ಸ್ಮಾರ್ಟ್‌ಫೋನ್ ಬಳಸುವ ಸ್ಮಾರ್ಟ್‌ ಜನರಿಗಾಗಿ 10 ಅಪ್ಲಿಕೇಶನ್‌ಗಳು

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನ ಭದ್ರತೆಗಾಗಿ ನೂರಾರು ಅಪ್ಲಿಕೇಶನ್‌ಗಳಿದ್ದು ಅವುಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ ಫೋನ್ ಸುರಕ್ಷತೆಯನ್ನು ಮಾಡಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್, ಆಪಲ್ ಸ್ಟೋರ್‌ಗಳು ಪ್ರತೀ ದಿನ ನಿಮ್ಮ ಅಗತ್ಯಕ್ಕೆ ತಕ್ಕಂತಿರುವ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು ಇವುಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ರಕ್ಷಾ ಕವಚವನ್ನು ಅಳವಡಿಸಬಹುದಾಗಿದೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಇನ್ನು ಎಲ್ಲಾ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗೆ ಸುರಕ್ಷತೆಯನ್ನು ನೀಡಿದರೂ ಅವುಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿ ನೀಡುವುದು ಇಂದಿನ ಲೇಖನದಲ್ಲಿ ನಾವು ಮಾಡುತ್ತಿರುವ ಕೆಲಸವಾಗಿದೆ. ನಿಮ್ಮ ಅಗತ್ಯಕ್ಕೆ ಮಾತ್ರ ಬೇಕಾಗಿರುವ ಈ ಅಪ್ಲಿಕೇಶನ್‌ಗಳು ಸಮಯ ಪೋಲಾಗುವುದನ್ನು ತಡೆಗಟ್ಟಿ ನಿಮಗೆ ಜೊತೆಗೆ ನಿಮ್ಮ ಫೋನ್‌ಗೆ ರಕ್ಷಣೆಯನ್ನು ನೀಡುತ್ತವೆ.

ಟ್ರು ಕಾಲರ್ ಅಪ್ಲಿಕೇಶನ್

ಟ್ರು ಕಾಲರ್ ಅಪ್ಲಿಕೇಶನ್

ನಿಮಗೆ ಬರುವ ಸ್ಪ್ಯಾಮ್ ಕಾಲ್‌ಗಳನ್ನು ಈ ಅಪ್ಲಿಕೇಶನ್ ಬಳಸಿ ಕಂಡುಹಿಡಿಯಬಹುದಾಗಿದೆ. ಆಂಡ್ರಾಯ್ಡ್, ಆಪಲ್, ವಿಂಡೋಸ್ ಫೋನ್‌ಗೆ ಇದು ಸಂಪೂರ್ಣ ಉಚಿತವಾಗಿದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೈಪರ್ ಲಾಪ್ಸ್

ಹೈಪರ್ ಲಾಪ್ಸ್

ನಿಮ್ಮ ವೀಡಿಯೋವನ್ನು ಸ್ಟೇಬಲ್‌ಗೊಳಿಸುವ ಈ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್‌ನಿಂದ ಪೂರೈಕೆಯಾಗಿದೆ. ಪ್ರಸ್ತುತ ಆಪಲ್‌ ಫೋನ್ ಬಳಕೆದಾರರಿಗೆ ಉಚಿತವಾಗಿರುವ ಈ ಅಪ್ಲಿಕೇಶನ್ ಶೀಘ್ರದಲ್ಲಿಯೇ ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಿದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 ಆಕ್ಶನ್ ಮೂವಿ ಎಫ್‌ಎಕ್ಸ್ ಅಪ್ಲಿಕೇಶನ್

ಆಕ್ಶನ್ ಮೂವಿ ಎಫ್‌ಎಕ್ಸ್ ಅಪ್ಲಿಕೇಶನ್

ನಿಮ್ಮ ಮೊಬೈಲ್ ವೀಡಿಯೋಗಳಿಗೆ ಆಕ್ಶನ್ ಇಫೆಕ್ಟ್ ಅನ್ನು ನೀಡುತ್ತದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇನ್‌ಫಿನಿಟ್

ಇನ್‌ಫಿನಿಟ್

ಈ ಅಪ್ಲಿಕೇಶನ್ ನಿಮ್ಮ ಗ್ಯಾಜೆಟ್‌ಗಳ ನಡುವೆ ಎಷ್ಟು ದೊಡ್ಡ ಫೈಲ್‌ಗಳನ್ನು ಬೇಕಾದರೂ ವರ್ಗಾಯಿಸುತ್ತದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನೈಟ್ ಸ್ಕೈ

ನೈಟ್ ಸ್ಕೈ

ನಕ್ಷತ್ರಪುಂಜಗಳ ವೀಕ್ಷಣೆಗೆ ಅನುವು ಮಾಡಿಕೊಡುವ ಅಪ್ಲಿಕೇಶನ್ ಆಗಿದೆ ನೈಟ್ ಸ್ಕೈ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಫ್ಲೈಟ್ ರಾಡಾರ್ 24

ಫ್ಲೈಟ್ ರಾಡಾರ್ 24

ನಿಮ್ಮ ಫೋನ್‌ನ ಕ್ಯಾಮೆರಾವನ್ನು ಆಗಸಕ್ಕೆ ಪಾಯಿಂಟ್ ಮಾಡಿ ಮತ್ತು ಇದು ವಿಮಾನದ ಸಂಖ್ಯೆ, ಇದು ಎಲ್ಲಿಗೆ ಹೋಗುತ್ತಿದೆ, ಮೊದಲಾದ ಮಾಹಿತಿಯನ್ನು ಒದಗಿಸುತ್ತದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೇರ್ ಕಲರ್ ಬೈ ಮೋಡೊಫೇಸ್

ಹೇರ್ ಕಲರ್ ಬೈ ಮೋಡೊಫೇಸ್

ಬೇರೆ ಬೇರೆ ಕೇಶ ಶೃಂಗಾರವನ್ನು ಈ ಅಪ್ಲಿಕೇಶನ್ ಮುಖಾಂತರ ನಿಮಗೆ ಮಾಡಿಕೊಳ್ಳಬಹುದಾಗಿದ್ದು ಮೇಕಪ್ ಮಾಡಿ ನಿಮ್ಮ ಸೌಂದರ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದಾಗಿದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ಯಾರಲೆಲ್ ಬೈಬಲ್

ಪ್ಯಾರಲೆಲ್ ಬೈಬಲ್

ಬೈಬಲ್ ಅಪ್ಲಿಕೇಶನ್‌ನಲ್ಲಿ ನೀವು ಫೋಟೋಗಳನ್ನು ತೆಗೆದು ಅಪ್‌ಲೋಡ್ ಮಾಡಬೇಕಾಗುತ್ತದೆ. ಫೋಟೋಗೆ ಅನ್ವಯವಾದ ಬೈಬಲ್‌ನಲ್ಲಿರುವ ಸಿದ್ಧಾಂತಗಳನ್ನು ಇದು ಅಪ್‌ಲೋಡ್ ಮಾಡಬೇಕಾಗುತ್ತದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ಹ್ಯಾಂಡ್‌ವ್ರೈಟಿಂಗ್ ಇನ್‌ಪುಟ್

ಗೂಗಲ್ ಹ್ಯಾಂಡ್‌ವ್ರೈಟಿಂಗ್ ಇನ್‌ಪುಟ್

ಸಂದೇಶ ಬರೆಯುವ ಶೈಲಿಯನ್ನು ವೇಗಗೊಳಿಸುತ್ತದೆ. ಇದು 80 ಭಾಷೆಗಳನ್ನು ಗುರುತಿಸುತ್ತದೆ.ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಡೋಬ್ ಫಿಲ್ ಏಂಡ್ ಸೈನ್ ಡಿಸಿ

ಅಡೋಬ್ ಫಿಲ್ ಏಂಡ್ ಸೈನ್ ಡಿಸಿ

ಪೇಪರ್ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ಇದು ಅನುಮತಿಸುತ್ತಿದ್ದು ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್ ಇಲ್ಲವೇ ಟ್ಯಾಬ್ಲೆಟ್ ಕ್ಯಾಮೆರಾವನ್ನು ಬಳಸಿದರೆ ಸಾಕು. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are the 10 essential applications for your smartphone or tablet. This is considered as free and asy to download. These applications giving protection to your smartphone and tablet..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X