Subscribe to Gizbot

ಪ್ರಯಾಣಕ್ಕೆ ಸಾಥ್ ನೀಡುವ ಹಸಿರು ಗ್ಯಾಜೆಟ್ಸ್

Written By:

ಪ್ರಯಾಣದ ವೇಳೆಯಲ್ಲಿ ಹಗುರ ಸಾಮಾಗ್ರಿಗಳು ಪ್ರಯಾಣಿಗರಿಗೆ ಆಯಾಸವನ್ನು ಕಡಿಮೆ ಮಾಡುತ್ತದೆ. ಇದರಿಂದ ಪ್ರಯಾಣ ನೆನಪಿನಲ್ಲುಳಿಯುವಂಥದ್ದು ಮತ್ತು ಮನರಂಜನೆಯನ್ನು ಉಂಟುಮಾಡುವಂತಿರುತ್ತದೆ. ಅದಕ್ಕಾಗಿಯೇ ಯಾನಕ್ಕೆ ಅಗತ್ಯವಾಗಿರುವ ಹಗುರ ವಸ್ತುಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಹಗುರ ಗ್ಯಾಜೆಟ್‌ಗಳು ಅಂದರೆ ಲ್ಯಾಪ್‌ಟಾಪ್ಸ್ ಆಗಿರಬಹುದು, ಬ್ಯಾಟರಿ ಆಗಿರಬಹುದು ಹೀಗೆ ಅಗತ್ಯವಾಗಿರುವ ಸಾಮಾಗ್ರಿಗಳು ಯಾವುದೂ ಕೂಡ ಆಗಿರಬಹುದು.

ಓದಿರಿ: ಫೇಸ್‌ಬುಕ್ ಒಡೆತನದಲ್ಲಿರುವ ಟಾಪ್ ಕಂಪೆನಿಗಳು

ನಿಮ್ಮ ಪ್ರಯಾಣಕ್ಕೆ ಆಧುನೀಕತೆ ಜೊತೆಗೆ ಟೆಕ್ನಾಲಜಿಯ ಸ್ಪರ್ಶವನ್ನು ನೀಡಿದರೆ ಹೇಗಿರುತ್ತದೆ ಎಂಬ ಅನುಭವವನ್ನು ನೀವು ಅನುಭವಿಸಿಯೇ ತೀರಬೇಕು. ಇಂದಿನ ಲೇಖನದಲ್ಲಿ ನಿಮ್ಮ ಪ್ರಯಾಣಕ್ಕೆ ಸಹಕಾರಿಯಾಗಿರುವ ಟೆಕ್ ಗ್ಯಾಜೆಟ್‌ಗಳ ಮಾಹಿತಿಯನ್ನು ನಾವು ನಿಮಗೆ ಮಾಡಿಸುತ್ತಿದ್ದೇವೆ. ಈ ಗ್ಯಾಜೆಟ್‌ಗಳು ನಿಮ್ಮ ದೂರದ ಪ್ರಯಾಣಕ್ಕೆ ಸಾಥ್ ನೀಡುವಂತಿದ್ದು ಅಚ್ಚಳಿಯದ ಯಾನದ ನೆನಪನ್ನು ನಿಮ್ಮ ಮನದಾಳದಲ್ಲಿ ಅಚ್ಚೊತ್ತುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರಾವೆಲ್ ಅಲರಾಮ್ ಗಡಿಯಾರ

ನೀರಿನ ಶಕ್ತಿಯ ಟ್ರಾವೆಲ್ ಅಲರಾಮ್ ಗಡಿಯಾರ

ಇದು ಉಪ್ಪು ನೀರನ್ನು ಬಳಸುತ್ತದೆ; ನಿಮಗೆ ಎಲ್ಲಿಗೆ ಬೇಕಾದರೂ ಈ ನೀರಿನ ಗಡಿಯಾರವನ್ನು ಕೊಂಡೊಯ್ಯಬಹುದು.

ಸೋಲಾರ್ ಬ್ಯಾಟರಿ

ಸೋಲಾರ್ ಶಕ್ತಿಯ ಬ್ಯಾಟರಿ

ರೀಚಾರ್ಜ್ ಮಾಡಬಹುದಾದ ಲಿಥಿಯಮ್ ಬ್ಯಾಟರಿಯ 3.7 ವೋಲ್ಟ್ ಅನ್ನು ಇದು ಬಳಸಿಕೊಳ್ಳುತ್ತದೆ.

ಮೆಮೊರಿ ಕಾರ್ಡ್

ಫೋಟೋ ಮೆಮೊರಿ ಕಾರ್ಡ್

2 ಜಿಬಿ ಎಸ್‌ಡಿ ಮೆಮೊರಿ ಕಾರ್ಡ್ ಇದು ನೂರಕ್ಕಿಂತಲೂ ಹೆಚ್ಚಿನ ಚಿತ್ರಗಳನ್ನು ತನ್ನಲ್ಲಿ ಸಂಗ್ರಹಿಸುತ್ತದೆ.

ಲ್ಯಾಪ್‌ಟಾಪ್

ಅಸೂಸ್ ಬ್ಯಾಂಬೂ ಲ್ಯಾಪ್‌ಟಾಪ್

ಬಿದಿರಿನಿಂದ ತಯಾರಿಸಲಾದ ಈ ಅಸೂಸ್ ಲ್ಯಾಪ್‌ಟಾಪ್ ಗ್ರೀನ್ ಗ್ಯಾಜೆಟ್ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಇದು ಹೆಚ್ಚುವರಿ ಬ್ಯಾಟರಿ ಶಕ್ತಿಯನ್ನು ದಯಪಾಲಿಸುತ್ತದೆ ಅಂತೆಯೇ ಡಿವೈಸ್ ಬಿಸಿಯಾಗುವುದನ್ನು ತಪ್ಪಿಸುತ್ತದೆ.

ಯುಎಸ್‌ಬಿ ಬ್ಯಾಟರಿ

ಯುಎಸ್‌ಬಿ ಪವರ್ಡ್ ಬ್ಯಾಟರಿ

ಈ ಯುಎಸ್‌ಬಿ ಆಧಾರಿತ ರೀಚಾರ್ಜ್ ಮಾಡಬಹುದಾದ ಡಿವೈಸ್‌ಗಳು 500 ಚಾರ್ಜ್ ಸೈಕಲ್‌ಗಳವರೆಗೆ ನಿಲ್ಲುತ್ತದೆ.

ಅಲ್ಯುಮಿನಿಯಮ್‌ ತಯಾರಿ

ಹಾರ್ಡ್ ಡ್ರೈವ್

ಬಿದಿರು ಮತ್ತು ಮರುಬಳಕೆ ಮಾಡಬಹುದಾದ ಅಲ್ಯುಮಿನಿಯಮ್‌ನಿಂದ ತಯಾರಿಸಲಾಗಿದೆ. ಇದರಲ್ಲಿರುವ ಪವರ್ ಅಡಾಪ್ಟರ್ ಫೈಲ್‌ಗಳನ್ನು ಸುರಕ್ಷಿತವಾಗಿ ಇರಿಸುತ್ತದೆ ಮತ್ತು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ.

ಮೀಡಿಯಾ ಪ್ಲೇಯರ್

ಸೋಲಾರ್ ಆಧಾರಿತ ಮೀಡಿಯಾ ಪ್ಲೇಯರ್

ಸೂರ್ಯನ ಬೆಳಕಿನಿಂದ ಹಾಡು ಆಲಿಸುವುದು, ಫೋಟೋ ಪ್ಲೇಬ್ಯಾಕ್ ಮಾಡುವುದು; ವೀಡಿಯೋ ಗೇಮ್ ಆಡುವುದನ್ನು ಇನ್ನೂ ನೀವು ನಿರ್ವಹಿಸಬಹುದು. ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಈ ಎಲ್ಲಾ ಕೆಲಸಗಳನ್ನು ನಿಮಗೆ ನೆರವೇರಿಸಬಹುದಾಗಿದೆ.

ಹೆಡ್‌ಸೆಟ್

ಸೋಲಾರ್ ಆಧಾರಿತ ಹೆಡ್‌ಸೆಟ್

ವಿಶ್ವದ ಪ್ರಥಮ ಸೋಲಾರ್ ಆಧಾರಿತ ಬ್ಲ್ಯೂಟೂತ್ ಹೆಡ್‌ಸೆಟ್ ಇದಾಗಿದ್ದು ಸೂರ್ಯನ ಕಿರಣಗಳನ್ನು ಸ್ಟ್ಯಾಂಡ್‌ಬೈ ಸಮಯವನ್ನಾಗಿ ಪರಿವರ್ತಿಸುತ್ತದೆ ಮತ್ತು ಗಂಟೆಗಳ ಸಕ್ರಿಯ ಸಂವಾದವನ್ನು ಒದಗಿಸುತ್ತದೆ.

ಪೋರ್ಟೇಬಲ್ ಸ್ಪೀಕರ್‌

ಸ್ಪೀಕರ್ಸ್

ಹಗುರವಾದ, ಪೋರ್ಟೇಬಲ್ ಸ್ಪೀಕರ್‌ಗಳು ನಿಮಗೆ ಅತ್ಯುತ್ತಮ ಸಂಗೀತವನ್ನು ಪ್ರಾಕೃತಿಕವಾಗಿ ಒದಗಿಸುತ್ತದೆ.

ಹಸಿರು ಫೋನ್

ಹಸಿರು ಸೆಲ್ ಫೋನ್

ಮರುಬಳಸಬಹುದಾದ ಪ್ಲಾಸ್ಟಿಕ್ ಅನ್ನು ಈ ಸೆಲ್ ಫೋನ್ ತಯಾರಿಗೆ ಬಳಸಲಾಗಿದ್ದು ಇದು 94 ಶೇಕಡಾ ಕಡಿಮೆ ಶಕ್ತಿಯನ್ನು ಬಳಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 New Eco-Friendly Travel Gadgets which will help you to love the tech life.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot