Subscribe to Gizbot

10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?

Written By:

ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಬಳಸುತ್ತಾ ಇಂದು ಸದಾಕಾಲ ಆನ್‌ಲೈನ್‌ ಬಳಕೆಯಲ್ಲಿರುವುದು ಮಾಹಿತಿ ತಿಳಿಯುವ, ಸಂವಹನ ಸಂಪರ್ಕ ಹೊಂದುವ, ಮನರಂಜನೆ ಪಡೆಯುವ ದೃಷ್ಟಿಯಿಂದ ಹಿತಕರ. ಆದರೆ ಎಲ್ಲರೂ ಸಹ ಆನ್‌ಲೈನ್‌ ಬಳಕೆಯಲ್ಲಿಯೂ ಸಹ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕಾಗಿದೆ.

ಇಂಟರ್ನೆಟ್‌ ಕಾನೂನು ಎಲ್ಲಾ ದೇಶಗಳಲ್ಲೂ ಇದೆ. ಆ ಕಾನೂನುಗಳನ್ನು ನೀವು ಪಾಲಿಸದಿದ್ದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಬಹುದು. ಈ ಮಾಹಿತಿಯನ್ನು ಇಂದು ನಿಮಗೆ ನೀಡಲು ಕಾರಣವೆಂದರೆ, ಸ್ಥಳೀಯವಾಗಿ ಇರುವ ಇಂಟರ್ನೆಟ್‌ ನಿಯಮಗಳನ್ನು ಸಹ ಪಾಲಿಸದೇ ಶಿಕ್ಷೆಗೆ ಗುರಿಯಾಗುವುದನ್ನು ತಪ್ಪಿಸಲು. ಹಾಗಾದರೆ ನಮ್ಮನ್ನು ಶಿಕ್ಷೆಗೆ ಗುರಿಯಾಗಿಸುವ ಅಂತಹ ಕಾನೂನು ವಿರೋಧಿ ಇಂಟರ್ನೆಟ್‌ ಚಟುವಟಿಕೆ ಯಾವುವು ಎಂದು ನಿಮಗೆ ತಿಳಿಯಬೇಕೆ ? ಈ ಲೇಖನ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮುಕ್ತ ವೈಫೈ ಹೊಂದುವುದು

ಮುಕ್ತ ವೈಫೈ ಹೊಂದುವುದು

ಆರ್ಥಿಕವಾಗಿ ಸುಧಾರಿತರಾದವರು ತಮ್ಮ ಮನೆಗಳಲ್ಲಿ ವೈಫೈ ರೂಟರ್‌ ಹೊಂದುತ್ತಿದ್ದಾರೆ. ಅಂತಹವರು ವೈಫೈ ಅನ್ನು ಮುಕ್ತವಾಗಿ ಹೊಂದುವುದು ಎಂದಿಗೂ ಸಮಸ್ಯೆಯಾಗಿದೆ. ಮುಕ್ತ (ಓಪನ್‌) ವೈಫೈ ಹೊಂದುವುದರಿಂದ ಹಲವರು ನಿಮ್ಮ ವೈಫೈ ನೆಟ್‌ವರ್ಕ್‌ ಅನ್ನು ಭಯೋತ್ಪಾದಕ ಚಟುವಟಿಕೆಗಳಿಗೆ, ಅಪರಾಧ ಕೃತ್ಯಗಳಿಗೆ, ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಇಂಟರ್ನೆಟ್‌ ಬಳಕೆಗೆ ಬಳಸಬಹುದು. ಆದ್ದರಿಂದ ನಿಮ್ಮ ವೈಫೈ ಅನ್ನು ಯಾವಾಗಲು ಪಾಸ್‌ವರ್ಡ್‌ ನೀಡಿ ಸುರಕ್ಷಿತಗೊಳಿಸಿ.

ಹುಡುಕಾಟ ಇತಿಹಾಸ ಡಿಲೀಟ್‌

ಹುಡುಕಾಟ ಇತಿಹಾಸ ಡಿಲೀಟ್‌

ಇಂಟರ್ನೆಟ್ ಹುಡುಕಾಟ ಇತಿಹಾಸ ಡಿಲೀಟ್‌ ಮಾಡುವುದು ಮುಗ್ಧತೆ. ಆದರೆ ಕೆಲವೊಮ್ಮೆ ಇಂಟರ್ನೆಟ್‌ ಇತಿಹಾಸ ಡಿಲೀಟ್‌ ಮಾಡದಿರುವುದು ನೀವು ಇತರರ ಖಾತೆಗಳನ್ನು ಹ್ಯಾಕ್‌ ಮಾಡಿದ್ದೇ ಆದಲ್ಲಿ ಕಂಡಿತ ಶಿಕ್ಷೆಗೆ ಗುರಿಯಾಗುತ್ತೀರಿ. ಅಮೇರಿಕದ ಡೇವಿಡ್‌ ಕರ್ನೆಲ್‌, ಸರಾಹ್‌ ಪಾಲಿನ್‌ ಎಂಬುವವರ ಯಾಹೂ ಖಾತೆಯನ್ನು ಹ್ಯಾಕ್‌ ಮಾಡಿ ತನಿಖೆಯಿಂದ ಸಿಕ್ಕಿಬಿದ್ದು ಈಗ ತನಿಖೆಯಲ್ಲೇ ಇದ್ದಾರೆ.

ಅಪರಾಧ ಪೋಸ್ಟ್‌ಗಳು, ಮಸೇಜ್‌, ಟ್ವೀಟ್ಸ್‌

ಅಪರಾಧ ಪೋಸ್ಟ್‌ಗಳು, ಮಸೇಜ್‌, ಟ್ವೀಟ್ಸ್‌

ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿಯೂ ಸಹ ಅಪರಾಧ ಪೋಸ್ಟ್‌ಗಳು, ಮೆಸೇಜ್‌, ಟ್ವೀಟ್‌ಗಳನ್ನು ಮಾಡುವುದರಿಂದ ಶಿಕ್ಷೆಗೆ ಗುರಿಯಾಗುವಲ್ಲಿ ಸಂಶಯವಿಲ್ಲ. ಉದಾಹರಣೆಗೆ ನೀವು ಈ ಫೋಟೋದಲ್ಲಿ ನೋಡುತ್ತಿರುವ ಹಾಸ್ಯದ ಟ್ವೀಟ್‌ನಿಂದ ವ್ಯಕ್ತಿಯೊಬ್ಬ ಸಮಸ್ಯೆಗೆ ಸಿಲುಕಿದ್ದಾನೆ.

VOIP ಸೇವೆ ಬಳಸುವುದು

VOIP ಸೇವೆ ಬಳಸುವುದು

VOIP ಸೇವೆ ಬಳಸುವುದು ಇತಿಯೋಪಿಯಾದಲ್ಲಿ ನಿರ್ಬಂಧನೆಗೆ ಒಳಗಾಗಿದೆ. ಈ ಸೇವೆ ಸ್ಕೈಪಿಯನ್ನು ಒಳಗೊಂಡಿದೆ. ಭಾರತದಲ್ಲಿ ಈ ಸೇವೆಯನ್ನು ಬಳಸುವುದು ಪ್ರವಾಸಿಗರಿಗೆ ಸೇರಿದಂತೆಯು ಅಪರಾಧವಾಗಿದೆ.

ವೀಡಿಯೋದಲ್ಲಿ ಡ್ಯಾನ್ಸ್‌ ಮಾಡುವುದು

ವೀಡಿಯೋದಲ್ಲಿ ಡ್ಯಾನ್ಸ್‌ ಮಾಡುವುದು

ಇರಾನ್‌ನಲ್ಲಿ ವೀಡಿಯೋದಲ್ಲಿ ಡ್ಯಾನ್ಸ್‌ ಮಾಡುವುದು ಅಪರಾಧವಾಗಿದೆ. ಫೆರಲ್ ವಿಲಿಯಮ್ಸ್ ಹಾಡು "ಹ್ಯಾಪಿ" ವೀಡಿಯೋಗಾಗಿ ಡ್ಯಾನ್ಸ್‌ ಮಾಡಿದಕ್ಕಾಗಿ ಆರು ಮಂದಿ ಶಿಕ್ಷೆಗೆ ಒಳಗಾಗಿದ್ದರು.

ಇಂಟರ್ನೆಟ್‌ನಲ್ಲಿ ವಿಮರ್ಶೆ

ಇಂಟರ್ನೆಟ್‌ನಲ್ಲಿ ವಿಮರ್ಶೆ

ಇಂಟರ್ನೆಟ್‌ನಲ್ಲಿ ಕೆಲವೊಮ್ಮೆ ವಿವಾದಾತ್ಮಕ ವಿಷಯಗಳಿಗೆ ವಿಮರ್ಶೆ ನೀಡುವುದು ಸಮಸ್ಯೆಗೆ ಸಿಲುಕಿಸಬಹುದು. ಈ ನಿಟ್ಟಿನಲ್ಲಿ ಸಿರಿಯಾ ಕಠಿಣವಾದ ಕಾನೂನು ಜಾರಿಮಾಡಿದ್ದು, ಅಲ್ಲಿ ಇಂಟರ್ನೆಟ್‌ನಲ್ಲಿ ಕಮೆಂಟ್‌ ಮಾಡುವುದು ಅಪರಾಧವಾಗಿದೆ.

ಪ್ರಧಾನ ಮಂತ್ರಿಗಳ ವಿರುದ್ಧ ಬರವಣಿಗೆ

ಪ್ರಧಾನ ಮಂತ್ರಿಗಳ ವಿರುದ್ಧ ಬರವಣಿಗೆ

ಥೈಲೆಂಡ್‌ನಲ್ಲಿ ಅಧಿಕಾರಿಗಳು ಅಮೇರಿಕ ವ್ಯಕ್ತಿಯೊಬ್ಬರನ್ನು ಬಂಧಿಸಿತ್ತು. ಕಾರಣ ಅವರು ಪೋಸ್ಟ್ ಒಂದನ್ನು ಭಾಷಾಂತರಿಸಿ ಬರೆದಿದ್ದರು. ಅದು ಅಪರಾಧವಾಗಿ ಕಂಡುಬಂದು ಬಂಧನಕ್ಕೆ ಒಳಾಗಿದ್ದರು. ಕೆಲವೊಂದು ಬ್ಯಾನ್‌ ಆದ ಪುಸ್ತಕಗಳನ್ನು ಭಾಷಂತರಿಸಿ ಬರೆಯುವುದು ಸಹ ಸಮಸ್ಯೆಗೆ ಗುರಿ ಮಾಡಬಹುದಾಗಿದೆ.

ಜೂಜು

ಜೂಜು

ಆನ್‌ಲೈನ್‌ ಜೂಜು ಆಟವು ಹಲವು ದೇಶಗಳಲ್ಲಿ ನಿಷೇಧಗೊಂಡಿದೆ. ಭಾರತದಲ್ಲೂ ಸಹ ಆನ್‌ಲೈನ್‌ ಜೂಜು ಅಧಿಕವಾಗಿ ನಿರ್ಬಂಧಕ್ಕೆ ಒಳಪಟ್ಟಿದೆ. ಆನ್‌ಲೈನ್‌ನಲ್ಲಿ ಜೂಜನ್ನು ಪ್ರಚಾರ ಮಾಡುವುದು ಸಹ ಅಪರಾಧವಾಗಿದೆ.

 ಡಾಕುಮೆಂಟ್ಸ್ ಹಂಚಿಕೆ

ಡಾಕುಮೆಂಟ್ಸ್ ಹಂಚಿಕೆ

ಹಲವು ದೇಶಗಳಲ್ಲಿ ಸಿನಿಮಾಗಳನ್ನು, ಚಿತ್ರಗಳನ್ನು, ಡಾಕುಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಹಂಚಬಹುದು. ಆದರೆ ಭಾರತದಲ್ಲಿ ನಕಲಿ ಮಾಡಿದ ಸಿನಿಮಾ, ಸಂಪೂರ್ಣ ಹಕ್ಕು ಹೊಂದಿರುವ ಚಿತ್ರಗಳ ಬಳಕೆ ಹಂಚಿಕೆ ಅಪರಾಧವಾಗಿದೆ.

ಸಾಹಿತ್ಯವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌

ಸಾಹಿತ್ಯವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌

ಸಾಹಿತ್ಯವನ್ನು ಫೇಸ್‌ಬುಕ್‌ನಲ್ಲಿ ಹಂಚುವಿಕೆ ಅಪರಾಧವಾಗುವುದಿಲ್ಲ. ಆದರೆ ಅಮೇರಿಕದಲ್ಲಿ ವಿದ್ಯಾರ್ಥಿಯೊಬ್ಬ ರಾಪ್‌ ಸಾಹಿತ್ಯವನ್ನು ಪೋಸ್ಟ್‌ ಮಾಡಿದಕ್ಕಾಗಿ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Online Activities That can get you Arrested. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot