿಯನ್‌ಗೆ ಖರೀದಿ ಮಾಡಿದೆ. ಜಗತ್ತನ್ನೇ ಬದಲಾಯಿಸು ಸಾಮರ್ಥ್ಯವನ್ನು ಈ ಟೆಕ್ ಮಹಾನ್ ಹೊಂದಿದೆ.

ಡೆಲ್‌ನಿಂದ ಕ್ವೆಸ್ಟ್ ಸಾಫ್ಟ್‌ವೇರ್ ಖರೀದಿ ($2.4 ಬಿಲಿಯನ್)

ಡೆಲ್‌ನಿಂದ ಕ್ವೆಸ್ಟ್ ಸಾಫ್ಟ್‌ವೇರ್ ಖರೀದಿ ($2.4 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಸಾಫ್ಟ್‌ವೇರ್ ಜಗತ್ತಿನಲ್ಲೇ ನಾಯಕನೆಂದೇ ಕರೆಸಿಕೊಂಡಿರುವ ಕ್ವೆಸ್ಟ್ ಸಾಫ್ಟ್‌ವೇರ್ ಅನ್ನು ಡೆಲ್ $2.4 ಬಿಲಿಯನ್‌ಗೆ ಖರೀದಿಸಿದೆ.

ಯಾಹೂನಿಂದ ತಂಬ್ಲರ್ ಖರೀದಿ ($1.1 ಬಿಲಿಯನ್)

ಯಾಹೂನಿಂದ ತಂಬ್ಲರ್ ಖರೀದಿ ($1.1 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಮರೀಸ್ಸಾ ಮೇಯರ್ ಯಾಹೂವನ್ನು 2012 ರಲ್ಲಿ ಸೇರಿಕೊಂಡರು. ಇದರ ನಂತರ ಯಾಹೂವಿನ ದಿಸೆಯೇ ಬದಲಾಯಿತು. ಸಂಸ್ಥೆ ತಂಬ್ಲರ್ ಅನ್ನು $1.1 ಬಿಲಿಯನ್‌ಗೆ ಖರೀದಿಸಿತು.

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಖರೀದಿ ($1 ಬಿಲಿಯನ್)

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್ ಖರೀದಿ ($1 ಬಿಲಿಯನ್)

ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ಫೋಟೋ ಶೇರಿಂಗ್ ಅಪ್ಲಿಕೇಶನ್ ಆದ ಇನ್‌ಸ್ಟಾಗ್ರಾಮ್‌ನ ಖರೀದಿಯನ್ನು ಫೇಸ್‌ಬುಕ್ ಮಾಡಿದ್ದು ಮಕ್ಕಳಾಟಿಕೆಯಂತೆ ಹಲವರಿಗೆ ತೋರಿದ್ದಿದೆ. ಆದರೆ ಫೇಸ್‌ಬುಕ್‌ ಮಾಡಿರುವ ಈ ಖರೀದಿ ನಿಜಕ್ಕೂ ದಾಖಲೆಯನ್ನು ನಿರ್ಮಿಸುವಂತಹ ಅವಕಾಶವನ್ನು ಉಂಟುಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Most Expensive Acquisitions In Recent Tech History.
Please Wait while comments are loading...
Opinion Poll

Social Counting